ಚಿತ್ರದುರ್ಗ, ನವೆಂಬರ್ 14: ಕರ್ನಾಟಕದ ಇತಿಹಾಸದಲ್ಲಿ ಅಸಾಧಾರಣ ಧೈರ್ಯ ಮತ್ತು ದೇಶಭಕ್ತಿಯ ಸಂಕೇತವಾದ ವೀರ ವನಿತೆ ಒನಕೆ ಓಬವ್ವ ಅವರ ತವರುಮನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಗ್ರಾಮವಾಗಿದೆ.
ಗುಡೇಕೋಟೆ — ಈ ಸಣ್ಣ ಊರು ಕೇವಲ ಇತಿಹಾಸದ ಪುಟಗಳಲ್ಲಿ ಅಲ್ಲ, ಕರ್ನಾಟಕದ ಸಾಂಸ್ಕೃತಿಕ ಸ್ಮರಣೆಯಲ್ಲಿ ಶಾಶ್ವತ ಸ್ಥಾನ ಪಡೆದಿದೆ.
ರಾಜ್ಯ ಸರ್ಕಾರವು 2021ರಿಂದ ಪ್ರತಿವರ್ಷ ನವೆಂಬರ್ 11ರಂದು “ಒನಕೆ ಓಬವ್ವ ಜಯಂತಿ” ಯನ್ನು ಆಚರಿಸುವ ನಿರ್ಧಾರ ಕೈಗೊಂಡಿದ್ದು, ಈ ದಿನ ರಾಜ್ಯಾದ್ಯಂತ ವೀರ ವನಿತೆಯ ಶೌರ್ಯವನ್ನು ಸ್ಮರಿಸಲಾಗುತ್ತದೆ.
ಇದೇ ವೇಳೆ, ಚಿತ್ರದುರ್ಗದ ಕ್ರೀಡಾಂಗಣಕ್ಕೆ “ವೀರ ವನಿತೆ ಒನಕೆ ಓಬವ್ವ ಕ್ರೀಡಾಂಗಣ” ಎಂದು ನಾಮಕರಣ ಮಾಡಲಾಗಿದೆ. ಇದು ಅವರ ಸಾಹಸ ಮತ್ತು ದೇಶಪ್ರೇಮಕ್ಕೆ ನೀಡಲಾದ ವಿಶಿಷ್ಟ ಗೌರವವಾಗಿದೆ.
