ಕೆ.ಆರ್.ಪೇಟೆ,ಡಿ.05: ವಕೀಲ ಕೆ.ಬೋರೇಗೌಡ ಅವರು ಮುಖ್ಯಮಂತ್ರಿ ಪರಿಹಾರ ನಿಧಿಯ ಲಕ್ಷಾಂತರ ರೂಪಾಯಿಗಳನ್ನು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ದುರುಪಯೋಗ ಪಡಿಸಿಕೊಂಡ ಹಿನ್ನೆಲೆಯಲ್ಲಿ ಜೈಲಿಗೆ ಹೋಗಿ ಬಂದಿದ್ದು, ವಕೀಲ ವೃತ್ತಿಗೆ ಅವಮಾನ ಮಾಡಿದ್ದಾರೆ ಹಾಗಾಗಿ ತಾಲ್ಲೂಕು ವಕೀಲರ ಸಂಘದಲ್ಲಿ ಅವರಿಗೆ ಸದಸ್ಯತ್ವ ನಿರಾಕರಿಸಲಾಗಿದೆ ಎಂದು ತಾಲ್ಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ.ಆರ್.ಪ್ರಸನ್ನಕುಮಾರ್ ಹೇಳಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ನ್ಯಾಯಾಲಯದ ಸಂಕೀರ್ಣದಲ್ಲಿರುವ ವಕೀಲರ ಸಂಘದ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂ.ಆರ್.ಪ್ರಸನ್ನಕುಮಾರ್ ಅವರು ವಕೀಲರಾದ ಕೆ.ಬೋರೇಗೌಡ ಅವರು 2014ರಿಂದ 2018ವರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯ ಲಕ್ಷಾಂತರ ರೂ ಬೋಗಸ್ ದಾಖಲೆ ಸೃಷ್ಠಿಸಿ ದುರುಪಯೋಗ ಮಾಡಿಕೊಂಡಿದ್ದಾರೆ. ಸದರಿ ಪ್ರಕರಣದ ಹಿನ್ನೆಲೆಯಲ್ಲಿ ಸಿಐಡಿ ತನಿಖೆ ನಡೆದು ಕೆ.ಬೋರೇಗೌಡ ಅವರು ತಪ್ಪಿತಸ್ಥರೆಂದು ಸಾಬಾತಾದ ಹಿನ್ನೆಲೆಯಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ. ಆದರೂ ಸಹ ವಕೀಲ ವೃತ್ತಿಯನ್ನು ಮುಂದುವರೆಸಿದ್ದಾರೆ ಇದಕ್ಕೆ ತಾಲ್ಲೂಕು ವಕೀಲರ ಸಂಘವು ಯಾವುದೇ ಅಡ್ಡಿಪಡಿಸಿಲ್ಲ. ಕಳೆದ ಐದಾರು ವರ್ಷಗಳಿಂದಲೂ ಕೆ.ಆರ್.ಪೇಟೆಯಲ್ಲಿ ಅಪಘಾತ ಪ್ರಕರಣಗಳಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ವಿಮಾ ಹಣವನ್ನು ಲೂಟಿ ಮಾಡುತ್ತಿದ್ದಾರೆ.
ಕಳೆದ ಬುಧವಾರ ತಾಲ್ಲೂಕಿನ ಗವಿರಂಗನಾಥ ದೇವಾಲಯದಲ್ಲಿ ನಡೆದ ಅಪಘಾತ ಒಂದರಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದರು. ಸದರಿ ಮೃತ ಮಹಿಳೆಯರ ಸಂಬಂಧಿಕರು ನಮ್ಮ ತಾಲ್ಲೂಕಿನ ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ನಾಗೇಗೌಡ ಅವರನ್ನು ಸಂಪರ್ಕಿಸಿ ಘಟನೆಯ ಸಂಬಂಧ ವಿಮಾ ಪರಿಹಾರವನ್ನು ಕೊಡಿಸುವಂತೆ ಕೋರಿಕೊಂಡಿದ್ದಾರೆ.
ಈ ಸಂಬಂಧ ಎಂ.ಆರ್.ನಾಗೇಗೌಡ ಅವರು ಎಲ್ಲಾ ಸಿದ್ದತೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರದ ಬಳಿ ಹೋಗಿ ಈ ಕೇಸನ್ನು ನನಗೆ ಕೊಡಿ ಕಡಿಮೆ ಫೀಜಿನಲ್ಲಿ ಹೆಚ್ಚಿನ ಪರಿಹಾರ ಕೊಡಿಸುತ್ತೇನೆ ಎಂದು ಹೇಳಿದ್ದಲ್ಲದೇ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾದ ಎಂ.ಆರ್.ನಾಗೇಗೌಡರ ಬಗ್ಗೆ ಲಘುವಾಗಿ ಮಾತನಾಡಿ ಟೀಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ವಕೀಲ ಕೆ.ಬೋರೇಗೌಡ ಮತ್ತು ಎಂ.ಆರ್.ನಾಗೇಗೌಡ ಅವರ ನಡುವೆ ಮಾತಿನ ಚಕಮಕಿ ನಡೆದಿರುವುದು ನಿಜ, ಆದರೆ ಯಾವುದೇ ಹಲ್ಲೆಯಾಗಲಿ, ಹೊಡೆದಾಟವಾಗಲಿ ನಡೆದಿಲ್ಲ. ಆದರೂ ಸಹ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಕೆಟ್ಟ ಹೆಸರು ತರಬೇಕು ಎಂಬ ದುರುದ್ದೇಶದಿಂದ ವಕೀಲ ಕೆ.ಬೋರೇಗೌಡ ಅವರು ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಎಂ.ಆರ್.ಪ್ರಸನ್ನಕುಮಾರ್ ಹೇಳಿದರು.
ಇದನ್ನು ಓದಿ: ಕೆ.ಆರ್.ಪೇಟೆ : ಕರ್ನಾಟಕ ಪ್ರಾಂತ ಕೃಷಿ ಮತ್ತು ಗ್ರಾಮೀಣ ನರೇಗಾ ಕೂಲಿಕಾರ್ಮಿಕರ ಪ್ರತಿಭಟನೆ..!
ವಕೀಲ ಕೆ.ಬೋರೇಗೌಡ ಅವರು ಜನಸಾಮಾನ್ಯರಿಗೆ ತುಂಬಾ ತೊಂದರೆ ನೀಡುತ್ತಾ ಬಂದಿದ್ದು ವಕೀಲ ವೃತ್ತಿಯ ಗೌರವವನ್ನು ಹಾಳು ಮಾಡುತ್ತಿದ್ದಾರೆ ಇದರಿಂದಾಗಿ ತಾಲ್ಲೂಕು ವಕೀಲರ ಸಂಘದ 180ಸದಸ್ಯರ ಪೈಕಿ ಒಬ್ಬರೇ ಒಬ್ಬ ವಕೀಲರೂ ಸಹ ಕೆ.ಬೋರೇಗೌಡ ಅವರ ಇಲ್ಲ. ಕೆ.ಬೋರೇಗೌಡ ಅವರು ಅಪಘಾತ ಪ್ರಕರಣದಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ, ವಿಮಾ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಅಪಘಾತ ನಡೆದ ದಿನ ಕಕ್ಷಿದಾರರಲ್ಲಿ ಕಡಿಮೆ ಫೀಜು ಕೊಡಿ ಎನ್ನುವ ಬೋರೇಗೌಡ ವಿಮಾ ಪರಿಹಾರ ಬಿಡುಗಡೆಯಾದ ವೇಳೆ ಹೆಚ್ಚಿನ ಫೀಜು ವಸೂಲಿ ಮಾಡುವ ಮೂಲಕ ಕಕ್ಷೀದಾರರಿಂದಲೂ ನ್ಯಾಯಾಲಯದ ಆವರಣದಲ್ಲಿಯೇ ಛೀಮಾರಿ ಹಾಕಿಕೊಂಡಿದ್ದಾರೆ. ಆದರೂ ಸಹ ಕೆ.ಬೋರೇಗೌಡ ಅವರ ವಿರುದ್ದ ತಾಲ್ಲೂಕು ವಕೀಲರ ಸಂಘವು ಯಾವುದೇ ಬಹಿರಂಗ ಹೇಳಿಕೆ ನೀಡಿರಲಿಲ್ಲ. ಆದರೆ ಈಗ ಅವರೇ ತಾಲ್ಲೂಕು ವಕೀಲರ ಸಂಘಕ್ಕೆ ಯಾವುದೇ ಮಾಹಿತಿ ನೀಡದೇ ಮಾಧ್ಯಮಗಳ ಮೂಲಕ, ಸಾಮಾಜಿಕ ಜಾಲತಾಣಗಳ ಮೂಲಕ ತಾಲ್ಲೂಕು ವಕೀಲರ ಸಂಘ ಹಾಗೂ ಹಿರಿಯ ವಕೀಲರ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೆ.ಬೋರೇಗೌಡ ಅವರ ವಿರುದ್ದ ದಾಖಲೆ ಬಿಡುಗಡೆ ಮಾಡಿ ಕಾನೂನು ಬಾಹಿರ ಕೃತ್ಯಗಳಲ್ಲಿ ಬಾಗಿಯಾಗಿರುವ ಕೆ.ಬೋರೇಗೌಡ ಅವರು ವಕೀಲರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಬೋರೇಗೌಡ ಅವರು ಇದೂವರೆವಿಗೂ ಮಾಡಿರುವ ಕಾನೂನು ಬಾಹಿರ ಕೆಲಸಗಳ ಬಗ್ಗೆ ದಾಖಲೆಗಳನ್ನು ಪ್ರದರ್ಶನ ಮಾಡಿ, ವಕೀಲ ವೃತ್ತಿಗೆ ಕೆ.ಬೋರೇಗೌಡ ನಾಲಾಯಕ್ ಎಂದು ಗಂಭೀರ ಆರೋಪ ಮಾಡಿದರು. ಅಲ್ಲದೇ ಕೆ.ಬೋರೇಗೌಡ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಯಾವುದೇ ಹುರಳಿಲ್ಲ. ಸುಳ್ಳು ದೂರು ದಾಖಲಿಸುವ ತಾಲ್ಲೂಕು ವಕೀಲರ ಸಂಘಕ್ಕೆ ಹಾಗೂ ಸಂಘದ ಪದಾಧಿಕಾರಿಗಳಿಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಎಮ್.ಆರ್.ಪ್ರಸನ್ನಕುಮಾರ್, ಗಂಜಿಗೆರೆ ಲೋಕೇಶ್, ಕೆಎನ್.ನಾಗೇಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ವಕೀಲರಾದ ಕೆ.ಎನ್.ನಾಗೇಗೌಡ, ಕೆ.ಆರ್.ಮಹೇಶ್, ಗಂಜಿಗೆರೆ ಜಿ.ಜೆ.ಲೋಕೇಶ್, ತಾಲ್ಲೂಕು ವಕೀಲರ ಸಂಘದ ಉಪಾಧ್ಯಕ್ಷ ಪುರುಷೋತ್ತಮ್, ನಿರಂಜನ್, ಶಂಕರೇಗೌಡ ಸೇರಿದಂತೆ ಹಲವು ವಕೀಲರುಗಳು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
