ಬೆಂಗಳೂರು, ಆಗಸ್ಟ್ 30:ಥಲಸ್ಸೇಮಿಯಾ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಸತ್ವ ಗ್ರೂಪ್ ಮತ್ತು ಸಂಕಲ್ಪ್ ಇಂಡಿಯಾ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಮೂರು ತಿಂಗಳ ಕಾಲ ನಡೆದ ರಕ್ತದಾನ ಅಭಿಯಾನದಲ್ಲಿ 350 ಕ್ಕೂ ಅಧಿಕ ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ.
ವಿಶ್ವ ಥಲಸ್ಸೇಮಿಯಾ ದಿನದಂದು ಸತ್ವ ನಾಲೆಡ್ಜ್ ಕೋರ್ಟ್ನಲ್ಲಿ ಈ ಅಭಿಯಾನ ಆರಂಭವಾಗಿದ್ದು, ಬಳಿಕ ಸತ್ವ ಮೈಂಡ್ ಕಾಂಪ್ ಟೆಕ್ ಪಾರ್ಕ್ ಹಾಗೂ ಸತ್ವ ಗ್ಲೋಬಲ್ ಸಿಟಿಯಲ್ಲಿಯೂ ನಡೆಯಿತು. ಅಂತಿಮ ಹಂತದ ಶಿಬಿರ ಜುಲೈ 24ರಂದು ಸತ್ವ ಸಾಫ್ಟ್ಜೋನ್ ಟೆಕ್ ಪಾರ್ಕ್ನಲ್ಲಿ ಜರುಗಿದ್ದು, ಈ ಮೂಲಕ ಮೂರು ತಿಂಗಳ ಅಭಿಯಾನಕ್ಕೆ ತೆರೆ ಬಿದ್ದಿದೆ.
ಸತ್ವ ಗ್ರೂಪ್ನ ಕಾರ್ಯತಂತ್ರ ಮತ್ತು ಬೆಳವಣಿಗೆ ಉಪಾಧ್ಯಕ್ಷ ಶಿವಂ ಅಗರ್ವಾಲ್ ಮಾತನಾಡಿ, “ಈ ಉಪಕ್ರಮವು ಕಾರ್ಪೋರೇಟ್ ಸಂಸ್ಥೆಗಳು ಸಮಾಜದಲ್ಲಿ ಅರ್ಥಪೂರ್ಣ ಬದಲಾವಣೆ ತರಬಲ್ಲವು ಎಂಬುದಕ್ಕೆ ಉದಾಹರಣೆ. ಬಾಡಿಗೆದಾರರು ಹಾಗೂ ನೌಕರರನ್ನು ಒಟ್ಟುಗೂಡಿಸುವ ಮೂಲಕ ಸಾಮೂಹಿಕ ಪರಿಣಾಮ ತಂದುಕೊಡಲು ಸಾಧ್ಯವಾಯಿತು. ಸಂಗ್ರಹಿಸಲಾದ ಪ್ರತಿಯೊಂದು ಹನಿ ರಕ್ತವೂ ಥಲಸ್ಸೇಮಿಯಾ ಪೀಡಿತ ಮಕ್ಕಳ ಬದುಕಿಗೆ ಭರವಸೆಯಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಕಲ್ಪ್ ಇಂಡಿಯಾ ಫೌಂಡೇಶನ್ ಅಧ್ಯಕ್ಷ ರಜತ್ ಕುಮಾರ್ ಅಗರ್ವಾಲ್ ಹೇಳುವಂತೆ, “ಸಕಾಲಿಕ ರಕ್ತವರ್ಗಾವಣೆಗೆ ಅವಲಂಬಿಸಿಕೊಂಡಿರುವ 2,500 ಕ್ಕೂ ಹೆಚ್ಚು ಮಕ್ಕಳಿಗೆ ಈ ಅಭಿಯಾನ ರಕ್ತಕ್ಕಿಂತ ಹೆಚ್ಚಾಗಿ ಧೈರ್ಯ ಮತ್ತು ವಿಶ್ವಾಸ ತುಂಬಿದೆ. ಬೆಂಬಲ ನೀಡಿದ ಸತ್ವ ಗ್ರೂಪ್ ಹಾಗೂ ಪ್ರತಿಯೊಬ್ಬ ರಕ್ತದಾನಿಗಳಿಗೆ ನಾವು ಧನ್ಯವಾದ ಸಲ್ಲಿಸುತ್ತೇವೆ” ಎಂದರು.
ಈ ಅಭಿಯಾನದಲ್ಲಿ ಪ್ರತಿಯೊಬ್ಬ ದಾನಿಗೂ ರಕ್ತದಾನಕ್ಕೂ ಮುನ್ನ ಥಲಸ್ಸೇಮಿಯಾ ಕುರಿತು ಜಾಗೃತಿ, ಆರೋಗ್ಯ ತಪಾಸಣೆ ಹಾಗೂ ತಜ್ಞರ ಸಲಹೆ ಒದಗಿಸಲಾಯಿತು. ಸುರಕ್ಷತೆ, ಸಹಭಾಗಿತ್ವ ಮತ್ತು ಜಾಗೃತಿಯೊಂದಿಗೆ ನಡೆಸಿದ ಈ ಅಭಿಯಾನಕ್ಕೆ ಉದ್ಯೋಗಿಗಳಿಂದ ಹೆಚ್ಚಿನ ಬೆಂಬಲ ದೊರೆತಿದೆ.
ಸತ್ವ ಮತ್ತು ಸಂಕಲ್ಪ್ ಇಂಡಿಯಾ ಫೌಂಡೇಶನ್ ಅಭಿಯಾನವನ್ನು ಯಶಸ್ವಿಗೊಳಿಸಿದ ದಾನಿಗಳು, ಸ್ವಯಂಸೇವಕರು ಹಾಗೂ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದೆ.

[…] ಥಲಸ್ಸೇಮಿಯಾ ರೋಗಿಗಳ ಬೆಂಬಲಕ್ಕೆ ‘ಸತ್ವ ಸಂ… […]