ಕೆ.ಆರ್.ಪೇಟೆ: ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಗೋವಿಂದನಹಳ್ಳಿ ಕೊಪ್ಪಲು ಗ್ರಾಮದ ನಿವಾಸಿ ವಿರೂಪಾಕ್ಷ (35) ರವರು ಕಳೆದ ಎರಡು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ನಿಧನರಾದ ಹಿನ್ನೆಲೆ ಮೃತರ ನಿವಾಸಕ್ಕೆ ಸಮಾಜ ಸೇವಕ ಹಾಗೂ ಆರ್.ಟಿ.ಓ ಸಂಘದ ರಾಜ್ಯಾಧ್ಯಕ್ಷರಾದ ಆರ್.ಟಿ.ಓ ಮಲ್ಲಿಕಾರ್ಜುನ್ ರವರು ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿ ಆರ್ಥಿಕ ಸಹಾಯ ನೀಡಿ ಮಾನವೀಯತೆ ಮೆರೆದ ಬಳಿಕ ಮಾತನಾಡಿದ ಅವರು ರಸ್ತೆಯಲ್ಲಿ ಸಂಚರಿಸುವಾಗ ಕೆಲ ಸಣ್ಣ ತಪ್ಪುಗಳಿಂದ ಕುಟುಂಬಕ್ಕೆ ಆಧಾರವಿದ್ದ ವ್ಯಕ್ತಿಗಳು ಆಕಸ್ಮಿಕ ಜರಗುವ ರಸ್ತೆ ಅಪಘಾತಕ್ಕೆ ತುತ್ತಾಗಿ ಕುಟುಂಬವೇ ಸಂಕಷ್ಟಕ್ಕೆ ಸಿಲುಕುತ್ತದೆ ಹಾಗಾಗಿ ವಾಹನದ ಮೂಲಕ ಸಂಚರಿಸುವ ಪ್ರತಿಯೊಬ್ಬ ಸವಾರರು ಜಾಗೃತಿಯಿಂದ ಸಾರಿಗೆ ಇಲಾಖೆಯ ನಿಯಮಗಳನ್ನು ತಪ್ಪದೇ ಪಾಲಿಸಿ ತಮ್ಮ ಅಮೂಲ್ಯವಾದ ಜೀವಗಳನ್ನು ಕಾಪಾಡಿಕೊಳ್ಳಲು ಜಾಗೃತರಾಗಿ ವಾಹನ ಚಲಾಯಿಸಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯರಾದ ಶ್ಯಾಮಣ್ಣ,ಕೆಂಪಣ್ಣ,ಮುಖಂಡ ಕೇಬಲ್ ಗುಂಡ, ಮಿಲ್ ಮಾದೇವ, ಜಿ ಎಸ್ ಶಂಭುಲಿಂಗು, ಮಹೇಶ್, ಆನಂದ್, ತಮಯ್ಯ, ಬಸವರಾಜ್, ಚಿಕಣ್ಣ ರಮೇಶ್, ಧನಂಜಯ್,ಚಂದ್ರಣ್ಣ, ಮೃತರ ಪತ್ನಿ ಚಂದ್ರಕಲ,ಚಂದ್ರ,ಡೇರಿ ಆನಂದ,ಶ್ರೀನಿವಾಸ್, ಅಪ್ಪಣ್ಣ ಮಾದೇವ,ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
