ಕೊರಟಗೆರೆ- ತಾಲ್ಲೂಕಿನ ಕೋಳಾಲ ಹೋಬಳಿಯ ಇತಿಹಾಸ ಪ್ರಸಿದ್ಧ ಹಾಗೂ ಭಾಗದ 32 ಹಳ್ಳಿಗಳ ಶಕ್ತಿ ದೇವತೆ ಮಾವತ್ತೂರುಅರಸಮ್ಮ ದೇವಸ್ಥಾನದ ಬಳಿ ಪಿ.ಎನ್. ಕೃಷ್ಣಮೂತಿ೯ ಕುಟುಂಬದಿಂದ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ.
ಮುಖಂಡರಾದ ಪಿ.ಎನ್. ಕೃಷ್ಣಮೂತಿ೯ ರವರು ಮಾತನಾಡಿ, ಅರಸಮ್ಮ ದೇವಿ ನಮ್ಮ ಮನೆದೇವರು ನಾವು ಚಿಕ್ಕ ವಯಸ್ಸಿನಲ್ಲಿ ನಮ್ಮ ತಾಯಿಯವರು ನಮ್ಮ ಜಮೀನಿನಲ್ಲಿ ಚಿಕ್ಕ ಚಿಕ್ಕ ಕಲ್ಲುಗಳನ್ನು ಇಟ್ಟು ಪೂಜೆ ಮಾಡುತ್ತಿದ್ದರು. ವರ್ಷದಲ್ಲಿ ಒಂದು ಬಾರಿ ಬಂದು ಮಾವತ್ತೂರು ಅರಸಮ್ಮ ದೇವಿಯ ನಮ್ಮ ತಂದೆ ತಾಯಿ ಜೊತೆಯಲ್ಲಿ ಬಂದು ಪೂಜೆ ಸಲ್ಲಿಸಿ ಹೋಗುತ್ತಿದ್ದೆ. ಅರಸಮ್ಮ ದೇವಿ ಎಂದರೆ ನಮ್ಮ ತಂದೆ ತಾಯಿಗೆ ಹೆಸರುವಾಸಿ ದೇವರು. ಈ ಊರಿನ ಹಾಗೂ ಸುತ್ತಮುತ್ತಲಿರುವ ಜನರು ಕೂಡ ಬಹಳ ವಿಶ್ವಾಸದಿಂದ ನನ್ನ ಜೊತೆ ಇರುತ್ತಾರೆ. ಹಿಂದೆ ನಾನು ಜಿಲ್ಲಾ ಪಂಚಾಯಿತಿ ಸದಸ್ಯ ಹಾಗಿದ್ದಾಗ ಹಲವಾರು ಹಳ್ಳಿಗಳಲ್ಲಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದು. ಈಗಲೂ ಕೂಡ ಶಾಶ್ವತವಾಗಿವೆ.

ಇದೆ ದೇವಸ್ಥಾನದ ಕಾಂಪೌಂಡ್ ಕೂಡ ನಿರ್ಮಾಣ ಮಾಡಿದ್ದೆ. ಈ ಭಾಗದ ಜನರ ಹಾಗೂ ಭಕ್ತರ ಅನುಕೂಲಕ್ಕಾಗಿ ಸಮುದಾಯ ಭವನ ನಿರ್ಮಾಣ ಮಾಡಿ ಎಂದು ಈ ಭಾಗದ ಜನರ ಬಹಳ ದಿನಗಳಿಂದ ಬೇಡಿಕೆಯಾಗಿತು. ಅದರಂತೆ ಸಮುದಾಯ ಭವನ ನಿರ್ಮಾಣ ಹಂತದಲ್ಲಿ ಇದ್ದು. ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪ್ರತಿ 6 ಹೋಬಳಿಗಳಲ್ಲಿ ಎರಡು ಸಮುದಾಯ ಭವನವನ್ನು ಕಟ್ಟುವ ಹಾಗೂ ಬಡವರ ಅನುಕೂಲಕ್ಕಾಗಿ ಕೆಲಸವನ್ನು ಮಾಡಬೇಕೆಂದು ನನ್ನ ಕನಸು. 20 ವರ್ಷಗಳ ಕಾಲ ರಾಜಕೀಯ ಸೇವೆ.
ಅರಸಮ್ಮದೇವಿಯ ದೇವಸ್ಥಾನ ಬಳಿ 70 ಲಕ್ಷಕ್ಕೂ ಹೆಚ್ಚು ನೂತನ ಸಮುದಾಯ ಭವನದ ಮೇಲ್ಚಾವಣಿ ಪೂಜೆ ಪ್ರಾರಂಭ:
ಪಿ. ಎನ್. ಕೃಷ್ಣಮೂರ್ತಿ ಕುಟುಂಬದವರು ಮೊದಲು ಅರಸಮ್ಮ ದೇವಿಯ ಪೂಜೆ ಸಲ್ಲಿಸಿ. ನಂತರ ನನ್ನ ಸ್ವಂತ ಹಣದಿಂದ ಎಪ್ಪತ್ತು ಲಕ್ಷಕ್ಕೂ ಹೆಚ್ಚು ಸಮುದಾಯ ಭವನದ ಕೆಳ ಹಂತದ ಕೆಲಸ ಮುಗಿದಿದ್ದು. ನಂತರ ಮೇಲ್ಛಾವಣಿ ಪ್ರಾರಂಭಕ್ಕಾಗಿ ಕುಟುಂಬದವರಿಂದ ಪೂಜೆ ಸಲ್ಲಿಸಿ ಪ್ರಾರಂಭ ಮಾಡಲಾಗಿತ್ತು. ಸಮುದಾಯ ಭವನ ಕಟ್ಟಡಕ್ಕೆ ಕಾರ್ಯಕರ್ತರಾದ ಸಿದ್ದಲಿಂಗಯ್ಯ ಅವರ ಹೆಸರು ಇರುತ್ತದೆ.

ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ವಾತಾವರಣ ಸೃಷ್ಟಿಯಾಗಿದ್ದು. ಪಿ.ಎನ್. ಕೃಷ್ಣಮೂರ್ತಿ ರವರಿಗೆ ಕೊರಟಗೆರೆ ವಿಧಾನಸಭಾ ಕ್ಷೇತ್ರ ಹೊಸದೇನಲ್ಲ.ಅವರು ಕಳೆದ 20 ವರ್ಷಗಳಿಂದ ಕ್ಷೇತ್ರದ ಜನರ ನಾರಿ-ಮಿಡಿತ ಅರಿತಿದ್ದು. ಕೊರಟಗೆರೆ ಹಲವಾರು ಕಾರ್ಯಕ್ರಮಗಳು ಹಾಗೂ ದೊಡ್ಡ ಮಟ್ಟದ ದಸರಾ ಹಬ್ಬದ ಸಂದರ್ಭದಲ್ಲಿ ವರ್ಷದಿಂದ ವರ್ಷಕ್ಕೆ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿದ್ದಾರೆ.

ಕೊರಟಗೆರೆ ವಿಧಾನಸಭಾ ಕ್ಷೇತ್ರ ಮುಂದಿನ ದಿನಗಳಲ್ಲಿ ಜನರ ಆಸೆಯಂತೆ ನಾನು ಚುನಾವಣೆ ನಿಲ್ಲುವುದು ಶತಸಿದ್ಧ ಎಂದು ಹೇಳಿದರು.
ವರದಿ- ನರಸಿಂಹಯ್ಯ ಹೊಸಕೋಟೆ
