ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಸ್ಟ್ರೀಟ್ ವೆಂಡರ್ಸ್ ಆತ್ಮನಿರ್ಭರ್ ನಿಧಿ (PM SVANidhi) ಯೋಜನೆಯನ್ನು ಈಗ 2030ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ.
ಈ ಯೋಜನೆಯನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) 2020ರ ಜೂನ್ 1ರಂದು ಪ್ರಾರಂಭಿಸಿತ್ತು. ಇದರ ಉದ್ದೇಶ, ದೇಶದ ಬೀದಿ ವ್ಯಾಪಾರಿಗಳಿಗೆ (Street Vendors) ಆರ್ಥಿಕ ನೆರವು ನೀಡುವ ಮೂಲಕ ಅವರ ಜೀವನೋಪಾಯವನ್ನು ಬಲಪಡಿಸುವುದು.
ಇದನ್ನು ಓದಿ: ಟಿ20 ವಿಶ್ವಕಪ್ 2026ಕ್ಕೆ ಯುಎಇಗೆ ಅರ್ಹತೆ – 20ನೇ ತಂಡವಾಗಿ ಸ್ಥಾನ
ಪ್ರಸ್ತುತ, ಈ ಯೋಜನೆಯಡಿ ಫಲಾನುಭವಿಗಳು ₹20,000 ರಿಂದ ₹50,000 ರವರೆಗೆ ಸಾಲವನ್ನು ಶೇ.7 ರಷ್ಟು ಬಡ್ಡಿ ಸಬ್ಸಿಡಿಯೊಂದಿಗೆ ಪಡೆಯಬಹುದು. ಸರ್ಕಾರದ ಈ ನಿರ್ಧಾರದಿಂದ ಲಕ್ಷಾಂತರ ಬೀದಿ ವ್ಯಾಪಾರಿಗಳಿಗೆ ಆತ್ಮನಿರ್ಭರವಾಗುವ ಹೊಸ ಅವಕಾಶ ದೊರಕಲಿದೆ ಎಂದು ತಿಳಿಸಲಾಗಿದೆ.
