ತುಮಕೂರು: ನಗರದ ಕೆಂಪೇಗೌಡ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಕರಿಯಣ್ಣ, ಉಪಾಧ್ಯಕ್ಷರಾಗಿ ಹಿರಿಯ ವಕೀಲರಾದ ಶಿವರಾಮಯ್ಯ ಆಯ್ಕೆಯಾಗಿದ್ದಾರೆ.
ಬ್ಯಾಂಕಿನಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ತೋಟಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿ ಕರಿಯಣ್ಣ ಅಧ್ಯಕ್ಷರಾಗಿ ಮತ್ತು ಹಿರಿಯ ವಕೀಲರು ಹಾಗೂ ನೋಟರಿ ಶಿವರಾಮಯ್ಯ ಅವರು ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ಇದನ್ನು ಓದಿ: ತುಮಕೂರು : ಅಮಾನಿಕೆರೆ ಉದ್ಯಾನವನದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ
ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಎಂ.ಲಿಂಗಣ್ಣ, ಎಸ್.ಅಶೋಕ್, ಜಿ.ಆರ್.ಅನಿಲ್ಕುಮಾರ್, ಬಿ.ಕೆ.ದೊಡ್ಡವೀರಯ್ಯ, ಜಿ.ಸಿ.ಗಂಗಯ್ಯ, ಕೆ.ಹನುಮಂತರಾಯಪ್ಪ, ಹೆಚ್.ಹೆಂಜಾರಪ್ಪ, ಜಿ.ನರಸಿಂಹಪ್ಪ, ಆರ್.ನಾಗರಾಜು, ಹೆಚ್.ಎಸ್.ರಾಜು, ಎಸ್.ಶಶಿಕಲಾ, ಎಂ.ವಿ.ಶಮಂತಕಮಣಿ, ಬಿ.ವಿ.ವಸಂತಕುಮಾರ್, ಮಾಜಿ ಅಧ್ಯಕ್ಷರಾದ ಎಲ್.ಲಿಂಗಣ್ಣ, ಆರ್.ಕಾಮರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ವಿ.ಕುಮಾರ್ ಹಾಗೂ ಸಿಬ್ಬಂದಿ ಹಾಜರಿದ್ದರು.
ಉಪಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ವಕೀಲರಾದ ಶಿವರಾಮಯ್ಯನವರಿಗೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ,ಪ್ರಧಾನಕಾರ್ಯದರ್ಶಿಗಳಾದ ಹಿರೇಹಳ್ಳಿಮಹೇಶ್,ಹಿರಿಯ ವಕೀಲರಾದ ಜೆ.ಕೆ.ಅನಿಲ್, ಡಿ.ಸಿ.ಹಿಮಾನಂದ್, ಬಿ.ಆರ್.ರಾಮಕೃಷ್ಣಯ್ಯ, ಬಿ.ಜಿ.ಸತೀಶ್, ಬಿ.ವಿ.ವಸಂತಕುಮಾರ್, ಶಿವಶಂಕರಯ್ಯ, ಟಿ.ಎಂ.ಧನಂಜಯ, ರವಿಗೌಡ, ಶ್ರೀಮತಿ ಭವ್ಯಶಾನುಭೋಗ್, ವಕೀಲರು,ಹಲವಾರು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಶುಭಹಾರೈಸಿದ್ದಾರೆ.
– ಕೆ.ಬಿ.ಚಂದ್ರಚೂಡ
