ಹಾಸನದ ಮಾಣಿಕ್ಯ ಪ್ರಕಾಶನ (ರಿ.) ಪ್ರತಿವರ್ಷ ಸಾಹಿತ್ಯದ ವಿವಿಧ ಪ್ರಕಾರಗಳ ಕೃತಿಗಳಿಗೆ ನೀಡುವ ದತ್ತಿ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, 2025ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಪ್ರಕಾಶಕಿ ದೀಪಾ ಉಪ್ಪಾರ್ ಪ್ರಕಟಣೆಯಲ್ಲಿ ತಿಳಿಸಿದಂತೆ, 2024ರಲ್ಲಿ ಮೊದಲ ಮುದ್ರಣವಾಗಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಲಾಗಿದ್ದು, ರಾಜ್ಯ ಹಾಗೂ ಹೊರರಾಜ್ಯಗಳಿಂದ ನೂರಾರು ಕವಿ-ಸಾಹಿತಿಗಳು ತಮ್ಮ ಕೃತಿಗಳನ್ನು ಕಳುಹಿಸಿದ್ದರು. ಹಿರಿಯ ಸಾಹಿತಿಗಳನ್ನೊಳಗೊಂಡ ಆಯ್ಕೆ ಸಮಿತಿಯು ಅರ್ಹ ಕೃತಿಗಳನ್ನು ಆಯ್ಕೆಮಾಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು 2025ರ ನವೆಂಬರ್ 2ರಂದು ಭಾನುವಾರ, ಹಾಸನದ ಸಂಸ್ಕೃತ ಭವನದಲ್ಲಿ ನಡೆಯುವ ದಶಮಾನೋತ್ಸವ ಕಾರ್ಯಕ್ರಮದ ವೇಳೆ ನಡೆಯಲಿದೆ. ದಶಮಾನೋತ್ಸವದ ಪ್ರಯುಕ್ತ ಪ್ರತಿ ದತ್ತಿಯ ನಗದು ಬಹುಮಾನವನ್ನು ಎರಡು ಕೃತಿಗಳಿಗೆ ಹಂಚಿ ಪ್ರದಾನ ಮಾಡಲು ನಿರ್ಧರಿಸಲಾಗಿದೆ.
ಆಯ್ಕೆ ಸಮಿತಿ ಸದಸ್ಯರು: ಡಾ. ರಂಜಾನ್ ದರ್ಗಾ, ಎನ್. ಶೈಲಜಾ, ಕೊಟ್ರೇಶ್ ಎಸ್. ಉಪ್ಪಾರ್, ಟಿ. ಸತೀಶ್ ಜವರೇಗೌಡ, ಪ್ರಭಾವತಿ ಶೆಡ್ತಿ, ರೇಷ್ಮಾ ಕಂಠಕೂರು, ಡಾ. ಅಮರೇಶ ಪಾಟೀಲ, ಡಾ. ವಿಶ್ವೇಶ್ವರ ಎನ್. ಮೇಟಿ, ಡಾ. ಎಚ್.ಕೆ. ಹಸೀನಾ, ಲತಾಮಣಿ ಎಂ.ಕೆ., ಪದ್ಮಾವತಿ ವೆಂಕಟೇಶ್, ನೀಲಾವತಿ ಸಿ.ಎನ್., ಎಚ್.ಎಸ್. ಬಸವರಾಜ್, ನಾಗರಾಜ್ ದೊಡ್ಡಮನಿ, ವಾಸು ಸಮುದ್ರವಳ್ಳಿ ಮತ್ತು ದೇಸು ಆಲೂರು.
🏅 ಪ್ರಶಸ್ತಿ ಪುರಸ್ಕೃತರ ಪಟ್ಟಿ
ಎನ್. ಶೈಲಜಾ ಹಾಸನ ದತ್ತಿ – ಪ್ರಬಂಧ ಮಾಣಿಕ್ಯ ಪ್ರಶಸ್ತಿ
-
“ಕೃಶಕಾಯದ ಕರಕರೆ” – ಲತಾ ಹೀಗಡೆ, ಧಾರವಾಡ
-
“ಐಸ್ ಪೈಸ್” – ನಳಿನಿ ಟಿ. ಭೀಮಪ್ಪ, ಧಾರವಾಡ
ದಿ. ಸಿ.ಪಿ. ನಾರಾಯಣಾಚಾರ್ಯ ಸ್ಮಾರಕ ದತ್ತಿ – ಕಾವ್ಯ ಮಾಣಿಕ್ಯ ಪ್ರಶಸ್ತಿ
-
“ಬೆಂದ ಬೆಳಸಿ” – ಎ.ಎ. ದರ್ಗಾ, ಧಾರವಾಡ
-
“ಪ್ಯೂಪಾ” – ಶಶಿ ತರೀಕೆರೆ, ಚಿಕ್ಕಮಗಳೂರು
-
“ಕಾದ ಕಂಗಳ ಕಂಪನ” – ಎನ್.ಆರ್. ರೂಪಶ್ರೀ, ಮೈಸೂರು
-
“ಕಿರು ಬೆಳಕಿನ ಸೂಜಿ” – ಗೀತಾಮಂಜು ಬೆಣ್ಣೆಳ್ಳಿ, ದಾವಣಗೆರೆ
ಪದ್ಮಾವತಿ ವೆಂಕಟೇಶ್ ದತ್ತಿ – ಕಥಾ ಮಾಣಿಕ್ಯ ಪ್ರಶಸ್ತಿ
-
“ಉರಿವ ದೀಪದ ಕೆಳಗೆ” – ಹಡವನಹಳ್ಳಿ ವೀರಣ್ಣಗೌಡ, ತುಮಕೂರು
-
“ಅದ್ದವ್ವನ ಕೌದಿ ಮತ್ತು ಇತರ ಕಥೆಗಳು” – ಸುನೀತಾ ಪ್ರಕಾಶ್, ದಾವಣಗೆರೆ
ನಿಂಗಪ್ಪ ಮಲ್ಲಪ್ಪ ಮೇಟಿ ಸ್ಮಾರಕ ದತ್ತಿ – ಸಂಶೋಧನಾ ಮಾಣಿಕ್ಯ ಪ್ರಶಸ್ತಿ
-
“ಮುಂಬಯಿ ಮತ್ತು ಮಹಿಳೆ” – ಸುಖಲಾಕ್ಷಿ ವೈ. ಸುವರ್ಣ, ದಕ್ಷಿಣ ಕನ್ನಡ
-
“ದಾಸೊಕ್ಕಲಿಗರು” – ಡಾ. ಹಂಪನಹಳ್ಳಿ ತಿಮ್ಮೇಗೌಡ, ಹಾಸನ
ಪ್ರಭಾವತಿ ಶೆಡ್ತಿ ದತ್ತಿ – ನಾಟಕ ಮಾಣಿಕ್ಯ ಪ್ರಶಸ್ತಿ
-
“ಕಲ್ಯಾಣದ ಕ್ರಾಂತಿ” – ಮಲ್ಲೇಶ ಬಿ. ಕೋನಾಳ, ಯಾದಗಿರಿ
-
“ಮೂರು ಮತ್ತೊಂದು ನಾಟಕಗಳು” – ಡಾ. ವೀಣಾ ಸಂಕನಗೌಡರ, ಧಾರವಾಡ
ದಿ. ಮಹಾದೇವಮ್ಮ–ಇ. ಕೃಷ್ಣಯ್ಯ ಸ್ಮಾರಕ ದತ್ತಿ – ಕಾದಂಬರಿ ಮಾಣಿಕ್ಯ ಪ್ರಶಸ್ತಿ
-
“ಪವಿತ್ರ ಪ್ರೀತಿ ಪ್ರಾಪ್ತಿ” – ಉಳುವಂಗಡ ಕಾವೇರಿ ಉದಯ, ಕೊಡಗು
-
“ಬೇಲಿಯನ್ನು” – ರಂಜಿತಾ ಮಹಾಜನ, ಬೆಳಗಾವಿ
ದಿ. ಫಾತಿಮಾಭಿ ಜನಾಬ್ ಸೈಯದ್ ಅಬ್ದುಲ್ ಘನೀ ಸಾಬ್ ಸ್ಮಾರಕ ದತ್ತಿ – ಗಜಲ್ ಮಾಣಿಕ್ಯ ಪ್ರಶಸ್ತಿ
-
“ನಿನ್ನ ಜೊತೆಜೊತೆಯಲಿ” – ಡಾ. ಸಿದ್ಧರಾಮ ಬೆನಕಲ್, ಯಾದಗಿರಿ
-
“ನೆಲ ನುಡಿದ ನಾದ” – ಯು. ಸಿರಾಜ್ ಅಹಮದ್, ಶಿವಮೊಗ್ಗ
ಕೆ.ವೈ. ಕಂದಕೂರ ದತ್ತಿ – ಚುಟುಕು ಮಾಣಿಕ್ಯ ಪ್ರಶಸ್ತಿ
-
“ಹನಿಗಡ” – ಹಸೀನ ಮಲ್ನಾಡ್, ದಕ್ಷಿಣ ಕನ್ನಡ
-
“ಹಾಯ್ಕು ಹನಿ” – ಶ್ವೇತಾ ನರಗುಂದ, ಬೆಳಗಾವಿ
ದಿ. ದೊಡ್ಡಚಂದಪ್ಪ ತಳ್ಳಿ ಪಾಟೀಲ ಸ್ಮಾರಕ ದತ್ತಿ – ವಚನ ಮಾಣಿಕ್ಯ ಪ್ರಶಸ್ತಿ
-
“ಲಿರಣ ಸೌರಭ” – ಜಯಶ್ರೀ ಸುಕಾಲೆ, ಬೀದರ
-
“ವಚನ ಮಂದಾರ” – ಸುಶೀಲಾ ಸೋಮಶೇಖರ್, ಹಾಸನ
