ಮಾಲೆ: ತಂಬಾಕು ವ್ಯಸನದಿಂದ ಮುಂದಿನ ಪೀಳಿಗೆಯನ್ನು ಸಂಪೂರ್ಣ ಮುಕ್ತಗೊಳಿಸುವ ಉದ್ದೇಶದಿಂದ ಮಾಲ್ಡೀವ್ಸ್ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಧೂಮಪಾನ ಹಾಗೂ ತಂಬಾಕು ಬಳಕೆಯ ಮೇಲೆ “ಪೀಳಿಗೆಯ ನಿಷೇಧ” (Generational Tobacco Ban) ವಿಧಿಸಿರುವ ವಿಶ್ವದ ಮೊದಲ ದೇಶವಾಗಿ ಮಾಲ್ಡೀವ್ಸ್ ಗುರುತಿಸಿಕೊಂಡಿದೆ.
ಹೊಸ ಕಾನೂನಿನ ಪ್ರಕಾರ, 2007ರ ಜನವರಿ 1ರ ನಂತರ ಜನಿಸಿದ ಯಾವುದೇ ವ್ಯಕ್ತಿ ತಂಬಾಕು ಉತ್ಪನ್ನಗಳನ್ನು ಖರೀದಿಸಲು, ಮಾರಾಟ ಮಾಡಲು ಅಥವಾ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಈ ನಿಯಮವು ಹಂತ ಹಂತವಾಗಿ ತಂಬಾಕು ಬಳಕೆಯನ್ನು ಕಡಿಮೆ ಮಾಡುತ್ತಾ, ಮುಂದಿನ ಪೀಳಿಗೆಯನ್ನು ಸಂಪೂರ್ಣವಾಗಿ ತಂಬಾಕು ಮುಕ್ತವಾಗಿಸುವ ಉದ್ದೇಶ ಹೊಂದಿದೆ.
ಇದನ್ನು ಓದಿ : ವಿಶ್ವದ ಅತ್ಯಂತ ದುಬಾರಿ ಲೋಹ! ಇದನ್ನ ಒಂದು ಗ್ರಾಂ ಮಾರಾಟ ಮಾಡಿದರೆ 200 ಕೆಜಿ ಚಿನ್ನ ಖರೀದಿಸಬಹುದು..!
ಸರ್ಕಾರದ ಪ್ರಕಾರ, ಈ ಕ್ರಮದ ಮುಖ್ಯ ಉದ್ದೇಶ ಯುವಜನರಲ್ಲಿ ತಂಬಾಕು ವ್ಯಸನದ ಪ್ರಮಾಣವನ್ನು ಶೂನ್ಯಕ್ಕೆ ತರುವುದಾಗಿದೆ. ತಂಬಾಕು ಬಳಕೆಯಿಂದ ಉಂಟಾಗುವ ಆರೋಗ್ಯ ಹಾನಿ, ಅಕಾಲಿಕ ಸಾವು ಮತ್ತು ಆರ್ಥಿಕ ನಷ್ಟವನ್ನು ಕಡಿಮೆ ಮಾಡಲು ಇದು ಒಂದು ದೃಢವಾದ ಸಾರ್ವಜನಿಕ ಆರೋಗ್ಯ ಕ್ರಮವೆಂದು ಅಧಿಕಾರಿಗಳು ಹೇಳಿದ್ದಾರೆ.
ಮಾಲ್ಡೀವ್ಸ್ನ ಈ ಕ್ರಮವು ಈಗಾಗಲೇ ಸಿಂಗಪೂರ್, ನ್ಯೂಜಿಲೆಂಡ್ ಮುಂತಾದ ದೇಶಗಳಲ್ಲಿ ಪರಿಗಣನೆಯಲ್ಲಿರುವ ಅಥವಾ ಭಾಗಶಃ ಜಾರಿಯಲ್ಲಿರುವ ಮಾದರಿಗಳಿಗೆ ಪ್ರೇರಣೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು (WHO) ಈ ಕ್ರಮವನ್ನು ಶ್ಲಾಘಿಸಿ, ತಂಬಾಕು ಮುಕ್ತ ಪೀಳಿಗೆಯತ್ತ ಮುನ್ನಡೆಯಲು ಮಾದರಿಯಾಗಬಹುದು ಎಂದು ಹೇಳಿದೆ.

[…] […]