ಕಲಿಯೋಣ ಬಾರಾ ಕನ್ನಡವಾ..
ಆಡೋಣ ಬಾರಾ ಕನ್ನಡವಾ..
ನುಡಿಯೋಣ ಬಾರಾ ಕನ್ನಡವಾ..
ಬದುಕೋಣ ಬಾರಾ ಕನ್ನಡವಾ..!!
ಅಮ್ಮ ಕಲಿಸಿದ ತೊದಲ ನುಡಿಯು
ಕನ್ನಡ..
ಗುರು ತಿದ್ದಿಸಿದ ಮೊದಲ ಅಕ್ಷರ
ಕನ್ನಡ..!!
ಅಪ್ಪನ ಪ್ರೀತಿಯ ಬೈಗುಳವು
ಕನ್ನಡ..
ಗೆಳೆಯರ ಕೊಂಕು ಭಾಷೆ
ಕನ್ನಡ..!!
ನನ್ನ ಕನಸಿನ ಕನವರಿಕೆಯು
ಕನ್ನಡ..
ನನ್ನ ಹೃದಯದ ನಾಡಿಮಿಡಿತವು
ಕನ್ನಡ..!!
ನನ್ನ ಹಳ್ಳಿ ಗೌಡರ ಪಂಚಾಯಿತಿ
ಕನ್ನಡ..
ನಾ ಬೆಳೆದ ಪ್ರಕೃತಿಯ ಮಡಿಲ ಮೌನ
ಕನ್ನಡ..!!
ಈ ದೇಹದ ನರನಾಡಿಯ ಜೀವವು
ಕನ್ನಡ..
ಈ ಜನುಮದ ಸಾಕ್ಷಾತ್ಕಾರದ ಆತ್ಮವು
ಕನ್ನಡ..!!
ಮತ್ತೊಮ್ಮೆ ಹುಟ್ಟುವ ನಾ
ಕನ್ನಡ ನಾಡಲಿ..
ಮರೆಯದೆ ಕಲಿಯುವೆ ನಾ ಕನ್ನಡವ ಮಾತೃ ಭಾಷೆಯಲಿ..!!
– ಅಪರಿಚಿತ ಮೌನಿ
