ತುಮಕೂರು:ಹಿರಿಯ ವಿದ್ಯಾರ್ಥಿಗಳು ಸೇವಾಮನೋಭಾವದಿಂದ ನಿಸ್ವಾರ್ಥತೆಯಿಂದ ಕಿರಿಯ ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ,ಪ್ರತಿ ವರ್ಷ ಹಿರಿಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ,ಹಿರಿಯ ವಿದ್ಯಾರ್ಥಿಗಳ ಸಂಘವು ಹಾಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾಕಲ್ಪನಿಧಿಯ ಮೂಲಕ ಆರ್ಥಿಕ ಸಹಾಯ ಮಾಡುತ್ತಿದೆ,ಮಧ್ಯಾಹ್ನದ ಬಿಸಿಯೂಟವನ್ನು ನೀಡುತ್ತಿದೆ,ಉಚಿತ ಕಾನೂನು ಸಲಹೆ,ಮಾಹಿತಿ ಮತ್ತು ತಂತ್ರಜ್ಞಾನ ಮಾರ್ಗದರ್ಶನ ನೀಡುತ್ತಿದೆರ್ಯಾಂಕ್ ವಿಜೇತರಿಗೆ,ಎನ್.ಸಿ.ಸಿ.,ಎನ್.ಎಸ್.ಎಸ್ ನಲ್ಲಿ,ವಿವಿಧ ವಿಷಯಗಳಲ್ಲಿ ಹೆಚ್ಚು ಅಂಕಗಳಿಸಿದವರಿಗೆ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿವರ್ಷ ಬಹುಮಾನ ನೀಡುತ್ತಿದೆ,ಅಷ್ಟೇ ಅಲ್ಲದೆ ದಿವ್ಯಾಂಗರು,ಕ್ರೀಡಾ ವಿಜೇತರಿಗೆ ಸಹ ಸಹಾಯ ಮಾಡುತ್ತಿದೆ,ಕಾಲೇಜು ನ್ಯಾಕ್ ನಲ್ಲಿ ಉತ್ತಮ ಸ್ಥಾನಗಳಿಸಲು ಹಿರಿಯ ವಿದ್ಯಾರ್ಥಿಗಳ ಕೊಡುಗೆ ಅಪಾರ,ಕಾಲೇಜಿಗೆ ಸ್ಮಾರ್ಟ್ಕ್ಲಾಸ್ ರೂಂನ್ನು ಸಹ ಕೊಡುಗೆಯಾಗಿ ನೀಡಿದೆ ಕಾಲೇಜಿಗೆ ಏನು ಬೇಕಾದರೂ ದೇಣಿಗೆ ನೀಡುತ್ತಾ ಕಾಲೇಜು ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ ಎಂದು ಪ್ರಾಂಶುಪಾಲರೂ ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಡಾ||ಟಿ.ಬಿ.ನಿಜಲಿಂಗಪ್ಪನವರು ತಿಳಿಸಿದರು.
ಅವರು ಇಂದು ಶ್ರೀ ಸಿದ್ಧಗಂಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಸಂಘದ 22ನೇ ವರ್ಷದ ಸರ್ವಸದಸ್ಯರ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ಆರ್.ಎ.ಪೀರ್ ಸಾಬ್ ಗೋಲ್ ರವರು ಹಿರಿಯ ವಿದ್ಯಾರ್ಥಿಗಳ ಸಂಘವು ಕಳೆದ 21 ವರ್ಷಗಳಿಂದ ಉತ್ತಮ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ,ಎಲ್ಲರೂ ಸೇವಾಮನೋಭಾವ ಬೆಳೆಸಿಕೊಳ್ಳಬೇಕು ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳು ಹೊಂದಿಕೊಳ್ಳಬೇಕು,ಚಿಕ್ಕ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಹೆಚ್ಚು ಸಾಧನೆ ಮಾಡಬೇಕು ಇದರಿಂದ ಹೆತ್ತವರಿಗೂ ಶಿಕ್ಷಕರಿಗೂ ಹೆಸರು ಬರುವಂತೆ ತಮ್ಮ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಾ||ಎಸ್.ಕೆ.ನಂದೀಶಯ್ಯನವರು ಮಾತನಾಡುತ್ತಾ ಈ ಕಾಲೇಜಿನಲ್ಲಿ ನುರಿತ ಅನುಭವಿ ಉಪನ್ಯಾಸಕರು ಇರುವುದರಿಂದ ಪ್ರತಿವರ್ಷ ಹತ್ತಾರು ರ್ಯಾಂಕ್ ಗಳು ಬರುತ್ತಿವೆ,ಇಲ್ಲಿ ಓದಿರುವ ಅಸಂಖ್ಯಾತ ವಿದ್ಯಾರ್ಥಿಗಳು ದೇಶದ ಮೂಲೆ ಮೂಲೆಗಳಲ್ಲಿ ಇದ್ದಾರೆ,ಕಾಲೇಜಿನ ಕೊಡುಗೆ ಸಮಾಜಕ್ಕೆ ಅಪಾರ,ಕಾಲೇಜು ನಮಗೆ ಕೇವಲ ಶಿಕ್ಷಣವನ್ನು ನೀಡಿಲ್ಲ ಬದುಕುವ ಕಲೆಯನ್ನು ಉತ್ತಮ ಸಂಸ್ಕಾರವನ್ನು ನೀಡಿದೆ,ಮಾರ್ಗದರ್ಶನ ನೀಡಿದೆ,ಅನ್ನದ ಮಾರ್ಗ ನೀಡಿ ಆಶೀರ್ವದಿಸಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಡಾ||ಪ್ರಸನ್ನ, ವಿಜಯ್, ಆರ್.ಬಸವರಾಜಪ್ಪ, ಪ್ರೊ.ಲಿಂಗದೇವರಪ್ಪ, ದಿನೇಶ್.ಜಿ.ಎಂ, ಪ್ರೊ.ಚೇತನ್ಕುಮಾರ್. ಎನ್.ಜಿ,ಪ್ರೊ.ಆಶಾರಾಣಿ.ಆರ್.ಎಸ್, ಬಿ.ಎಸ್.ಸೂರ್ಯನಾರಾಯಣಗುಪ್ತ, ಪ್ರೊ.ಕೆ.ಟಿ.ಮಂಜುನಾಥ್, ಪ್ರೊ.ದಕ್ಷಿಣಾಮೂರ್ತಿ, ಪ್ರೊ.ಡಿ.ಆರ್.ಮೋಹನ್ ಕುಮಾರ್, ಹೆಚ್.ಆರ್.ನಾಗೇಶ್, ಹೆಚ್.ಪ್ರಸನ್ನಕುಮಾರ್, ಜಿ.ಷಡಾಕ್ಷರಯ್ಯ, ಶ್ರೀಮತಿ ಇಂದ್ರಾಣಿ, ಪ್ರೊ.ಮಧು.ಎಸ್.ಕುಮಾರ್, ಡಾ||ಕಿಶೋರ್.ಆರ್.ಇತರರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
