ಬೆಂಗಳೂರು: ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಬುಡಕಟ್ಟು (Tribal) ಕಲೆ ಮತ್ತು ಸಂಸ್ಕೃತಿಯ ಸಂರಕ್ಷಣೆಗೆ ‘ಆದಿ ಸಂಸ್ಕೃತಿ’ ಎಂಬ ಹೊಸ ಡಿಜಿಟಲ್ ವೇದಿಕೆಯನ್ನು ಪ್ರಾರಂಭಿಸಲಿದೆ. ಈ ವೇದಿಕೆಯಲ್ಲಿ ಮೂರು ಪ್ರಮುಖ ಘಟಕಗಳು ಸೇರಿವೆ: ಆದಿ ವಿಶ್ವವಿದ್ಯಾಲಯ (ಡಿಜಿಟಲ್ ಶಿಕ್ಷಣ), ಆದಿ ಸಂಪದ (ಸಾಂಸ್ಕೃತಿಕ ಆರ್ಕೈವ್) ಮತ್ತು ಆದಿ ಹಾತ್ (ಆನ್ಲೈನ್ ಮಾರುಕಟ್ಟೆ).
ಇತ್ತೀಚಿಗೆ ಭಾರತದ ಮೊದಲ AI ಆಧಾರಿತ ಆದಿವಾಸಿ ಭಾಷಾ ಅನುವಾದಕವಾದ ಆದಿ ವಾಣಿ ಪ್ಲಾಟ್ಫಾರ್ಮ್ನ ಬೆಟಾ ಆವೃತ್ತಿಯು ಕೂಡ ಆದಿವಾಸಿ ವ್ಯವಹಾರಗಳ ಸಚಿವಾಲಯದ ವತಿಯಿಂದ ಬಿಡುಗಡೆ ಮಾಡಲಾಯಿತು. ಈ ವೇದಿಕೆ ಮೂಲಕ ಆದಿವಾಸಿ ಭಾಷೆಗಳು, ಸಂಸ್ಕೃತಿ, ಕಲೆ ಮತ್ತು ಪರಂಪರೆಯ ಮಾಹಿತಿಯನ್ನು ಡಿಜಿಟಲ್ ತಂತ್ರಜ್ಞಾನ ಮೂಲಕ ಸಂರಕ್ಷಿಸುವುದು ಹಾಗೂ ಸಾಮಾಜಿಕ ಮತ್ತು ಆರ್ಥಿಕವಾಗಿ ಸಹಾಯ ಮಾಡಲು ಯೋಜಿಸಲಾಗಿದೆ.
ಸಂಸ್ಕೃತಿಯ ಉಳಿವಿಗೆ ಮತ್ತು ಆದಿವಾಸಿ ಸಮುದಾಯದ ಕಲೆಯನ್ನು ವಿಸ್ತರಿಸಲು ಈ ಡಿಜಿಟಲ್ ವೇದಿಕೆ ಮಹತ್ವಪೂರ್ಣ ಸಾಧನವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.
