ಟಿ.ನರಸೀಪುರ : ಭಾರತ ದೇಶದಲ್ಲಿ ಪೊಲೀಯೋ ಪ್ರಕರಣಗಳು ಇಲ್ಲದಿರಲು ಮುಖ್ಯ ಕಾರಣ ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಗೌರವಾನ್ವಿತ ವೈದ್ಯರ ಸಹಕಾರ ಮತ್ತು ಕರ್ತವ್ಯ ನಿಷ್ಠೆ ಎಂದು ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಚ್.ಹನುಮಂತು ತಿಳಿಸಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪಲ್ಸ್ ಪೊಲೀಯೋ ಕಾರ್ಯಕ್ರಮಕ್ಕೆ ಮಕ್ಕಳಿಗೆ ಪೊಲೀಯೋ ಹನಿ ಬಾಯಿಗೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿ ಪೋಷಕರು ತಮ್ಮ ಮಕ್ಕಳಿಗೆ ಪೊಲೀಯೋ ಹನಿ ಹಾಕಿಸಲು ಬೇಜವಾಬ್ದಾರಿತನ ತೋರಿಸದೇ ನಿಮ್ಮ ಹತ್ತಿರದ ಆರೋಗ್ಯ ಕೇಂದ್ರ ಅಥವಾ ಪೊಲೀಯೋ ಬೂತ್ ಗಳಿಗೆ ಹೋಗಿ ತಪ್ಪದೆ ಲಸಿಕೆ ಹಾಕಿಸಿ ತಮ್ಮ ಮಕ್ಕಳನ್ನು ಅಂಗವಿಕಲತನದಿಂದ ರಕ್ಷಿಸಿ ಎಂದರು.

ಡಾ.ರವಿಕುಮಾರ್ ಮಾತನಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 2025 ನೇ ಸಾಲಿನ “ರಾಷ್ಟ್ರೀಯ ಪಲ್ಸ್ ಪೋಲಿಯೋ” ಕಾರ್ಯಕ್ರಮವನ್ನು ದಿನಾಂಕ 21-12-2025 ರಿಂದ 24-12-2025ರ ವರೆಗೆ ರಾಷ್ಟ್ರವ್ಯಾಪ್ತಿ ಹಮ್ಮಿಕೊಂಡಿರುತ್ತಾರೆ.ಸದರಿ ಕಾರ್ಯಕ್ರಮವನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರು ಪೋಲಿಯೋ ಹನಿ ನೀಡುವ ಮೂಲಕ ಚಾಲನೆ ನೀಡಿದಿದ್ದು, ತಾಲ್ಲೂಕಿನಲ್ಲಿ 18,810 ಮಕ್ಕಳು 0-5 ವರ್ಷದೊಳಗಿದ್ದು,234 ಹಳ್ಳಿಗಳಲ್ಲಿ 181 ಪೊಲೀಯೋ ಬೂತ್ ಗಳನ್ನು ತೆರೆಯಲಾಗಿದೆ.5 ಟ್ಯಾನ್ ಸೀಟ್ ಬೂತ್ಗಳನ್ನು ತೆರೆದಿದ್ದು,724 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಾರೆ.ಪೋಷಕರು 5 ವರ್ಷದೊಳಗಿನ ಮಕ್ಕಳನ್ನು ತಾಲ್ಲೂಕಿನಲ್ಲಿ ತೆರೆದಿರುವ ನಿಮ್ಮ,ನಿಮ್ಮ,ಗ್ರಾಮದ ಬೂತ್ ಗಳಿಗೆ ತೆರಳಿ ಪೋಲಿಯೋ ಲಸಿಕೆ ಹಾಕಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಿರಿಯ ನ್ಯಾಯಾಧೀಶರಾದ ಹೆಚ್.ಆರ್.ಸತೀಶ್,ವಕೀಲರ ಸಂಘದ ತಾಲ್ಲೂಕು ಅದ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ,ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್,ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಅಭಿಲಾಶ್,ವಾಟಾಳು ರಾಜಣ್ಣ,ಕೋರ್ಟ್ ಮಾದಪ್ಪ ಸೇರಿದಂತೆ ಆಸ್ಪತ್ರೆ ಇತರೆ ವೈದ್ಯರು,ಶುಶ್ರೂಷಕಿಯರು ಸೇರಿದಂತೆ ಸಿಬ್ಬಂದಿ ವರ್ಗ ಹಾಜರಿದ್ದರು.
ವರದಿ : ಎಂ.ನಾಗೇಂದ್ರಕುಮಾರ್
