ನಮ್ಮ ಶರೀರದ ಅಂಗವಾದ ಮೆದುಳು ವಿಸ್ಮಯದಲ್ಲಿ ವಿಸ್ಮಯ. ಮೆದುಳನ್ನು ಆದಿ ಸ್ವರೂಪಿ ಬ್ರಹ್ಮನಿಗೆ ಹೋಲಿಸಬಹುದು. ಮಾನವನ ಮೂಲ ಧಾತು ಆಕಾಶ, ಬೆಂಕಿ, ನೀರು, ಘನ ಮತ್ತು ವಾಯು. ಇದನ್ನು ವಿಜ್ಞಾನ ಸಾಬೀತು ಪಡಿಸುತ್ತದೆ. ಬ್ರಹ್ಮಾಂಡದಲ್ಲಿ ಅಡಿಗಿರುವ ಗ್ರಹ, ನಕ್ಷತ್ರ, ಪುಂಜ, ಧೂಳು, ಶಕ್ತಿ, ವಿದ್ಯುತ್ ಸ್ಥಿತಿಗಳೆಲ್ಲವು ಮೆದುಳಲ್ಲಿ ನೋಡಬಹುದು.
ನರಗಳು, ನರ ಕೋಶಗಳು, ನರ ಕೇಂದ್ರಗಳು, ನರ ಪುಂಜಗಳು, ನರ ವಿದ್ಯುತ್ ಉತ್ಪಾದನೆ ಹೀಗೆ. ಇವುಗಳು ಮೆದುಳಿನ ಅಂಗ ರಚನೆ ಆದರೆ ಇದರ ಕೆಲಸ ಮಾತ್ರ ಅಸಮಾನ್ಯ. ಹಾಗಾದರೆ ಈ ಅಂಗಾಗದ ಕೆಲಸವಾದರೂ ಏನು? ಕೆಲಸ, ಯೋಚನೆ, ಇಚ್ಚೆ ಮತ್ತು ಭಾವನೆ ಇಷ್ಟೇನಾ? ಮೂಲತಹ ಇವು ಮೆದುಳಿನ ಕೆಲಸಗಳಾದರೂ ಜೊತೆಯಲ್ಲೇ ವಿಶೇಷವಾದ, ವಿಶಿಷ್ಟತೆಯ ಮತ್ತು ವೈಶಿಷ್ಟ್ಯಗಳಿಂದ ಕೂಡಿದ ಅಗಾಧವಾದ ಕೆಲಸವಿದೆ, ಅದನ್ನು “ಅರಿವು” ಎಂದು ಕರೆಯಬಹುದು.
ಇದನ್ನು ಓದಿ: ರೋಬೋಟ್ (ಆಧುನಿಕ ಅಥವಾ ವಾಸ್ತವಿಕ ಬದುಕಿನ ಚಿಂತನೆ)
ಅರಿವಿನ ವಿವರಣೆ “what is perceived and this perception in association or in function with innate emotion in bringing a reason is called cognition.” ಅಂದ್ರೆ ಅರಿಯಲಾದ ಗ್ರಹಿಕೆಯು ಯಾವಾಗ ಭಾವನಾತ್ಮಕವಾಗಿ ಮತ್ತು ಯೋಚನೆಗೆ ತಕ್ಕಂತೆ ಬೆರೆತು ಹೂರ ಹೊಮ್ಮುವ ಉತ್ತರಕ್ಕೆ ಅರಿವು ಎಂದೆನ್ನಬಹುದು. ಇದರಿಂದ ನಮಗೆ ತಿಳಿಯುವುದೇನೆಂದರೆ ನಮ್ಮ ವಿಚಾರಗಳು, ಕೆಲಸಗಳು ಮತ್ತು ಇಚ್ಚಾವಸ್ತುಗಳು ಎಲ್ಲವೂ ತಮ್ಮ ತಮ್ಮ ಭಾವನೆಗಳ ಹಾಗು ಯೋಚನೆಗಳ
ಅನುಗುಣವಾಗಿ ಸ್ಮರಣೆ, ಕೌಶಲ್ಯ, ಪ್ರಜ್ಞೆ, ಕಲೆ, ವಿವೇಕ, ಸ್ಪರ್ಧೆ, ನೋವು ನಲಿವು, ಪ್ರೀತಿ ದ್ವೇಷ, ಸಂಬಂಧ ಇತ್ಯಾದಿಗಳಿಂದ ತುಂಬಿರುವ ದೃಶ್ಯ ಕಾವ್ಯವೇ ಅರಿವು.
“ಮುಕ್ತಿ ಅಥವಾ ಮೋಕ್ಷ” ಉನ್ನತ ಮಟ್ಟದ ಅರಿವು. ಆರಿವಿನಲ್ಲಿ ಕಲಿತ ಮತ್ತು ತಿಳಿದ ವಿದ್ಯಮಾನಗಳ ಸಮ್ಮಿಶ್ರಣವು ಪ್ರಪಂಚದ ಅರಿವಿನೊಂದಿಗೆ ಬೆಸೆದು ಸಾರ್ವಜನಿಕವಾಗಿ ಒಳಿತನ್ನು ಮಾಡುತ್ತೋ ಆ ಅರಿವನ್ನು “ಮುಕ್ತ” ಎನ್ನಬಹುದು. ಎಲ್ಲರ ಬಳಿ ಇಂತಹ ಪ್ರತಿಭೆ ಇರವುದಿಲ್ಲ. ಬಳುವಳಿಯಾಗಿ ಬಂದಿರಬೇಕು, ಇಲ್ಲವಾದರೆ ಕಲಿಯಬೇಕು. ಪ್ರಾಪಂಚಿಕವಾಗಿ ನಮ್ಮ ಅರಿವು ಜಡ ಸಂವೇದನೆ. ಇದನ್ನು ಕ್ರಿಯಾತ್ಮಕವಾಗಿ ಹೊರ ಹೊಮ್ಮಿಸಬೇಕಾದರೆ ನಮ್ಮ ಇಚ್ಚಾ ಬಲವನ್ನು ಅರಿವಿನ ಇಂಧನದಿಂದ ಕಿಡಿ ಹೊತ್ತಿಸಿ ದೂಡಬೇಕು. ಈ ದೂಡುವ ಕಾರ್ಯ ನೆರವೇರಿಸುವುದೇ “ಅರಿವು”. ಸಾಮಾನ್ಯವಾಗಿ ಇಂತಹ ಅರಿವು ನಮಗೆ ಅರಿವಿಲ್ಲದೇ ನಮ್ಮ ಜೀವನ ಪರ್ಯಂತ ನಿರಂತರವಾಗಿ ಸಾಗುತ್ತಿರುತ್ತದೆ. ಈ ಕಾರಣದಿಂದಲೇ ಭೂಮಿ ತಾಯಿ ಇರಬೇಕನ್ನುವುದು. ಎಂದು ಈ ಮಹಾ ತಾಯಿ ಇರುವುದಿಲ್ಲವೊ ಅಂದು ನಾವು ಸಹ ಇರುವುದಿಲ್ಲ.
ಇದನ್ನು ಓದಿ: ಸಾಮಾಜಿಕ ಪರಮಾಣು (ವಾಸ್ತವಿಕ ಚಿಂತನೆ)
ನಮ್ಮ ಅರಿವು ನಮಗೆ ಕಾಣದಂತ ಕ್ರಿಯೆ. ಕಾಣುವಂತಾದನ್ನು ವೃದ್ಧಿ ಮಾಡಿಕೊಳ್ಳಬಹುದು, ಉದಾಹರಣೆಗೆ ಹಣ, ಚಿನ್ನಾಭರಣ, ವಜ್ರ ವೈಢೂರ್ಯ ಇತ್ಯಾದಿ. ಹಾಗಿದ್ದರೆ ನಮ್ಮ ನಿಮ್ಮ ಅರಿವನ್ನು ವೃದ್ಧಿಸಬಹುದೇ? ಖಂಡಿತವಾಗಲೂ ಮಾಡಿಕೊಳ್ಳಬಹುದು. ಹೇಗೆ? ತಿಳಿಸುವ ಮುಂಚೆ ಅರವಳಿಕೆ ತಜ್ಞನನಾದ ನನ್ನ ಸ್ನೇಹಿತ (ಇಂದು ನಮ್ಮ ಜೊತೆ ಇಲ್ಲ) ತಾನು ವಿವರಿಸಿದ್ದ ಅರಿವಳಿಕೆ ವಿಧಾನವನ್ನು ಇಲ್ಲಿ ಹಂಚಿಕೊಳ್ಳುತ್ತೇನೆ.
ನಾನು ಮನೋ ವೈದ್ಯನಾದ್ದರಿಂದ ಕೆಲವು ಮನಸ್ಸಿನ ವ್ಯಾದಿಗಳಿಗೆ ವಿದ್ಯುತ್ ಕಂಪನವನ್ನು ಕೊಡುತ್ತೇನೆ. ಕಂಪನವನ್ನು ಕೊಡುವ ಮುನ್ನ ಅರಿವಳಿಕೆ ತಜ್ಞರಿಂದ ಅರಿವಳಿಕೆ ಕೊಡಿಸಬೇಕಾಗುತ್ತದೆ. ಕಂಪನ ಚಿಕಿತ್ಸೆಯ ನಂತರ ಟೀ ಸವಿಯುವ ಅಭ್ಯಾಸ ನಮ್ಮದು. ಈ ಸಮಯದಲ್ಲಿ ಕೆಲವು ಗಂಟೆಗಳ ಮುನ್ನ ತುಂಡಾದ humerus bone ಗೆ ಪ್ಲೇಟ್ ಅಳವಡಿಸುವ ಶಸ್ತ್ರಚಿಕಿತ್ಸೆಗೆ ಸ್ಥಳೀಯ (brachial plexus) ಅರಿವಳಿಕೆಯನ್ನು ಆತ ಕೂಟ್ಟಿದ್ದನ್ನು ವಿವರಿಸಿದ್ದ. ಈ ನರ ಸಂಕೀರ್ಣವು ನಮ್ಮ ಬುಜದ ಕೆಳಗೆ ಹಾದುಹೋಗುವದು.
ಇದನ್ನು ಓದಿ: ವಜ್ರದ ಗಡಿಯಾರ (ಅಧ್ಯಾತ್ಮಿಕ ಚಿಂತನೆ)
ಅಕ್ಕ ಪಕ್ಕ ಮಾಂಸಖಂಡ ಮತ್ತು ರಕ್ತ ನಾಳಗಳು ಇರುತ್ತವೆ. ಸೂಜಿ ಚುಚ್ಚುವ ಮೊದಲು ಅಂಗ ರಚನೆಯ ಬಗ್ಗೆ ಪರಿಣಿತಿ ಹೊಂದಿರಬೇಕು. ಇಂತಹ ಅರಿವಳಿಕೆಗೆ ಚಾಣಾಕ್ಷತಣ ಮತ್ತು ಕೌಶಲ್ಯತೆಯನ್ನು ಪಡೆದಿರಬೇಕು. ಇವೆಲ್ಲವು ಸ್ನೇಹಿತನಲ್ಲಿ ಇತ್ತು. ಸ್ನೇಹಿತ ವಿವರಿಸುವುದನ್ನು ಕೇಳಿ ನಾನೇ ಆತ ವಿವರಿಸಿದ್ದ ಸೂಜಿ ಆಗಿದ್ದೆ ಏನ್ನುವ ಅನುಭವ ನನ್ನದಾಗಿತ್ತು. ಒಳಗೆ ಅಂಗಾಂಗ ಕಾಣಲು ಚರ್ಮವು ಗಾಜಲ್ಲ. ಸೂಜಿಯ ಮೂಲಕ ಔಷಧಿಯನ್ನು ಕಾಣದೇ ಇರುವ ಸ್ಥಳಕ್ಕೆ ಹರಿಸುವುದು ಸಾಮನ್ಯ ನಡಿಗೆ ಅಲ್ಲ. ಕಣ್ಣು ತೆರೆದಿರಬೇಕು ಮತ್ತು ಧ್ಯಾನವಂತನಾಗಿರಬೇಕು. ಇಲ್ಲವಾದರೆ ಶಸ್ತ್ರ ಚಿಕಿತ್ಸೆ ಫಲಕಾರಿಯಾಗುವುದಿಲ್ಲ. ಈ ಸ್ಥಿತಿಯನ್ನು ನಾನು Open Meditation ಎಂದು ಕರೆಯುವೆನು. ಇದರ ಅರ್ಥ “ಕಣ್ಣು ತೆರೆದು ಧ್ಯಾನಿಸು” ಎಂದು. ಈ ಸ್ನೇಹಿತ open meditaion ನ್ನು ಕರಗತ ಮಾಡಿಕೊಂಡಿದ್ದ.
ಹಲವಾರು ಚಿಕ್ಕ ಚಿಕ್ಕ issues ಅಥವಾ ಮಾನಸಿಕ ಸಮಸ್ಯೆಯಗಳಿಂದ ಆಗುವ ಭಾವನಾತ್ಮಕ ನೋವುಗಳಿಗೆ ಸರಿಪಡಿಸಿಕೊಳ್ಳಲು ಧ್ಯಾನವಂತರಾಗ ಬೇಕು . ಕಣ್ಣು ಮುಚ್ಚಿ ಅಲ್ಲ, ಕಣ್ಣು ತೆರೆದು. Open meditation ಬಗ್ಗೆ ವಿವರಣೆ ನೀಡಬೇಕೆಂದರೆ..
ಇದನ್ನು ಓದಿ: ಸಸ್ಪೆಂಡೆಡ್ ಕಣ (ಒಂದು ವಿಮರ್ಶೆ)
“It is a state of once journey, in which a man when awake takes his awaken state to subtle inner state to repair his own conflicts, confusions and contradiction for a reasonable remedy. My Open Meditation is a simple procedural technique done individually in a state of awakenness to douse off the fires that could light up everyday’s life out of our unwanted frictions”
ಅಧ್ಯಾತ್ಮಿಕವಾಗಿ ಇಂತಹ ತಂತ್ರ ಜ್ಞಾನದಿಂದ ತಮ್ಮ ತಮ್ಮ ಅರಿವನ್ನು ವೃದ್ಧಿಸಿಕೊಳ್ಳುತ್ತಾರೋ ಅಂತಹ ವ್ಯಕ್ತಿಗಳು ಅನಾಯಾಸವಾಗಿ ಇನ್ನೊಬ್ಬರ ಮನಸ್ಸಿನ ಒಳಗೆ ಪ್ರವೇಶಿಸಬಹುದು. ಪ್ರವೇಶಿಸಿದ ನಂತರ ತಮ್ಮ ತಮ್ಮ ಸಂಬಂಧಗಳ ನಡುವೆ ಉಂಟಾಗುವ ಘರ್ಷಣೆಗಳನ್ನು ನಿವಾರಿಸಿಕೊಳ್ಳಬಹುದು. ಇಂತಹ ಧ್ಯಾನಕ್ಕೆ ಪ್ರಾಂಗಣ ಬೇಕಿಲ್ಲ, ಗಲಾಟೆ ಇರಬಹದು, ಆಸನ ಬೇಕಿಲ್ಲ, ನಿಂತಿರಬಹುದು, ಕೂತಿರಬಹುದು ಇತ್ಯಾದಿ. “ಸ್ವಾಮಿ ವಿವೇಕಾನಂದರು” ಹೇಳಿದ್ದಂತೆ ಕಣ್ಣು ತೆರೆದು ಧ್ಯಾನಿಸುವ ಪ್ರಕ್ರಿಯೆಗೆ ಪ್ರತಿಯೊಬ್ಬರು ಸದಾಕಾಲ ಎಚ್ಚತ್ತುಗೊಂಡಿರಬೇಕು….
ಮುಂದುವರಿಯುವುದು….
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

