ಚನ್ನರಾಯಪಟ್ಟಣ: ಪುರಸಭೆ ವ್ಯಾಪ್ತಿಯಲ್ಲಿ ವಿದ್ಯುತ್ ಇಲಾಖೆಯಿಂದ 10 ಕೋಟಿ ರೂ. ವೆಚ್ಚದ ಎಲ್ಟಿ (LT) ಹಾಗೂ ಎಚ್ಟಿ (HT) ಕವರ್ ಕೇಬಲ್ ಅಳವಡಿಕೆ ಕಾಮಗಾರಿಗೆ ಶಾಸಕರಾದ ಸಿ.ಎನ್. ಬಾಲಕೃಷ್ಣ ಅವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಗರದ ಎಲ್ಲಾ ಹಳೆಯ ತಂತಿಗಳನ್ನು ತೆಗೆದು ಹೊಸ ಕೇಬಲ್ಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ವಿದ್ಯುತ್ ಅಡಚಣೆ ಹಾಗೂ ಅಪಘಾತಗಳ ಸಂಭವ ಕಡಿಮೆಯಾಗುತ್ತದೆ. ಪವರ್ ಮ್ಯಾನ್ಗಳಿಗೂ ಕೆಲಸ ಸುಲಭವಾಗುತ್ತದೆ. ಈ ಕಾಮಗಾರಿಯಲ್ಲಿ 60 ಕಿಮೀ ವ್ಯಾಪ್ತಿಗೆ ಎಚ್ಟಿ ಕೇಬಲ್ ಹಾಗೂ 80 ಕಿಮೀ ವ್ಯಾಪ್ತಿಗೆ ಎಲ್ಟಿ ಕವರ್ ಕೇಬಲ್ ಅಳವಡಿಸಲಾಗುವುದು,” ಎಂದರು.
ಈ ಯೋಜನೆಗೆ ಸೆಸ್ಕಾಂ ವತಿಯಿಂದ 10 ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿಯನ್ನು ಎ ಎಲ್ ರಾಯಲ್, ಬೆಂಗಳೂರು ಸಂಸ್ಥೆ ನಿರ್ವಹಿಸಲಿದೆ.
ಶಾಸಕರು ಮುಂದುವರಿದು, “ಚನ್ನರಾಯಪಟ್ಟಣವು ಹಾಸನ ಜಿಲ್ಲೆಯಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಈ ಹಿನ್ನೆಲೆಯಲ್ಲಿ ನಮ್ಮ ಬೇಡಿಕೆಗೆ ವಿದ್ಯುತ್ ಇಲಾಖೆ ಸ್ಪಂದಿಸಿದೆ. ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಶೀಘ್ರದಲ್ಲೇ ಯುಜಿಕೇಬಲ್ ಅಳವಡಿಕೆಗೆ 5 ಕೋಟಿ ರೂ. ಅನುದಾನ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚೆಸ್ಕಾಂ ಇಂಜಿನಿಯರ್ಗಳು ಶ್ರೀಮತಿ ರತ್ನ, ಹರೀಶ್, ಪುರಸಭೆ ಅಧ್ಯಕ್ಷ ಕೋಟೆ ಮೋಹನ್, ಉಪಾಧ್ಯಕ್ಷೆ ಕವಿತಾ ರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್, ಸದಸ್ಯರು ರಾಮಕೃಷ್ಣ, ಲಕ್ಷ್ಮಿ, ಇಲಿಯಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಮಂಜುನಾಥ್ ಐ ಕೆ

[…] ವಿಡಿಯೋ ನೋಡಿ: ಚನ್ನರಾಯಪಟ್ಟಣದಲ್ಲಿ 10 ಕೋಟಿ… […]