ಕೊರಟಗೆರೆ :– ಕೆ ಎಸ್ ಆರ್ ಟಿ ಸಿ ಮೆಕ್ಯಾನಿಕ್ ಓರ್ವ ಹೆಂಡತಿಯ ಮರಣಾನಂತರ ಮಾನಸಿಕವಾಗಿ ಬಹಳಷ್ಟು ನೊಂದು ಸ್ಥಿಮಿತ ಕಳೆದುಕೊಂಡು ಇತ್ತೀಚಿಗೆ ಮನೆ ಬಿಟ್ಟು ಹೋದವರು ಈವರೆಗೂ ಪತ್ತೆ ಆಗದಿರುವುದು ಕುಟುಂಬಕ್ಕೆ ಆಘಾತ ಮೂಡಿದಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕೊರಟಗೆರೆ ತಾಲೂಕು ಕಸಬಾ ಹೋಬಳಿ ಕಾಮರಾಜನಹಳ್ಳಿ ಗ್ರಾಮದ ರಂಗನಾಥ್ ಎಂಬುವ ಕೆ ಎಸ್ ಆರ್ ಟಿ ಸಿ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸಿ ಕಳೆದ ಹತ್ತು ವರ್ಷಗಳ ಹಿಂದೆ ನಿವೃತ್ತರಾಗಿದ್ದು, ಇತ್ತೀಚೆಗೆ ಮನೆಯಿಂದ ಹೋದವರು ಈವರೆಗೂ ಪತ್ತೆಯಾಗಿರುವುದಿಲ್ಲ, ಹಲವು ಬಾರಿ ಮನೆ ಬಿಟ್ಟು ಹೋಗಿ ಏಳೆಂಟು ದಿನಗಳ ನಂತರ ವಾಪಸ್ ಆಗುತ್ತಿದ್ದ ರಂಗನಾಥ್ ಜೂನ್ 7ರ 2025ರಂದು ಮನೆ ಬಿಟ್ಟು ಹೋದವರು ಈವರೆಗೂ ಪತ್ತೆಯಾಗಿರುವುದಿಲ್ಲ, ಯಾರೋ ನೆಂಟರ ಮನೆಯಲ್ಲಿ ಅಥವಾ ಸ್ನೇಹಿತರ ಮನೆಯಲ್ಲಿ ಇರಬಹುದು ಎಂದು ನಿರೀಕ್ಷಿಸಿದ ಪೋಷಕರು ಅಂತಿಮವಾಗಿ ಪೊಲೀಸ್ ಠಾಣೆಗೆ ಕಾಣೆಯಾಗಿರುವ ಬಗ್ಗೆ ದೂರು ನೀಡಲಾಗಿದೆ.
ರಂಗನಾಥ್ 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ, ತಲೆಯಲ್ಲಿ ಕಪ್ಪು- ಬಿಳುಪು ಮಿಶ್ರೀತ ಕೂದಲು ಕೆಂಪು ಬಣ್ಣದ ಟಿ-ಶರ್ಟ್ , ನೀಲಿ ಬಣ್ಣದ ಪ್ಯಾಂಟ್ ಧರಿಸಿರುವ ರಂಗನಾಥ್ ಕನ್ನಡ ಮತ್ತು ತೆಲುಗು ಮಾತನಾಡ ಬಲ್ಲ ವ್ಯಕ್ತಿಯಾಗಿ ಯಾರಿಗಾದರೂ ಈತನ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಕೊರಟಗೆರೆ ಪೊಲೀಸ್ ಠಾಣೆಗೆ ಅಥವಾ ಆರಕ್ಷಕ ಉಪನಿರೀಕ್ಷಕ 9480802988, ಪೊಲೀಸ್ ಇನ್ಸ್ಪೆಕ್ಟರ್ 9480802954 ಅಥವಾ ಪೋಷಕರಿಗೆ ಮಾಹಿತಿ ನೀಡಲು ಕೋರಲಾಗಿದೆ.
