ಚಂಡೀಗಢ : ಭಾರತದ ಕೇಂದ್ರಾಡಳಿತ ಪ್ರದೇಶ ಚಂಡೀಗಢ ಇದೀಗ ದೇಶದ ಮೊದಲ ಕೊಳೆಗೇರಿ ಮುಕ್ತ ನಗರ ಎಂಬ ಗೌರವವನ್ನು ಪಡೆದಿದೆ. ನಗರ ಆಡಳಿತವು ಉಳಿದಿದ್ದ ಕೊನೆಯ ಕೊಳೆಗೇರಿಯನ್ನು ತೆರವುಗೊಳಿಸುವ ಮೂಲಕ ಈ ಸಾಧನೆಯನ್ನು ದಾಖಲಿಸಿದೆ.
ನಗರಾಭಿವೃದ್ಧಿ, ಸ್ವಚ್ಛತಾ ಅಭಿಯಾನ ಮತ್ತು ವಸತಿ ಸೌಲಭ್ಯಗಳನ್ನು ಒಟ್ಟುಗೂಡಿಸಿ ಚಂಡೀಗಢ ಆಡಳಿತವು ದೀರ್ಘಕಾಲದ ಸಮಸ್ಯೆಯಾಗಿದ್ದ ಕೊಳೆಗೇರಿಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡಿದೆ. ಇದರಿಂದ ಸಾವಿರಾರು ಕುಟುಂಬಗಳು ಉತ್ತಮ ವಸತಿ ಸೌಲಭ್ಯ ಮತ್ತು ಮೂಲಭೂತ ಸೌಕರ್ಯಗಳನ್ನು ಪಡೆಯುವಂತಾಗಿದೆ.
ಈ ಸಾಧನೆ ಸ್ವಚ್ಛ ಭಾರತ ಮಿಷನ್ ಹಾಗೂ ನಗರಾಭಿವೃದ್ಧಿ ನೀತಿಗೆ ಮತ್ತೊಂದು ಕಿರೀಟವಾಗಿದ್ದು, ದೇಶದ ಇತರೆ ನಗರಗಳಿಗೆ ಮಾದರಿಯಾಗುವಂತಾಗಿದೆ. ಕೇಂದ್ರಾಡಳಿತ ಪ್ರದೇಶದ ಕಾರ್ಯಚಟುವಟಿಕೆಗಳನ್ನು ರಾಷ್ಟ್ರ ಮಟ್ಟದಲ್ಲಿ ಶ್ಲಾಘಿಸಲಾಗಿದೆ.

[…] […]