ಚನ್ನರಾಯಪಟ್ಟಣ: ಡಾ.ಎ.ಪಿಜೆ ಅಬ್ದುಲ್ ಕಲಾಂ ಫೌಂಡೇಶನ್ (ರಿ ) ವತಿಯಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಚನ್ನರಾಯಪಟ್ಟಣ ಇವರ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಪ್ರಥಮ ಚಿಕಿತ್ಸಾ ದಿನಾಚರಣೆಯ ಅಂಗವಾಗಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು,
ಈ ಕಾರ್ಯಕ್ರಮವನ್ನು ಶ್ರೀ ಭರತ್ ಕುಮಾರ್ ಹೆಚ್.ಜಿ ಚೇರ್ಮನ್ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಚನ್ನರಾಯಪಟ್ಟಣ,
ಶ್ರೀ ಡಾ.ಶಹಬಾಜ್ ಬೇಗ್ ಫಿಜಿಷಿಯನ್ ನವಜೀವನ್ ಕ್ಲಿನಿಕ್ ಚನ್ನರಾಯಪಟ್ಟಣ,
ಶ್ರೀಮತಿ ಡಾ.ಭವ್ಯ ಸುನಿಲ್ ವೈ .ಆರ್ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಶಿವ್ಯ ಆಸ್ಪತ್ರೆ, ಹಾಸನ, ಶ್ರೀ ಮುನಾವರ್ ಪಾಶ ಅಧ್ಯಕ್ಷರು ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಫೌಂಡೇಶನ್ ಚನ್ನರಾಯಪಟ್ಟಣ, ಶ್ರೀ ಜಬಿವುಲ್ಲಾ ಬೇಗ್ ಕಾರ್ಯದರ್ಶಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಚನ್ನರಾಯಪಟ್ಟಣ ಹಾಗೂ ಶ್ರೀ ಡಾ.ಪವನ್ ಶ್ರೀನಿವಾಸ್ ಕ್ಲಿನಿಕ್ ಚನ್ನರಾಯಪಟ್ಟಣ ಮತ್ತು ವೇದಿಕೆ ಗಣ್ಯರು ಉದ್ಘಾಟಿಸಿದರು,
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭರತ್ ಕುಮಾರ್ ಹೆಚ್.ಜಿ ರವರು ಇಂದು ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಫೌಂಡೇಶನ್ ಸಂಸ್ಥೆಯ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಎಲ್ಲರಿಗೂ ತಿಳಿದಿರುವ ಹಾಗೆ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರವರು ನಮ್ಮ ದೇಶದ ಆಸ್ತಿ ಎ.ಪಿ.ಜೆ ಅಬ್ದುಲ್ ಕಲಾಂ ರವರು ಯಾವುದೇ ಜಾತಿ ಭೇದ ಭಾವವಿಲ್ಲದೆ ಸರ್ವ ಧರ್ಮವನ್ನು ಸಮನ್ವಯವಾಗಿ ಗೌರವಿಸುತ್ತಿದ್ದ ಮಹಾನ್ ವ್ಯಕ್ತಿ, ಅಬ್ದುಲ್ ಕಲಾಂ ರವರ ಜೀವನಶೈಲಿಯು ಬಹಳ ಸರಳವಾಗಿತ್ತು ಹಾಗೂ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಜೀವನ ಕಲ್ಪಿಸಿ ಕೊಟ್ಟಂತ ಮಹಾತ್ಮ, ಇಂದು ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರವರ ಹೆಸರನ್ನು ಅನುಸರಿಸಿ ನಮ್ಮ ಚನ್ನರಾಯಪಟ್ಟಣದಲ್ಲಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಫೌಂಡೇಶನ್ (ರಿ ) ಸಂಸ್ಥೆಯನ್ನು ಸ್ಥಾಪಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು, ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಹಾಗೂ ನಾಮಫಲಕ ಉದ್ಘಾಟನೆ ಮಾಡುವುದರ ಮೂಲಕ ಇಂದು ಸಂಸ್ಥೆಗೆ ಚಾಲನೆ ನೀಡಲಾಯಿತು. ಈ ಸಂಸ್ಥೆಯ ಸರ್ವ ಸದಸ್ಯರು ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರವರ ತತ್ವಗಳನ್ನು ಅನುಸರಿಸಿ ಸಂಸ್ಥೆ ವತಿಯಿಂದ ಎ.ಪಿ.ಜೆ ಅಬ್ದುಲ್ ಕಲಾಂ ರವರ ಹೆಸರಿಗೆ ಯಾವುದೇ ಕಪ್ಪು ಚುಕ್ಕಿ ಬಾರದಂತೆ ನೋಡಿಕೊಳ್ಳಬೇಕು ಹಾಗೂ ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ಸಮಾಜಕ್ಕೆ ಉತ್ತಮ ಸೇವೆಯನ್ನು ಸಲ್ಲಿಸಬೇಕಾಗಿ ಸಲಹೆ ನೀಡಿದರು,
ಈ ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಡಾ. ಭವ್ಯ ಸುನಿಲ್ ರವರು ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರವರು ಒಂದು ದೊಡ್ಡ ಶಕ್ತಿ ಇಂದು ಅವರ ಹೆಸರಿನಲ್ಲಿ ಸಂಸ್ಥೆಯನ್ನು ಸ್ಥಾಪಿಸುತ್ತಿರುವುದು ಖುಷಿಯ ವಿಚಾರ ಹಾಗೂ ಇಂದು ಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿದ್ದು ಈ ಶಿಬಿರದಲ್ಲಿ ಮಹಿಳೆಯರಿಗೆ ವಿಶೇಷವಾಗಿ ಕ್ಯಾನ್ಸರ್ ಸಂಬಂಧಿತ ಕಾಯಿಲೆಯ ಗುಣಲಕ್ಷಣಗಳು ಹಾಗೂ ಕ್ಯಾನ್ಸರ್ ಕಾಯಿಲೆ ತಡೆಗಟ್ಟುವಿಕೆ ಮತ್ತು ಮಹಿಳೆಯರಲ್ಲಿ ಆಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಮತ್ತು ಬಂಜೆತನ ನಿವಾರಣೆಯ ಬಗೆ ಮಹಿಳೆಯರಿಗೆ ವಿಶೇಷ ಮಾಹಿತಿ ನೀಡಿದರು ಹಾಗೂ ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿದರು,
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುನಾವರ್ ಪಾಶರವರು ಮಾತನಾಡಿ ಇಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕ ಚನ್ನರಾಯಪಟ್ಟಣ ಇವರ ಸಹಯೋಗದೊಂದಿಗೆ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಫೌಂಡೇಶನ್ ಸಂಸ್ಥೆಯನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು ಹಾಗೂ ಈ ಕಾರ್ಯಕ್ರಮದಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಂಡು ಊರಿನ 2 ವಿದ್ಯಾರ್ಥಿಗಳಿಗೆ ಹೊರದೇಶದಲ್ಲಿ ವೈದ್ಯಕೀಯ ವಿದ್ಯಾಭ್ಯಾಸವನ್ನು ಮುಗಿಸಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು ಡಾಕ್ಟರ್ ಸುನೈನಾ, ಡಾಕ್ಟರ್ ಮುಯಿಝ, ರವರನ್ನು ಸನ್ಮಾನಿಸಲಾಯಿತು ಹಾಗೂ ಸ್ವಯಂ ಪ್ರೇರಿತ ರಕ್ತ ಕೇಂದ್ರ ಚನ್ನರಾಯಪಟ್ಟಣ ಮತ್ತು ನಗರದ ವಿನಾಯಕ ಸ್ಪರ್ಶ ಆಸ್ಪತ್ರೆ ಹಾಗೂ ಶಿವ್ಯ ಆಸ್ಪತ್ರೆ ಹಾಸನ ಇವರ ವತಿಯಿಂದ ನುರಿತ ವೈದ್ಯರಿಂದ ಆರೋಗ್ಯ ಶಿಬಿರದಲ್ಲಿ ಬಿ.ಪಿ ಶುಗರ್, ಹೃದಯ ತಪಾಸಣೆ, ಕಣ್ಣಿನ ತಪಾಸಣೆ, ಮಕ್ಕಳ ವೈದ್ಯರು ಆದ ಡಾಕ್ಟರ್ ಪವನ್, ಹಾಗೂ ಮೂಳೆ ವೈದ್ಯರು ಆದ ಡಾಕ್ಟರ್ ಲೋಕೇಶ್ ಮತ್ತು ಫಿಜಿಷಿಯನ್ ಹಾಗೂ ದಂತ ತಜ್ಞರುಆದ ಡಾಕ್ಟರ್ ಅಸ್ಮಾ ರೂಮನ್, ಮತ್ತು ಇತರೆ ಕಾಯಿಲೆಗಳಿಗೆ ವೈದ್ಯಕೀಯ ಸೇವೆಯ ವ್ಯವಸ್ಥೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು, ಈ ಕಾರ್ಯಕ್ರಮದಲ್ಲಿ ಸುಮಾರು 283 ಕ್ಕೂ ಹೆಚ್ಚು ಸಾರ್ವಜನಿಕರು ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದರು,
ಈ ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಪುರಸಭಾ ಉಪಾಧ್ಯಕ್ಷರಾದ ಕವಿತಾ ರಾಜು, ಪುರಸಭಾ ಸದಸ್ಯರಾದ ಫರ್ಹ ಅನ್ನು ಮತ್ತು ಸಂಸ್ಥೆಯ ಪದಾಧಿಕಾರಿಗಳಾದ ಚಂದ್ ಪಾಶ, ಅಪ್ಸರ್ ಪಾಶ, ಅನ್ನು, ಶಮೀಲ್ ಪಾಶ,ತಂಜಿಮ್, ಸುಹೀಲ್ ಪಾಶ, ಅಮ್ಜದ್ ಖಾನ್, ನಾಜಿಮ್ ಪಾಶ, ಜಮೀಲ್, ಜಾವೀದ್ ಪಾಶ, ಸೈಯದ್ ಅನ್ಸರ್, ಹಮೀದ್, ಮುಹೀದ್, ಸೇರಿದಂತೆ ಇತರರು ಹಾಜರಿದ್ದರು.
ವರದಿ : ಮಂಜುನಾಥ್ ಐ ಕೆ
