ಕೆ.ಆರ್.ಪೇಟೆ: ತಾಲ್ಲೂಕಿನ ಶೀಳನೆರೆ ಹೋಬಳಿಯ ರಾಯಸಮುದ್ರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆರ್.ಜಿ ಹರೀಶ್ ಅವರು ಆಯ್ಕೆಗೊಂಡಿದ್ದಾರೆ
ರಾಯಸಮುದ್ರ ಡೈರಿ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹರೀಶ್ ಆರ್.ಜಿ ಹಾಗೂ ಎದುರಾಳಿಯಾಗಿ ಮಂಜುನಾಥ್ ನಾಮಪತ್ರ ಸಲ್ಲಿಸಿದರು. ಅಭ್ಯರ್ಥಿ ಮಂಜುನಾಥ್ ಚುನಾವಣೆ ಪ್ರಕ್ರಿಯೆ ಸಂದರ್ಭದಲ್ಲಿ ದೂರ ಉಳಿದ ಹಿನ್ನೆಲೆ 7 ಮತ ಪಡೆದ ಹರೀಶ್ ಆರ್.ಜಿ ರವರು ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.ಚುನಾವಣಾ ಅಧಿಕಾರಿ ತಾಲೂಕು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಭರತ್ ಕುಮಾರ್ ಕಾರ್ಯ ನಿರ್ವಹಿಸಿದರು.
ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಆರ್.ಜಿ ಹರೀಶ್ ನನ್ನ ಗೆಲುವಿಗೆ ಕಾರಣರಾದ ಮನ್ಮುಲ್ ನಿರ್ದೇಶಕ ಡಾಲು ರವಿ, ಎಂ ಬಿ ಹರೀಶ್ ಹಾಗೂ ಮನ್ಮುಲ್ ಮಾಜಿ ನಿರ್ದೇಶಕ ಎಸ್ ಅಂಬರೀಶ್, ಕಾಂಗ್ರೆಸ್ ಮುಖಂಡ ಕೆ.ಸಿ ಶ್ರೀಕಾಂತ್ ಹಾಗೂ ನಮ್ಮ ಸಂಘದ ನಿರ್ದೇಶಕರು ಹಾಗೂ ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಉತ್ಪಾದಕರು ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡಬೇಕು.ಸಂಘ ಉಳಿದರೆ ನಾವೆಲ್ಲರೂ ಉಳಿದಂತೆ. ಎಲ್ಲರ ಸಹಕಾರದಿಂದ ನಮ್ಮ ಸಂಘವನ್ನು ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಹರೀಶ,ಸುಕನ್ಯ,ಆರ್.ಎಸ್ ಕುಮಾರ್ ವಜ್ರೇಶ್,ಸುಮಾ, ಸುರೇಶ್, ಮಾರ್ಗವಿಸ್ತರಣಾಧಿಕಾರಿ ನಾಗಪ್ಪ ಅಲ್ಲಿಬಾದಿ,ಗ್ರಾಮದ ಮುಖಂಡರಾದ ಪ್ರಕಾಶ್, ಕುಮಾರ್ ಪುರುಷೋತ್ತಮ್, ಶ್ರೀನಿವಾಸ್,ಯುವ ಮುಖಂಡ ನವೀನ್, ಹರೀಶ್,ರವಿ ಆರ್.ಎಂ, ಕುಮಾರ್ ಆರ್.ಕೆ, ಸೇರಿದಂತೆ ಗ್ರಾಮಸ್ಥರು ಇದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
