ಟಿ.ನರಸೀಪುರ : ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಕಚೇರಿ ಉದ್ಘಾಟನೆ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮವು ಅಕ್ಟೋಬರ್ 18, ಶನಿವಾರ ಬೆಳಿಗ್ಗೆ ನಡೆಯಲಿದೆ. ತಾಲ್ಲೂಕು ಕಚೇರಿ ರಸ್ತೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಮೀಪ ಈ ಕಾರ್ಯಕ್ರಮ ನಡೆಯಲಿದ್ದು, ಕ್ಷೇತ್ರದ ಶಾಸಕರು ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಿಗೆ ಸನ್ಮಾನವನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಸುನಿಲ್ ಬೋಸ್ ಅವರು ನೆರವೇರಿಸಲಿದ್ದು, ವೇದಿಕೆ ಸಮಾರಂಭದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ನೆರವೇರಿಸಲಿದ್ದಾರೆ.
ದಿವಂಗತ ಪತ್ರಕರ್ತರಾದ ರಾಜಶೇಖರಕೋಟಿ ಹಾಗೂ ಕೆ.ಬಿ. ಗಣಪತಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ ಕಾರ್ಯಕ್ರಮವನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಹಾಗೂ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಯಣ್ ನೇತೃತ್ವದಲ್ಲಿ ನೆರವೇರಿಸಲಾಗುವುದು.
ಕಾರ್ಯಕ್ರಮದ ಯಶಸ್ವೀ ಆಯೋಜನೆಗಾಗಿ ಸಂಘದ ಅಧ್ಯಕ್ಷ ಅಕ್ರಂ ಪಾಷ, ಹಾಗೂ ಸದಸ್ಯರು ಸಕ್ರಿಯವಾಗಿ ಸಿದ್ಧತೆ ನಡೆಸಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ವರದಿ: ಎಂ. ನಾಗೇಂದ್ರಕುಮಾರ್

[…] ಇದನ್ನು ಓದಿ: ಟಿ.ನರಸೀಪುರ : ಅ.18ರಂದು ಪತ್ರಿಕಾ ದಿನಾಚರಣೆ ಮ… […]
[…] ಇದನ್ನು ಓದಿ: ಟಿ.ನರಸೀಪುರ : ಅ.18ರಂದು ಪತ್ರಿಕಾ ದಿನಾಚರಣೆ ಮ… […]