ಚನ್ನರಾಯಪಟ್ಟಣ: ತಾಲೂಕಿನ ಗಡಿ ಗ್ರಾಮವಾದ ಐಕನಹಳ್ಳಿ ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಮಾಜಿ ಗ್ರಾ ಪಂ ಅಧ್ಯಕ್ಷರಾದ ಐ ಆರ್ ಮಂಜುನಾಥ್ ರವರು ಅಧಿಕಾರ ಸ್ವೀಕಾರ ಮಾಡಿದರು.
ಮಂಡ್ಯ ಜಿಲ್ಲೆಯ,ಕೆ ಆರ್ ಪೇಟೆ ತಾಲೂಕಿನ, ಕಿಕ್ಕೇರಿ ಹೋಬಳಿಯ ಐಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಐಕನಹಳ್ಳಿ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಐ ಆರ್ ಮಂಜುನಾಥ್ ಅವಿರೋಧವಾಗಿ ಆಯ್ಕೆಗೊಂಡರು. ನೂತನ ಅಧ್ಯಕ್ಷ ಐ ಆರ್ ಮಂಜುನಾಥ್ ಮಾತನಾಡಿ ನನ್ನನ್ನು ಐಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದರು.

ನನ್ನನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಎಲ್ಲಾ ರೀತಿಯ ಸಹಕಾರ ನೀಡಿದ ಕಾಂಗ್ರೆಸ್ ಮತ್ತು ಜೆಡಿಎಸ್ ಎಲ್ಲಾ ಮುಖಂಡರಿಗೂ ಧನ್ಯವಾದಗಳು ಸಲ್ಲಿಸುತ್ತೇನೆ ಎಂದರು. ಮುಂದಿನ ದಿನಗಳಲ್ಲಿ ಹಾಲಿನ ಡೇರಿಯ ಉತ್ತಮ ರೀತಿ ನಡೆಸಿಕೊಂಡು ಹೋಗುತ್ತೇನೆ ಹಾಗೂ ಷೇರುದಾರರ ಹಿತವನ್ನು ಕಾಯುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತಿ ಸದಸ್ಯರಾದ ಮಾಜಿ ಅಧ್ಯಕ್ಷರಾದ ಶ್ರೀಮತಿ ಶಾರದಕೃಷ್ಣೇಗೌಡ, ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಐ ಬಿ ಅಣ್ಣಯ್ಯ, ಮಾಜಿ ಡೈರಿ ಅಧ್ಯಕ್ಷರಾದ ಐ ಬಿ ದೇವೇಗೌಡ,ಮಾಜಿ ಗ್ರಾ. ಪಂ ಸದಸ್ಯರಾದ ಐ ಬಿ ಅಣ್ಣಯ್ಯ, ಐ ಟಿ ಮಂಜಯ್ಯ, ಮುಖಂಡರಾದ ನಂಜೇಶ್ ಗೌಡ, ಅಂಗಡಿ ಮಹದೇವಣ್ಣ, ಬಾಬು , ಕಿಕ್ಕೇರಿ ಹೋಬಳಿ ಬಿಜೆಪಿ ಅಧ್ಯಕ್ಷರಾದ ಮಾದೀಹಳ್ಳಿ ಶಂಕರ್,ಡೈರಿ ಕಾರ್ಯದರ್ಶಿ ಸವಿತಾ ಅನಿಲ್, ಡೈರಿ ಸಿಬ್ಬಂದಿ ದಿನೇಶ್, ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ ಕೆ
