ಬೆಂಗಳೂರು: ಚಿನ್ನದ ಬೆಲೆಗಳು ದಾಖಲೆ ಮಟ್ಟದಲ್ಲಿ ಏರಿಕೆಯಾಗಿರುವ ಸಮಯದಲ್ಲಿ, ಭಾರತಕ್ಕೆ ಭರ್ಜರಿ ಸುದ್ದಿ ಹೊರಬಿದ್ದಿದೆ. ದೇಶದಲ್ಲಿ ದೊಡ್ಡ ಪ್ರಮಾಣದ ಹೊಸ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಈ ಬೆಳವಣಿಗೆ ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮಾರ್ಚ್ 31, 2025ರ ವರದಿ ಪ್ರಕಾರ, ಭಾರತದ ಒಟ್ಟು ಚಿನ್ನದ ನಿಕ್ಷೇಪ ಸುಮಾರು 879.58 ಮೆಟ್ರಿಕ್ ಟನ್ ಆಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣ ಕರ್ನಾಟಕ ರಾಜ್ಯದಿಂದ ಲಭ್ಯವಾಗಿದೆ.
ದೇಶದ ಪ್ರಮುಖ ಚಿನ್ನದ ಗಣಿಗಳು
-
ಹಟ್ಟಿ ಚಿನ್ನದ ಗಣಿ – ರಾಯಚೂರು, ಕರ್ನಾಟಕ
-
ದೇಶದ ಅತಿ ದೊಡ್ಡ ಹಾಗೂ ಸಕ್ರಿಯ ಚಿನ್ನದ ಗಣಿ.
-
ಹಟ್ಟಿ ಗೋಲ್ಡ್ ಮೈನ್ಸ್ ಲಿಮಿಟೆಡ್ ಈ ಗಣಿಯನ್ನು ನಿರ್ವಹಿಸುತ್ತದೆ.
-
ವಾರ್ಷಿಕ ಉತ್ಪಾದನೆ: ಸುಮಾರು 1.8 ಟನ್.
-
2,000 ವರ್ಷಗಳ ಇತಿಹಾಸ ಹೊಂದಿರುವ ಈ ಗಣಿ ಇಂದಿಗೂ ಚಿನ್ನ ಉತ್ಪಾದನೆ ಮಾಡುತ್ತಿದೆ.
-
-
ಕೋಲಾರ ಚಿನ್ನದ ಗಣಿ (ಕೆಜಿಎಫ್) – ಕೋಲಾರ, ಕರ್ನಾಟಕ
-
ಹಿಂದೊಮ್ಮೆ ಭಾರತದ ಅತಿದೊಡ್ಡ ಚಿನ್ನದ ಗಣಿ.
-
1880ರ ದಶಕದಲ್ಲಿ ಬ್ರಿಟಿಷರು ಇಲ್ಲಿ ಸುಮಾರು 800 ಟನ್ ಚಿನ್ನ ಉತ್ಪಾದಿಸಿದರು.
-
2001ರಲ್ಲಿ ಆರ್ಥಿಕ ನಷ್ಟದಿಂದ ಗಣಿಗಾರಿಕೆ ಸ್ಥಗಿತಗೊಂಡಿತು.
-
-
ರಾಮಗಿರಿ ಚಿನ್ನದ ಗಣಿಗಳು – ಅನಂತಪುರ, ಆಂಧ್ರಪ್ರದೇಶ
-
ಹಿಂದೆ ವ್ಯಾಪಕ ಗಣಿಗಾರಿಕೆ ನಡೆದಿದ್ದು,
-
ಪ್ರಸ್ತುತ ಉತ್ಪಾದನೆ ಕಡಿಮೆಯಾಗಿದ್ರೂ ನೆಲದಡಿಯಲ್ಲಿ ಚಿನ್ನದ ನಿಕ್ಷೇಪಗಳಿವೆ ಎಂದು ವರದಿಗಳು ಸೂಚಿಸುತ್ತವೆ.
-
-
ಹೆಗ್ಗಡದೇವನಕೋಟೆ ಚಿನ್ನದ ಗಣಿ – ಮೈಸೂರು, ಕರ್ನಾಟಕ
-
ಪ್ರಸ್ತುತ ಗಣಿಗಾರಿಕೆ ಇಲ್ಲ.
-
ಸಮೀಕ್ಷೆ ಕಾರ್ಯಾಚರಣೆ ನಡೆಯುತ್ತಿದ್ದು, ಭವಿಷ್ಯದಲ್ಲಿ ಉತ್ಪಾದನೆ ಆರಂಭವಾಗುವ ನಿರೀಕ್ಷೆ.
-
-
ಚಿತ್ತೂರು ಚಿನ್ನದ ಗಣಿಗಳು – ಆಂಧ್ರಪ್ರದೇಶ
-
ರಾಮಗಿರಿ ಗಣಿಗಳಿಗೆ ಸಂಪರ್ಕ ಹೊಂದಿದ ಪ್ರದೇಶ.
-
ಪ್ರಸ್ತುತ ಗಣಿಗಾರಿಕೆ ಚಟುವಟಿಕೆ ಇಲ್ಲ.
-
ಚಿನ್ನದ ಬೆಲೆಯ ಮೇಲೆ ಪರಿಣಾಮ
ತಜ್ಞರ ಪ್ರಕಾರ, ಹೊಸ ಚಿನ್ನದ ನಿಕ್ಷೇಪ ಪತ್ತೆಯಾಗಿ ಉತ್ಪಾದನೆ ಹೆಚ್ಚಾದರೆ,
-
ಚಿನ್ನದ ಬೆಲೆ ಇಳಿಯುವ ಸಾಧ್ಯತೆ ಹೆಚ್ಚಿದೆ.
-
ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಆಮದು ಅವಲಂಬನೆ ಕಡಿಮೆಯಾಗಬಹುದು.
-
ಭಾರತ ಚಿನ್ನದ ಉತ್ಪಾದನೆಯಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಸ್ಥಾನ ಪಡೆಯಬಹುದು.
