ಚನ್ನರಾಯಪಟ್ಟಣ: ನವೋದಯ ವಿದ್ಯಾಸಂಘದ ಸರ್ವ ಸದಸ್ಯರು ರೂ.1000 ಹಣವನ್ನು (ಹೆಚ್ಚುವರಿ ಸದಸ್ಯತ್ವದ ಹಣ )ಪಾವತಿ ಮಾಡಿ ಸದಸ್ಯತ್ವವನ್ನು ನವೀಕರಣ ಮಾಡಿಕೊಳ್ಳಬೇಕೆಂದು ನವೋದಯ ವಿದ್ಯಾ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾದ ಸಿ ಜೆ ಮಂಜುನಾಥ್ ಮನವಿ ಮಾಡಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನವೋದಯ ವಿದ್ಯಾ ಸಂಸ್ಥೆ ವತಿಯಿಂದ 2026 ನೇ ಸಾಲಿನಿಂದ ಪೂರ್ವ ಪ್ರಾಥಮಿಕ ಶಾಲೆ ಆರಂಭ ಮಾಡಲಾಗುವುದು ಎಂದು ತಿಳಿಸಿದರು. ನವೋದಯ ವಿದ್ಯಾ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಹಾಗೂ ಅತ್ಯುತ್ತಮ ಫಲಿತಾಂಶ ಬರುವಂತೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ನವೋದಯ ವಿದ್ಯಾ ಸಂಘದ ಅಧ್ಯಕ್ಷರಾದ ಮಂಜುನಾಥ್ ಸಿ ಜೆ, ಕಾರ್ಯದರ್ಶಿರಾದ ಶರತ್, ಗೌರವಾಧ್ಯಕ್ಷರಾದ ಡಾ ಶೇಷಶಯನ, ನಿರ್ದೇಶಕರಾದ ಕಾಳೆನಹಳ್ಳಿಆನಂದ ಕುಮಾರ್, ಗನ್ನಿ ಗಿರೀಶ್, ಸಂತೋಷ್, ಆದರ್ಶ, ರಾಘವೇಂದ್ರ ಸೇರಿದಂತೆ ಇತರರು ಹಾಜರಿದ್ದರು.
-ಮಂಜುನಾಥ್ ಐ.ಕೆ
