ಕಠ್ಮಂಡು: ಪ್ರಪಂಚದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು ಆಮ್ಲಜನಕ ಸಿಲಿಂಡರ್ ನೆರವಿಲ್ಲದೇ ಏರಿರುವ ಮೂಲಕ ಪೋಲಂಡ್ ಮೂಲದ ಆಂಡ್ರೆಜ್ ಬಾರ್ಗಿಯೆಲ್ (Andrzej Bargiel) ಇತಿಹಾಸ ನಿರ್ಮಿಸಿದ್ದಾರೆ.
ಸಮುದ್ರಮಟ್ಟದಿಂದ 8,849 ಮೀಟರ್ ಎತ್ತರದಲ್ಲಿರುವ ಹಿಮಾಲಯದ ಎವರೆಸ್ಟ್ ಶಿಖರವನ್ನು ಯಾವುದೇ ಹೆಚ್ಚುವರಿ ಆಮ್ಲಜನಕ ಉಪಕರಣಗಳ ಸಹಾಯವಿಲ್ಲದೇ ಏರಿದ ಮೊದಲ ವ್ಯಕ್ತಿಯಾಗಿ ಬಾರ್ಗಿಯೆಲ್ ವಿಶ್ವದ ಗಮನ ಸೆಳೆದಿದ್ದಾರೆ.
ಇದನ್ನು ಓದಿ: ಈ ದಿನಾಂಕಗಳಲ್ಲಿ ಜನಿಸಿದ ಹುಡುಗರು ಸುಂದರ ಹೆಂಡತಿಯರನ್ನು ಹೊಂದಿರುತ್ತಾರೆ
ಬಾರ್ಗಿಯೆಲ್ ಅವರು ಈಗಾಗಲೇ 2018ರಲ್ಲಿ ಪ್ರಪಂಚದ 2ನೇ ಅತಿ ಎತ್ತರದ ಶಿಖರವಾದ ಕೆ2 ಅನ್ನು ಯಶಸ್ವಿಯಾಗಿ ಏರಿದ ಸಾಧನೆ ಮಾಡಿದ್ದರು. ಈ ಬಾರಿಗೆ ಮೌಂಟ್ ಎವರೆಸ್ಟ್ ಶಿಖರವನ್ನು ತಲುಪುವ ಮೂಲಕ ತಮ್ಮ ಪರ್ವತಾರೋಹಣ ಕೌಶಲ್ಯ ಮತ್ತು ದೈಹಿಕ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಮೌಂಟ್ ಎವರೆಸ್ಟ್ ಶಿಖರವು ನೇಪಾಳ ಮತ್ತು ಚೀನಾ ದೇಶಗಳ ಗಡಿಯಲ್ಲಿದ್ದು, ಪ್ರಪಂಚದಾದ್ಯಂತ ಪರ್ವತಾರೋಹಕರಿಗೆ ಅತ್ಯಂತ ಸವಾಲಿನ ಸ್ಥಳವೆಂದು ಪರಿಗಣಿಸಲಾಗಿದೆ.
