ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಮಾರ್ಕಹಳ್ಳಿ ಗ್ರಾಮದಲ್ಲಿ ಬೃಹತ್ ಗಾತ್ರದ ವಿಷಕಾರಿ ಕಾಳಿಂಗ ಸರ್ಪವನ್ನು ಮಂಗಳವಾರ ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.
ಗ್ರಾಮದ ಕಾಫಿ ತೋಟದಲ್ಲಿ ಅಡಗಿ ಸುಮಾರು 12 ಅಡಿ ಉದ್ದದ ಈ ಭಾರೀ ಹಾವು ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿತ್ತು. ಮಾಹಿತಿ ಲಭಿಸುತ್ತಲೇ ಉರಗ ತಜ್ಞ ಚಂಗಡಿಹಳ್ಳಿ ರವಿ ಸ್ಥಳಕ್ಕೆ ತೆರಳಿ, ಗ್ರಾಮಸ್ಥರ ಸಹಕಾರದೊಂದಿಗೆ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದರು.
ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಮ್ಮುಖದಲ್ಲಿ ಕಾಳಿಂಗ ಸರ್ಪವನ್ನು ಬಿಸಿಲೆ ದಟ್ಟಾರಣ್ಯಕ್ಕೆ ಬಿಟ್ಟುಬಿಡಲಾಯಿತು. ಈ ಕ್ರಮದಿಂದ ಗ್ರಾಮಸ್ಥರು ಆತಂಕದಿಂದ ಮುಕ್ತಿ ಹೊಂದಿದ್ದಾರೆ.
ಸ್ಥಳೀಯರು ಹಾವು ಸೆರೆ ಹಿಡಿದ ರವಿ ಅವರ ಧೈರ್ಯ ಹಾಗೂ ತಕ್ಷಣದ ಕ್ರಮವನ್ನು ಮೆಚ್ಚಿಕೊಂಡಿದ್ದಾರೆ.
