ಟಿ.ನರಸೀಪುರ : ಚೆನೈ ನ ಪ್ರತಿಷ್ಟಿತ ಫೋರ್ ಸ್ಟಾರ್ ಐಟಿಸಿ ಹೋಟೆಲ್ ನಲ್ಲಿ ಜರುಗಿದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಬಿ.ಮರಯ್ಯರವರಿಗೆ ಅವರ ಸಮಾಜ ಸೇವೆಯನ್ನು ಗುರುತಿಸಿ ಏಷ್ಯಾ ಇಂಟರ್ ನೆಟ್ ಕಲ್ಚರ್ ಸೆಟ್ ಅಕ್ಯಾಡೆಮಿ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ.
ಈ ಸಂದರ್ಭದಲ್ಲಿ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತರಾದ ಬಿ.ಮರಯ್ಯ ರವರು ಮಾತನಾಡಿ ಕಳೆದ ನಲವತ್ತು ವರ್ಷಗಳಿಂದ ರಾಜಕೀಯ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಮಾದಿಗ ಸಮುದಾಯದದಿಂದ ಡಾಕ್ಟರೇಟ್ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಷಯವಾಗಿದೆ.
ಪಟ್ಟಣದ ಬೈರಾಪುರ ವೃತ್ತದಲ್ಲಿ ಡಾ.ಬಾಬುಜಗಜೀವನರಾಂ ಪುತ್ಥಳಿಯನ್ನು ನಮ್ಮ ಕುಟುಂಬದ ವತಿಯಿಂದ ನಿರ್ಮಾಣ ಮಾಡಿ ಸಮಾಜದ ಬಂಧುಗಳು ಕಾರ್ಯವನ್ನು ಶ್ಲಾಘಿಸಿದ್ದಾರೆ.ಪ್ರಶಸ್ತಿಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ.ಡಾಕ್ಟರೇಟ್ ಪ್ರಶಸ್ತಿಯನ್ನು ಪಡೆಯಲು ನಾನು ಅರ್ಹನೆಂದು ಅಕ್ಯಾಡೆಮಿ ಗುರ್ತಿಸಿದೆ.ಅದಕ್ಕೆ ನಾನು ತಲೆಬಾಗಿ ಪ್ರಶಸ್ತಿ ಸ್ವೀಕರಿಸಿದ್ದೇನೆಂದರು.ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಸಮಾಜ ಸೇವೆ ಮಾಡುತ್ತಾ ಬರುತ್ತಿದ್ದೇನೆ.ಡಾ.ಬಿ.ಆರ್.ಅಂಬೇಡ್ಕರ್ ರವರು,ಡಾ.ಬಾಬುಜಗಜೀವನರಾಂ ರವರು ಹಾಗೂ ಇನ್ನಿತರೆ ಸಮಾಜ ಸುಧಾರಕ ಮಹಾನ್ ವ್ಯಕ್ತಿಗಳ ದೇಯ್ಯೋದ್ದೇಶಗಳನ್ನು ಪಾಲಿಸಿಕೊಂಡು ನನ್ನ ಕೈಲಾದ ಅಳಿಲು ಸೇವೆ ಸಮಾಜಕ್ಕೆ ಮೀಸಲಾಗಿರುತ್ತದೆಂದರು.

ಮಾದಿಗ ಸಮುದಾಯದಿಂದ ನಮ್ಮ ಟಿ.ನರಸೀಪುರ ತಾಲ್ಲೂಕಿನಲ್ಲಿ ಹಲವಾರು ಗಣ್ಯರು ತಮ್ಮ,ತಮ್ಮ ಕ್ಷೇತ್ರಗಳಲ್ಲಿ ಹಲವಾರು ಸಮಾಜ ಸೇವೆ ಮಾಡುವ ಮೂಲಕ ನನ್ನಂತಹವರಿಗೆ ಮಾದರಿಯಾಗಿದ್ದರು.ಅವರ ಹಾದಿಯಲ್ಲಿ ನಡೆದು ನಾನೂ ಕೂಡ ಸಮಾಜಮುಖಿ ಕೆಲಸಗಳಲ್ಲಿ ಅಂದು,ಇಂದು,ಮುಂದೆಯೂ ನಿರಂತರವಾಗಿ ಸಮಾಜಸೇವೆ ಮುಂದುವರಿಯಲಿದೆ.ಈ ಪ್ರಶಸ್ತಿಯನ್ನು ನಮ್ಮ ಸಮುದಾಯ ಹಾಗೂ ತಾಲ್ಲೂಕಿನ ಜನತೆಗೆ ಅರ್ಪಿಸುತ್ತೇನೆಂದರು.
ಎಂ.ನಾಗೇಂದ್ರಕುಮಾರ್
