ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿ ಮಾಕವಳ್ಳಿ ಗ್ರಾಮದ ಹಿರಿಯ ಮುಖಂಡ ಜಯಕೃಷ್ಣಯ್ಯ (78) ಅವರು ತೀವ್ರ ಅನಾರೋಗ್ಯದಿಂದ ಮೈಸೂರು ಚಲುವಂಬ ಆಸ್ಪತ್ರೆಯಲ್ಲಿ ಇಂದು ಸಂಜೆ ನಾಲ್ಕು ಗಂಟೆಯಲ್ಲಿ ನಿಧನರಾಗಿದ್ದಾರೆ.
ಮೃತರ ಪತ್ನಿ ಲಕ್ಷ್ಮಿ,ಪ್ರೇಮಮ್ಮ ಇಬ್ಬರು ಗಂಡು ಮಕ್ಕಳಾದ ಚಲುವರಾಜು,ಚಂದನ್ ಸೇರಿದಂತೆ ಅಪಾರ ಬಂಧು-ಬಳಗ ಬಿಟ್ಟು ಅಗಲಿದ್ದಾರೆ.ಅಂತ್ಯಸಂಸ್ಕಾರ ಮೃತರ ಅಂತ್ಯಕ್ರಿಯೆಯು ಮಂಗಳವಾರ ಮಧ್ಯಾಹ್ನ 12. ಗಂಟೆಗೆ ಸ್ವಗ್ರಾಮ ಮಾಕವಳ್ಳಿಯಲ್ಲಿರುವ ಮೃತರ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಜಯಕೃಷ್ಣಯ್ಯ ಅವರ ನಿಧನಕ್ಕೆ ಶಾಸಕರು, ಮಾಜಿ ಸಚಿವರು ಶಾಸಕರು, ಸಮಾಜ ಸೇವಕರು,ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಮಾಕವಳ್ಳಿ ಗ್ರಾಮಸ್ಥರು ತೀವ್ರ ಸಂತಾಪ ಸೂಚಿಸಿದ್ದಾರೆ.
ಮಾಹಿತಿಯೊಂದಿಗೆ ಮನು ಮಾಕವಳ್ಳಿ, ಕೆ.ಆರ್.ಪೇಟೆ
