ಚನ್ನರಾಯಪಟ್ಟಣ:ಸೇವೆಗೆ ಮತ್ತೊಂದು ಹೆಸರೇ ಲಯನ್ಸ್ ಸೇವಾ ಸಂಸ್ಥೆ ಆಗಿದೆ ಎಂದು ಮಾಜಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಅಣತಿ ಆನಂದ್ ಹೇಳಿದ್ದಾರು.
ಪಟ್ಟಣದ ಲಯನ್ಸ್ ಸೇವಾ ಸಂಸ್ಥೆ ವತಿಯಿಂದ ಪುಣ್ಯ ಆಸ್ಪತ್ರೆ ಸಭಾಂಗಣದಲ್ಲಿ ಅಬಲರು,ಕಡು ಬಡವರು, ಆಟೋ ಚಾಲಕರು, ಕೂಲಿ ಕಾರ್ಮಿಕರು ಸೇರಿದಂತೆ ಅನೇಕ ಮಂದಿಗೆ ಲಯನ್ಸ್ ಸೇವಾ ಸಂಸ್ಥೆಯ ಪರವಾಗಿ ಆಹಾರದ ಕಿಟ್ ಗಳನ್ನು ವಿತರಣೆ ಮಾಡಲಾಯಿತು.ಲಯನ್ಸ್ ಸಂಸ್ಥೆಯ ಮೂಲಕ ಸೇವೆ ಮಾಡಿದರೆ ಬಡವರಿಗೆ ತಲುಪುತ್ತದೆ ಎಂದರು.
ಲಯನ್ಸ್ ವಿಭಾಗ ಮಟ್ಟದ ಅಧ್ಯಕ್ಷ ಹಾಗೂ ಕೀಲು ಮತ್ತು ಮೂಳೆ ತಜ್ಞರಾದ ಡಾ. ವಿ ಮಹೇಶ್ ಮಾತನಾಡಿ, ಲಯನ್ಸ್ ಸೇವಾ ಸಂಸ್ಥೆ ದೇಶಾದ್ಯಂತ, ಸಾಂಕೇತಿಕವಾಗಿ ಈ ಕಾರ್ಯಕ್ರಮ ನಡೆಸುತ್ತಿದೆ, ಒಂದು ದಿನ ಕಿಟ್ ನೀಡುವ ಮೂಲಕ ಬಡತನ ಅಳಿಸಲಾಗದು. ಆದರೆ ಸೇವೆಯ ಮನೋಭಾವ ಬೆಳೆಸುವುದು ಇದಾಗಿದೆ.
ಲಯನ್ಸ್ ಸೇವಾ ಸಂಸ್ಥೆಯ ಅಳಿಲು ಸೇವೆ ಇದಾಗಿದೆ. ಎರಡುವರೆ ಸಾವಿರ ಮೌಲ್ಯದ ಆಹಾರದ ಕಿಟ್ ನಲ್ಲಿ 19 ಪದಾರ್ಥಗಳನ್ನು ಬಡವರಿಗೆ ನೀಡುವ ಕಾರ್ಯ ಇದಾಗಿದೆ ಎಂದರು.
ಲಯನ್ಸ್ ಸೇವಾ ಸಂಸ್ಥೆಯ ಅಧ್ಯಕ್ಷ ಹಾಗೂ ವಕೀಲರಾದ ಗಿರೀಶ್, ಲಯನ್ಸ್ ಸೇವಾ ಸಂಸ್ಥೆಯ ಪದಾಧಿಕಾರಿಗಳಾದ ಗೋವಿಂದರಾಜ್, ತಿಮ್ಮಶೆಟ್ಟರು, ಡಿ ಕೆ ಮಂಜುನಾಥ್, ತಮ್ಮಯ್ಯಣ್ಣ, ಪುರಿ ಮಂಜಣ್ಣ , ಮಖಾನ್ ಬಾಬು,ಸೇರಿದಂತೆ ಇತರರು ಹಾಜರಿದ್ದರು.
ವರದಿ : ಮಂಜುನಾಥ್ ಐ ಕೆ
