‘ಸತ್ಯ’ ಒಂದು ತರಹದ ಕಹಿ ಅಥವ ಕಹಿ ಗುಳಿಗೆ (bitter pill). ನಾನು ಸತ್ಯವನ್ನು ಎಂದೂ ಅಮೃತವಾಗಿ ನೋಡಿಲ್ಲ. ಸತ್ಯವನ್ನು ನುಡಿದವರು ಚಿರ ಕಾಲ ಉಳಿಯುವುದಿಲ್ಲ. ಸತ್ಯ ಎಂಬುದು ಮನುಷ್ಯನ ಒಳ ಹೋದರೆ ಇತರರು ಆತನ ಮೇಲೆ ದ್ವೇಷ ಕಾರುವುದರಲ್ಲಿ ಅನುಮಾನವಿಲ್ಲ. ಯಾರಲ್ಲಿ ಯಾವಾಗ ಒಳ ಹೂಕ್ಕ ಸತ್ಯ ಸಂಸ್ಕಾರಗೊಂಡು ಸಹಾನುಭೂತಿಯಾಗಿ ಪರಿವರ್ತನೆಗೊಳ್ಳುತ್ತೋ ಅಂದು ಸತ್ಯ ಅಮೃತವಾಗಿ ಆತನಲ್ಲಿ ಹೂರ ಹೊಮ್ಮುತ್ತದೆ. ಈ ಅನುಭೂತಿ ಒಂದು ಅಧ್ಯಾತ್ಮಿಕ ವಿಷಯ.
ಒಮ್ಮೆ ಸಂತರೊಬ್ಬರು ತಮ್ಮ ಭಕ್ತರನ್ನು ಉದ್ದೇಶಿಸಿ ಪ್ರವಚನ ನೀಡುತ್ತಿದ್ದರು. ಮಾನವನ ಸೃಷ್ಟಿ, ಅವನ ಉದ್ದೇಶ ಮತ್ತು ಈತನ ಕೊನೆ ಎಂಬುದೆಲ್ಲಾ ಇವರ ಪ್ರವಚನದ ಮೂಲ ತತ್ವವಾಗಿತ್ತು. ಮೊದಲನೆಯ ಸಾಲಿನಲ್ಲೇ ಕೂತಿದ್ದ ವ್ಯಕ್ತಿಯೊಬ್ಬರು ಹಣವುಳ್ಳವರಾಗಿದ್ದು ವಜ್ರದ ಹರಳಿನಿಂದ ಸಿಂಗಾರಗೊಂಡಿದ್ದ ಗಡಿಯಾರವನ್ನು ಕಟ್ಟಿಕೊಂಡಿದ್ದರು. ಪ್ರವಚನದ ಕಡೆ ಗಮನವಿಲ್ಲದ ಈತನಿಗೆ ತಾನು ಕಟ್ಟಿಕೊಂಡಿದ್ದ ಗಡಿಯಾರದ ಕಡೆ ಸಂತರ ಗಮನವನ್ನು ಸೆಳೆಯುವ ಉದ್ದೇಶವಾಗಿತ್ತು. ಆತನು ಹಲವಾರು ಬಾರಿ ಗಡಿಯಾರ ಕಟ್ಟಿಕೊಂಡಿದ್ದ ಕೈ ಎತ್ತುವುದು, ಆ ಕೈಯಿಂದ ತನ್ನ ಕೂದಲನ್ನು ಸರಿಪಡಿಸಿಕೊಳ್ಳುವುದು ಹಾಗು ಜೋರಾಗಿ ಚಪ್ಪಾಳೆ ತಟ್ಟುವುದು ಮಾಡುತ್ತಿದ್ದ . ಇದನ್ನೆಲ್ಲಾ ಈ ಮಹಾನ್ ಸಂತರು ತಮ್ಮ ಕಿರುಕಣ್ಣಲ್ಲೇ ನೋಡುತ್ತಿದ್ದರು.
ವೇದ ಪ್ರಬುದ್ಧ ಸಂತರು ಭಕ್ತನ ವರ್ತನೆಯನ್ನು ನೋಡಿ ಬಹು ತಾಳ್ಮೆಯಿಂದ ಆತನನ್ನು ನೋಡಿದ್ದಲ್ಲದೆ ಹತ್ತಿರ ಬರಲು ಸನ್ನೆ ಮಾಡಿದರು. ಭಕ್ತನಿಗೆ ಆನಂದವೋ ಆನಂದ ಮತ್ತು ಆಕಾಶ ಮೂರೇ ಗೇಣು. ಮನಸ್ಸಿನಲ್ಲೇ ಆತ ಸಾವಿರಾರು ಜನರ ಮುಂದೆ ಗುರುತಿಸಿಕೊಂಡೆನೆಲ್ಲಾ ಎಂಬುದರ ಚಿಂತನೆ ಮತ್ತು ನಡುವಳಿಕೆ ಅವರದಾಗಿತ್ತು. ಸಂತರ ಬಳಿ ಹೋಗಿ ಸಾಷ್ಟಾಂಗ ನಮಸ್ಕಾರ ಮಾಡಿ ಸಂತರ ಎದುರಿಗೆ ಕೂತರು. ಸಂತರು ಮುಗುಳ್ನಗೆ ನೀಡಿ ಆಶೀರ್ವದಿಸಿದರು. ಇವರ ಕ್ಷೇಮ ಸಮಾಚಾರಗಳನ್ನು ಕೇಳಿ ಆವರು ಧರಿಸಿರುವ ಗಡಿಯಾರವನ್ನು ನೀಡಲು ಹೇಳಿದರು. ಅವರು ಗಡಿಯಾರವನ್ನು ನೀಡಿದ್ದಲ್ಲದೇ ಕುಣಿಯುವುದೊಂದು ಬಾಕಿ ಇತ್ತು. ಸಂತರು ಎದ್ದು ಆ ಗಡಿಯಾರವನ್ನು ಅಲ್ಲಿ ನೆರೆದಿದ್ದ ಭಕ್ತರಿಗೆ ತೋರಿಸಿದರು.
ಗಡಿಯಾರವನ್ನು ಉದ್ದೇಶಿಸಿ “ನೋಡಿ ಗೆಳೆಯರೇ, ವಾಸ್ತವ್ಯದಲ್ಲಿ ಇದು ವಜ್ರದ ಗಡಿಯಾರ. ಸುಮಾರು ಲಕ್ಷ ಮೌಲ್ಯದ ಗಡಿಯಾರ. ಇರಲಿ, ಆದರೇ ವೇದಾಂತಿಕ ಸಿದ್ಧಾಂತ ಅಡಿಯಲ್ಲಿ ಇದರ ಬೆಲೆ ಶೂನ್ಯ” ಎಂದರು. ಈ ವಿಷಯವನ್ನು ಕೇಳುತ್ತಲೇ ಆ ಭಕ್ತರ ಹೃದಯ ಬಡಿತ ನಿಂತತೆ ತಮ್ಮ ಎಡ ಕೈಯಿಂದ ಎದೆಯ ಮೇಲೆ ಇಟ್ಟು ಕೊಂಡರು. ಆ ಭಕ್ತರ ಅಹಂಕಾರವು ದೊಪ್ಪೆಂದು ಅಕಾಶದಿಂದ ನೆಲಕ್ಕೆ ಬಿತ್ತು. ಅವಕ್ಕಾದ ಭಕ್ತರಿಗೆ ಆ ಸಂತರು ಮತ್ತೇನು ಹೇಳುವರೆಂಬ ಕುತೂಹಲ ಕಾಡತೊಡಿಗಿತು. ಸತ್ಸಂಗದಲ್ಲಿ ನೆರೆದಿದ್ದ ಭಕ್ತರಿಗೂ ಆಶ್ಚರ್ಯ ಮತ್ತು ಕೌತುಕ. ಕೆಲವರು ಹೇಗೆ ಸಾಧ್ಯ ಎಂಬುದಾಗಿ ಸಂತರನ್ನು ಪ್ರಶ್ನಿಸಿದರು. ತಾಳ್ಮೆಯಿಂದಲೇ ಸಂತರು ಈ ಗಡಿಯಾರವನ್ನು ಮೇಲೇತ್ತಿ “ಭಕ್ತರೇ ಎಲ್ಲರೂ ಒಮ್ಮೆ ಈ ವಜ್ರದ ಗಡಿಯಾರವನ್ನು ನಿಮ್ಮ ಮನಸ್ಸಿನಲ್ಲೇ ಸ್ವಲ್ಪ ಸಮಯ ಇಟ್ಟುಕೊಳ್ಳಿ” ಎಂದರು. ಸತ್ಸಂಗದಲ್ಲಿ ನಿಶ್ಯಬ್ದದ ವಾತಾವರಣ ಇದ್ದು ನಿಮಿಷಗಳು ಕಳೆದ ನಂತರ ಸಂತರು “ಇಲ್ಲಿ ಯಾರಾದರೂ ವಿಜ್ಞಾನಿ ಇದ್ದೀರಾ” ಎಂದು ಪ್ರಶ್ನೆ ಹಾಕಿದರು. ವಿಜ್ಞಾನಿಯೊಬ್ಬರು ಎದ್ದು ನಿಂತು “ನಾನು ವಿಜ್ಞಾನಿ ಮಹಾಸ್ವಾಮಿ” ಎಂದು ಪರಿಚಯ ಮಾಡಿಕೊಂಡರು. “ನೀವು ವಿಜ್ಞಾನಿ, ಈ ಗಡಿಯಾರ ನೋಡಿ ನಿಮಗೆ ಏನನ್ನುಸುತ್ತೆ?” ಎಂದು ಸಂತರು ಕೇಳಿದಾಗ ವಿಜ್ಞಾನಿಯ ಮನಸ್ಸಿನಲ್ಲಿ ಅದು ಬರೀ ವಜ್ರದ ಗಡಿಯಾರ ಆಗದೆ time machine ಹೇಗೆ ಆವಿಷ್ಕಾರಿಸಬಹುದೆಂಬ ವಿಚಾರ ಆಗಿತ್ತು. ಅಕ್ಕಸಾಲಿಗನನ್ನು ವಿಚಾರಿಸಿದಾಗ, ಹೇಗೆ ಈ ಗಡಿಯಾರವನ್ನು ಚಿನ್ನದಿಂದ ಅಲಂಕೃತಿಸಬಹುದೆನ್ನುವ ವಿಷಯ ಇವರದಾಗಿತ್ತು. ಸಾಹುಕಾರನನ್ನು ವಿಚಾರಿಸಿದಾಗ, ಈ ಗಡಿಯಾರವನ್ನು ಖರೀದಿ ಮಾಡಿ ತಮ್ಮಖಜಾನೆಯನ್ನು ವೃದ್ಧಿಸುವ ಯೋಚನೆಯಾಗಿತ್ತು. ಆಲ್ಲಿ ನೆರೆದಿದ್ದ ಒಬ್ಬ ಪ್ರಿಯತಮನನ್ನು ವಿಚಾರಿಸಿದಾಗ, ಪ್ರಿಯತಮೆಗೆ ಹೇಗೆ ಈ ವಜ್ರದ ಗಡಿಯಾರವನ್ನು ಕೊಡಬೇಕೆನ್ನುವುದರ ವಿಚಾರವಾಗಿತ್ತು. ಕೊನೆಯದಾಗಿ ಸಂತರು “ಇಲ್ಲಿ ಯಾರಾದರೂ ಕಳ್ಳರಿದ್ದಾರ?”, ಅಲ್ಲಿಯೇ ಕುಳಿತಿದ್ದ ಕುರುಚಲು ಗಡ್ಡದ ಸಾಧಾರಣ ಮೈ ಕಟ್ಟಿನ ಮೂವತ್ತರ ವಯೋಮಾನದ ವ್ಯಕ್ತಿ ಅತ್ತಿತ್ತ ನೂಡಿ ಬಹು ವಿನಮೃತೆಯಿಂದ “ಅಪ್ಪಣೆ” ಎಂದ. ಸಂತರು “ಬೇಷ್, ನಿನ್ನ ಧೈರ್ಯಕ್ಕೆ ಮೆಚ್ಚಿದೆ, ವಜ್ರದ ಗಡಿಯಾರ ನಿನಗೇನ್ನುಸುತ್ತೆ?” ಎಂದು ಕೇಳಿದಾಗ, “ನಾನು ಹೇಗೆ ಕಳ್ಳತನ ಮಾಡಬಹುದು ಎಂಬುದಾಗಿ ಯೋಚಿಸುತ್ತೇನೆ” ಎಂದು ಉತ್ತರ ಕೊಟ್ಟ.
ಸಂತರು ವಜ್ರದ ಗಡಿಯಾರವನ್ನು ಹಣವಂತನಿಗೆ ನೀಡಿ ಈ ಗಡಿಯಾರದ ಬೆಲೆ ಹೇಗೆ ಶೂನ್ಯವೆಂಬುದರ ತತ್ವ ಸಿದ್ಧಾಂತವನ್ನು ಮಂಡಿಸಲು ಶುರು ಹಚ್ಚಿದರು “ಸ್ನೇಹಿತರೇ, ನಿಮ್ಮ ಗಮನವನ್ನು ನನ್ನ ಕಡೆ ಕೇಂದ್ರಿಕರಿಸಿ. ನಿಮ್ಮೆಲ್ಲರಿಗೂ ಇದು ವಾಸ್ತವದಲ್ಲಿ ವಜ್ರದ ಗಡಿಯಾರ. ನಿಮ್ಮ ನಿಮ್ಮ ಮನಸ್ಸಿನಲ್ಲೂ ಈ ಗಡಿಯಾರ ಎರಡು ಆಯಾಮಗಳ ವಸ್ತುನಿಷ್ಟೆಯಷ್ಟೆ. ಈ ಮಾನಸಿಕ ಸಿದ್ಧಾಂತ ನಿಜ ಅಲ್ಲವೇ. ಅದರೆ ವ್ಯಕ್ತಿಗಳ ವೃತ್ತಿಯ ಅನುಗುಣವಾಗಿ ಈ ಗಡಿಯಾರಕ್ಕೆ ತಮ್ಮ ತಮ್ಮ ಮನಸ್ಸಿನಲ್ಲಿ ವಿವಿಧ ಬಣ್ಣಗಳಿಂದ ಲೇಪನವನ್ನು ಮಾಡಿದ್ದಾರೆ. ಒಂದೇ ಬಣ್ಣವನ್ನು ಉಪಯೋಗಿಸಿಲ್ಲ. ನೀವೆಲ್ಲ ಕೇಳಬಹುದು ಆ ಬಣ್ಣ ಯಾವುದೆಂದು. ಆ ಬಣ್ಣವೇ ‘ಅನುಕಂಪ’. ಇಲ್ಲಿ ಯಾರಾದರೂ ಈ ಗಡಿಯಾರಕ್ಕೆ ಅನುಕಂಪ ತೋರಿದಿರಾ? ಇಲ್ಲ ಅಲ್ಲವೆ. ‘ವಸ್ತು’ ಆಥವ ‘ವಿಷಯ’ ಗಳಿಗೆ ಎಂದು ಎಲ್ಲರೂ ಎಂದು ಒಂದೇ ಬಣ್ಣವನ್ನು ಹಚ್ಚುತ್ತಾರೂ ಅಂದು ಆ ವಸ್ತು ಅಥವ ಆ ವಿಷಯ ನಗನಾಣ್ಯಗಳಿಂದ ಕೂಡಿದ್ದಾಗಿರುತ್ತೆ”.
ಮುಂದುವರಿದು “ಈ ವಜ್ರದ ಗಡಿಯಾರದ ವಸ್ತುನಿಷ್ಟೆ Mr Possessor ಗೆ ಮಾತ್ರ. ಇತರರಿಗೆ ಒಂದು Show Piece ಅಷ್ಟೆ. ಮಾನವರ ಬಣ್ಣ ಯಾವುದೆಂದರೆ ಪ್ರೀತಿ, ವಾತ್ಸಲ್ಯ, ಸಹಾನು ಭೂತಿ, ಸಹ ಬಾಳ್ವೆ, ಸಹ ಜೀವನ, ಸಹಭಾಗತ್ವ ಇತ್ಯಾದಿ. ಇಂತಹ ಪರಮ ನಿಷ್ಟೆಗಳೇ ” ಸತ್ಯ” ಹೌದಲ್ಲವೇ” ಅಂದರು.
ಇದರಿಂದ ನಮಗೆ ತಿಳಿಯುವುದೇನೆಂದರೆ, In Yogic Suthra, the truth coloured by the Knower or Purusha is only to known, it is aprehending and neither including nor excluding. ಇದರ ಅರ್ಥ, ಮನಸ್ಸನ್ನು ಪೂರ್ಣತೆಯ ಬಣ್ಣದಿಂದ ಲೇಪನ ಮಾಡಿದಾಗ ಸತ್ಯವನ್ನು ಬಂಧಿಸಲು ಆಗುವುದಿಲ್ಲ, ಆತನಿಂದ ಸತ್ಯವನ್ನು ಪ್ರತ್ಯೇಕಿಸಲು ಅಸಾಧ್ಯ ಹಾಗು ಆತನಿಗೆ ಅಸತ್ಯವನ್ನು ಸೇರಿಸಿಕೊಳ್ಳಲೂ ಕಷ್ಟಕರ. ಆದುದರಿಂದ ನಮ್ಮ ನಮ್ಮ ಆತ್ಮ ನಿಷ್ಠೆ ಅಥವ ಆತ್ಮ ಸಾಕ್ಷಿಯ ಬಲವನ್ನು ವರ್ಧಿಸಿದರೆ ಸತ್ಯವನ್ನು ಜಗತ್ತೆಲ್ಲಾ ಹರಡಬಹುದು. ಸಂತರ ಸತ್ಸಂಗವನ್ನು ಆಲಿಸಿದ ಹಣವಂತರು ತಮ್ಮ ವಜ್ರದ ಗಡಿಯಾರವನ್ನು ಲಾಕರ್ನಲ್ಲಿ ಇಟ್ಟು ಮತ್ತೆ ಆ ದಿಕ್ಕಿನ ಕಡೆ ತಲೆ ಹಾಕಲಿಲ್ಲ…
ಮುಂದುವರಿಯುವುದು…..
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ


[…] ಇದನ್ನು ಓದಿ: ವಜ್ರದ ಗಡಿಯಾರ (ಅಧ್ಯಾತ್ಮಿಕ ಚಿಂತನೆ) […]