ತುಮಕೂರು: ವೈದ್ಯಕೀಯ ಲೋಕದ ಯಶಸ್ಸು ಮನುಷ್ಯನ ವೃತ್ತಿ ನೈಪುಣ್ಯತೆ ಮೇಲೆ ನಿರ್ಣಾಯಕವಾಗಿದೇಯೇ ಹೊರತು, ತಂತ್ರಜ್ಞಾನದ ಮೇಲೆಲ್ಲ ಎಂದು ಮೈಸೂರಿನ ಜೆ.ಎಸ್.ಎಸ್.ಉನ್ನತ ಶಿಕ್ಷಣ ಅಕಾಡೆಮಿಯ ಕುಲಪತಿಗಳಾದ ಡಾ. ಹೆಚ್.ಬಸವನಗೌಡಪ್ಪರವರು ತಿಳಿಸಿದರು.
ನಗರದ ಶಿರಾರಸ್ತೆಯ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ವತಿ¬ ಶ್ರೀದೇವಿ ಆಸ್ಪತ್ರೆಯ ಅಡಿಟೋರಿಯಂ ಸಭಾಂಗಣದಲ್ಲಿ “ಮೂರನೇ ಬ್ಯಾಚ್ನ (2022) ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗೆ” ಪದವಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ್ದ ಡಾ. ಹೆಚ್.ಬಸವನಗೌಡಪ್ಪರವರು ಮಾತನಾಡುತ್ತಾ ಹೊಸ-ಹೊಸ ಅವಿಷ್ಕಾರಗಳಿಂದಾಗಿ ತಂತ್ರಜ್ಞಾನ ಎಷ್ಟೇ ಉನ್ನತಿಗೊಂಡರೂ ವೈದ್ಯಕೀಯ ಚಿಕಿತ್ಸೆಯಲ್ಲಿ ಮನುಷ್ಯನ ಬುದ್ದಿಶಕ್ತಿ ನಿರ್ಣಾಯಕ. ಆರ್ಟಿಫಿಶಿಯಲ್ ಇಂಟಲಿಜೆನ್ಸ್, ರೋಬೋಟಿಕ್ ತಂತ್ರಜ್ಞಾನ ಇತ್ಯಾದಿಗಳು ಮನುಷ್ಯನ ಸಾಮರ್ಥ್ಯಗಳಿಗೆ ಪೂರಕವಾಗುತ್ತವೆ. ಆದರೆ ಅವು ರೋಗದೃಢೀಕರಣ, ಚಿಕಿತ್ಸೆ ಸಂದರ್ಭಗಳಲ್ಲಿ ಮನುಷ್ಯ ನಿರ್ವಹಿಸಬೇಕಾದ ಪಾತ್ರಕ್ಕೆ ಪರ್ಯಾಯವಾಗಲಾರವು. ಮುಂದಿನ ತಲೆಮಾರಿನ ಭವಿಷ್ಯ ಮತ್ತು ಆರೋಗ್ಯ ಕಾಪಾಡುವಲ್ಲಿ ವೈದ್ಯರ ಪಾತ್ರ ಮಹತ್ತರವಾಗಿದೆ ಎಂದರು.
ಇದನ್ನು ಓದಿ: ತುಮಕೂರು : ಕಂದಾಯ ಇಲಾಖೆಯ ಪ್ರಕರಣಗಳ ಸಮಯನಿಗಧಿಗೆ ವಕೀಲರ ಸಂಘದ ಮನವಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ರವರು ಶಿಕ್ಷಣ ತಂತ್ರಜ್ಞಾನ ಆರ್ಥಿಕ ವಲಯದಲ್ಲಿ ದೇಶ ಅಸಾಧಾರಣ ಸಾಧನೆ ಮಾಡಿದ್ದರೂ, ಗ್ರಾಮೀಣ ಭಾಗದಲ್ಲಿ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ನಿರೀಕ್ಷಿತ ಗುರಿ ಸಾಧಿಸಲಾಗಿಲ್ಲ. ಈ ನಿಟ್ಟಿನಲ್ಲಿ ವೃತ್ತಿಗೆ ಕಾಲಿಡುತ್ತಿರುವ ವೈದ್ಯರು ಗಮನ ಹರಿಸಬೇಕಾಗಿದೆ. ಉತ್ತಮ ಶೈಕ್ಷಣಿಕ ವಾತಾವರಣದ ಕಾರಣದಿಂದಾಗಿ ಶ್ರೀದೇವಿ ಕಾಲೇಜಿನಲ್ಲಿ ವರ್ಷದಿಂದ ವರ್ಷಕ್ಕೆ ವೈದ್ಯಕೀಯ ವಿದ್ಯಾರ್ಥಿಗಳ ಪ್ರವೇಶ ಹೆಚ್ಚಾಗುತ್ತಿದೆ ಇದಕ್ಕೆ ಕಾಲೇಜಿನ ಬೋಧಕ-ವರ್ಗದವರು ಕಾರಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಶ್ರೀದೇವಿ ವೈದ್ಯಕೀಯ ಕಾಲೇಜಿನ ನಿರ್ದೇಶಕರಾದ ಡಾ.ರಮಣ್ಎಂ.ಹುಲಿನಾಯ್ಕರ್ರವರು ಮಾತನಾಡುತ್ತಾ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಶ್ರೀದೇವಿ ಶಿಕ್ಷಣ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್ ಪಾಟೀಲ್, ಟ್ರಸ್ಟಿಗಳಾದ ಡಾ.ಲಾವಣ್ಯ, ಅಂಬಿಕಾ ಹುಲಿನಾಯ್ಕರ್, ಡಾ.ಎಂ.ಎಲ್.ಹರೇಂದ್ರಕುಮಾರ್, ಡಾ.ಕೆ.ಮೋಹನ್ಕುಮಾರ್, ಡಾ.ರೇಖಾಗುರುಮೂರ್ತಿ, ಡಾ.ಹೇಮಂತ್ರಾಜ್ ಇತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ

[…] ಇದನ್ನು ಓದಿ: ತುಮಕೂರು: ವೃತ್ತಿ ನೈಪುಣ್ಯತೆಯಿಂದ ವೈದ್ಯಕ… […]