ಟಿ.ನರಸೀಪುರ : ಭತ್ತ ಬೆಳೆಗಾರರಿಗೆ ಈಗ ನೀಡುತ್ತಿರುವ ಬೆಂಬಲ ಬೆಲೆಯು ಭತ್ತ ಉತ್ಪಾದನೆ ವೆಚ್ಚಕ್ಕಿಂತ ಕಡಿಮೆ ಇರುವುದರಿಂದ ಕನಿಷ್ಠ ಭತ್ತದ ಬೆಂಬಲ ಬೆಲೆಯನ್ನು ರೂ. 3,500/- ಹೆಚ್ಚಿಸಿ ಇನ್ನಿತರೆ ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಅಶೋಕ್ ದಳವಾಯಿಯವರಿಗೆ ಮನವಿ ಸಲ್ಲಿಸಿರುವುದಾಗಿ ಕರ್ನಾಟಕ ರಾಜ್ಯರೈತ ಮೂಲ ಸಂಘಟನೆಯ ಮೈಸೂರು ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣಗೌಡ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕಬ್ಬು ಬೆಳೆಗಾರರಿಗೆ ಕಟಾವು ಮತ್ತು ಸಾಗಾಣಿಕಾ ವೆಚ್ಚವನ್ನು ಹೊರತು ಪಡಿಸಿ ಬೆಂಬಲ ಬೆಲೆ ನಿಗದಿ ಮಾಡಬೇಕು. ಅಂದರೆ ಕಬ್ಬು ಕಟಾವು ಮತ್ತು ಸಾಗಾಣಿಕಾ ವೆಚ್ಚವನ್ನು ಕಾರ್ಖಾನೆ ಮಾಲೀಕರೇ ಭರಿಸಬೇಕೆಂದು ಸರ್ಕಾರ ಆದೇಶಿಸಿ ಕಟ್ಟು ಬೆಳೆಗಾರರ ಸಾಲದ ಸಂಕಷ್ಟದಿಂದ ಪಾರು ಮಾಡಬೇಕಿದೆ.ಇದರಿಂದ ಮುಂದಿನ ಯುವ ಪೀಳಿಗೆ ಕಬ್ಬು ಕೃಷಿ ಮಾಡಲು ಆಕರ್ಷಿತರಾಗುತ್ತಾರೆ.ಇಲ್ಲವಾದಲ್ಲಿ ಕೃಷಿ ಉತ್ಪನ್ನ ವೆಚ್ಚಕ್ಕಿಂತ ಕಡಿಮೆ ದರ ಮಾಡಿದರೆ ರೈತರು ಕೃಷಿಯಿಂದ ವಿಮುಕ್ತರಾಗುತ್ತಾರೆಂದು ಭವಿಷ್ಯ ನುಡಿದರು.
ಇದನ್ನು ಓದಿ: ಟಿ.ನರಸೀಪುರ : ಅ.18ರಂದು ಪತ್ರಿಕಾ ದಿನಾಚರಣೆ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಕಚೇರಿ ಉದ್ಘಾಟನೆ
ರೈತರ ಶ್ರಮ ದಲ್ಲಾಳಿಗಳ ಪಾಲು:-
ಈಗಿರುವ ಖರೀದಿ ಕೇಂದ್ರಗಳು ಕೇವಲ ನೆಪಮಾತ್ರಕ್ಕಿದ್ದು ಧಾನ್ಯಗಳನ್ನು ಸಕಾಲದಲ್ಲಿ ಖರೀದಿಸುವುದಿಲ್ಲ.ಇದರಿಂದ ಖರೀದ ಕೇಂದ್ರ ಇದ್ದರೂ ಸಹ ರೈತರಿಗೆ ಉಪಯೋಗವಾಗುತ್ತಿಲ್ಲ.ಆದ್ದರಿಂದ ರೈತರು ಕಟಾವು ಮಾಡಿದ ಸ್ಥಳದಲ್ಲೇ ದಳ್ಳಾಳಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.ಇದರಿಂದ ಭತ್ತ ಬೆಳೆದ ರೈತರು ಸಂಕಷ್ಟದಲ್ಲಿದ್ದು, ಇದರಿಂದ ಪಾರಾಗಲು ಮೇಲ್ಕಂಡ ದರವನ್ನು ನಿಗದಿಪಡಿಸಿ ಸಕಾಲದಲ್ಲಿ ಭತ್ತವನ್ನು ಖರೀದಿಸಬೇಕೆಂದರು.
ಎಪಿಎಂಸಿ ಆವರಣದಲ್ಲಿ ಆರಕ್ಷಕ ಠಾಣೆ ಅವಶ್ಯಕ:-
ಹೂ-ಹಣ್ಣು ತರಕಾರಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ವರ್ಷ ಬೆಂಬಲ ಬೆಲೆ ಘೋಷಿಸಿ 15ಕಿ.ಮೀ ಒಳಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಿ ಖರೀದಸಿ ಹೂ-ಹಣ್ಣು ತರಕಾರಿಗಳನ್ನು ಬೆಳೆದ ರೈತರು ಬೆಲೆಯ ಏರಿಳಿತದ ಸಂಕಷ್ಟದಿಂದ ತಪ್ಪಿಸಿ ಪಾರು ಮಾಡಬೇಕು.
ಮೈಸೂರಿನ ಬಂಡಿಪಾಳ್ಯ ರೈತರ ಕೃಷಿ ಉತ್ಪನ್ನ ಮಾರಾಟ ಸಮಿತಿ ಆವರಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು ರೈತರು ತಂದ ಉತ್ಪನ್ನಗಳನ್ನು ವಂಚಿಸಿ ಹಣವನ್ನು ದರೋಡೆ ಮಾಡುತ್ತಿರುವ ಬಗ್ಗೆ ಮೌಖಿಕವಾಗಿ ಸುದ್ದಿಯಾಗಿದ್ದು ಎ.ಪಿ.ಎಂ.ಸಿ. ಆವರಣದೊಳಗೆ ಒಂದು ಆರಕ್ಷಕ ಠಾಣೆಯನ್ನು ಮಂಜೂರು ಮಾಡಿಸಿ ರೈತರ ಜೀವಕ್ಕೆ ಹಾಗೂ ಹಣಕ್ಕೆ ಭದ್ರತೆ ನೀಡಬೇಕೆಂದರು.
ರೈತರಿಗೆ ಮಾತ್ರ ಕಾಯ್ದಿರಿಸದ ಸ್ಥಳ ದೊರೆಯಬೇಕು:-
ಆವರಣದಲ್ಲಿರುವ ರೈತರ ನೇರ ಮಾರುಕಟ್ಟೆಗಳನ್ನು ಬೇರೆ ಏಜೆಂಟರುಗಳಿಗೆ ಮಂಜೂರು ಮಾಡಿರುವ ಬಗ್ಗೆ ತಿಳಿದು ಬಂದಿದ್ದು ಇದರಿಂದ ರೈತರು ನೇರ ಮಾರಾಟ ಮಾಡುವ ರೈತರಿಗೆ ಸಕಾಲದಲ್ಲಿ ಜಾಗ ಸಿಗದೆ ತೊಂದರೆ ಉಂಟಾಗುತ್ತಿದೆ.ನೇರ ಮಾರಾಟ ಮಾಡುತ್ತಿರುವ ಕಾಯ್ದಿರಿಸಿದ ಸ್ಥಳಗಳನ್ನು ಋಯತರಿಗೆ ಮುಕ್ತವಾಗಿ ಬಿಡಬೇಕು ತಾವೇ ಖುದ್ದು ಸ್ಥಳ ಪರಿಶೀಲಿಸಿ ಸಂಬಂಧಪಟ್ಟ ಇಲಾಕೆಯ ಅವೈಜ್ಞಾನಿಕ ನೀತಿಗೆ ಎಚ್ಚರಿಸಿ ನೇರ ಮಾರುಕಟ್ಟೆ ಸ್ಥಳಗಳನ್ನು ಮುಕ್ತವಾಗಿ ರೈತರಿಗೆ ಬಿಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.
ಎಂ.ನಾಗೇಂದ್ರಕುಮಾರ್
