ನವದೆಹಲಿ: ತಮ್ಮ ಪ್ರಚಾರ, ವ್ಯಕ್ತಿತ್ವದ ಹಕ್ಕುಗಳನ್ನು ರಕ್ಷಿಸುವಂತೆ ಕೋರಿ ಬಾಲಿವುಡ್ ನಟಿ ಐಶ್ವರ್ಯಾ ರೈ, ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ನ್ಯಾಯಮೂರ್ತಿ ತೇಜಸ್ ಕರಿಯಾ ಅವರು, ಈ ಸಂಬಂಧ ಎಚ್ಚರಿಕೆ ನೀಡುವ ಮಧ್ಯಂತರ ಆದೇಶವನ್ನು ಹೊರಡಿಸುವುದಾಗಿ ಮೌಖಿಕವಾಗಿ ಸುಳಿವು ನೀಡಿದ್ದಾರೆ.
ರೈ ಪರವಾಗಿ ಹಾಜರಾದ ಹಿರಿಯ ವಕೀಲ ಸಂದೀಪ್ ಸೇಥಿ, ನಟಿ ತಮ್ಮ ಪ್ರಚಾರ ಮತ್ತು ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗೆ ಪ್ರಯತ್ನಿಸುತ್ತಿದ್ದಾರೆ. ಕೆಲವು ಸಂಪೂರ್ಣವಾಗಿ ಅವಾಸ್ತವಿಕ ಅಶ್ಲೀಲ ಚಿತ್ರಗಳನ್ನು ಇಂಟರ್ನೆಟ್ನಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂದು ವಾದಿಸಿದ್ದಾರೆ.
ರೈ ಅವರ ಚಿತ್ರಗಳು, ವ್ಯಕ್ತಿತ್ವವನ್ನು ಬಳಸಿಕೊಳ್ಳಲು ಯಾರಿಗೂ ಯಾವುದೇ ಹಕ್ಕಿಲ್ಲ. ಚಿತ್ರವನ್ನು ಮಾರ್ಫ್ ಮಾಡಿ ಅವರ ಮುಖ ಮತ್ತು ಹೆಸರನ್ನು ಬಳಸಿ ಲಾಭ ಮಾಡಿಕೊಳ್ಳಲಾಗುತ್ತಿದೆ ಎಂದೂ ವಾದಿಸಿದ್ದಾರೆ.
‘ಅವರ ಹೆಸರು ಮತ್ತು ಹೋಲಿಕೆಯನ್ನು ಬಳಸಿ ಯಾರದ್ದೋ ಲೈಂಗಿಕ ಆಸೆಗಳನ್ನು ಪೂರೈಸಲಾಗುತ್ತಿದೆ. ಇದು ದುರದೃಷ್ಟಕರ’ಎಂದು ಅವರು ಹೇಳಿದ್ದಾರೆ.
