ಚನ್ನರಾಯಪಟ್ಟಣ: ಸವಿತಾ ಮಂಗಳವಾದ್ಯ ಕಲಾವಿದರ ಸಂಘದ ಅಧ್ಯಕ್ಷರಾದ ಎಸ್ ಕುಮಾರ್ ಅವರ ನೇತೃತ್ವದಲ್ಲಿ ಸವಿತಾ ಮಹರ್ಷಿಯವರ ಜಯಂತೋತ್ಸವದ ಮೆರವಣಿಗೆಯು ಅದ್ದೂರಿಯಾಗಿ ನಡೆಯಿತು.
ತಾಲೂಕಿನ ಶ್ರವಣಬೆಳಗೂಳ ಹೋಬಳಿ ಸವಿತಾ ಸಮಾಜ ಸಂಘ ಹಾಗೂ ಸವಿತಾ ಮಂಗಳವಾದ್ಯ ಕಲಾವಿದರ ಸಂಘದ ವತಿಯಿಂದ ಸವಿತಾ ಮಹರ್ಷಿ ಜಯಂತೋತ್ಸವ ಹಾಗೂ ಸದ್ಗುರುಗಳಾದ ತ್ಯಾಗರಾಜ,ಪುರಂದರ ದಾಸರ ಕನಕದಾಸರ ಆರಾಧನ ಮಹೋತ್ಸವ ತುಂಬಾ ಸಡಗರದಿಂದ ಜರುಗಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸವಿತಾ ಮಹರ್ಷಿ, ತ್ಯಾಗರಾಜರು,ಕನಕದಾಸರು ಪುರಂದರ ದಾಸರ ಫೋಟೋಗಳನ್ನು ಟ್ಯಾಕ್ಟರ್ ನ ಮೇಲೆ ಮೆರವಣಿಗೆಯನ್ನು ಮಾಡಲಾಯಿತು.
ಸವಿತ ಮಂಗಳವಾದ್ಯ ಕಲಾವಿದರ ಸಂಘದ ಶ್ರವಣಬೆಳಗೊಳ ಹೋಬಳಿ ಅಧ್ಯಕ್ಷರಾದ ಕುಮಾರ್ ಮಾತನಾಡಿ ಈ ದಿನದ ಕಾರ್ಯಕ್ರಮಕ್ಕೆ ಆಗಮಿಸಿರುವ ಹಾಸನ ಜಿಲ್ಲಾ ಸಮಿತಿಯ ಸದಸ್ಯರುಗಳು, ಚನ್ನರಾಯಪಟ್ಟಣ ತಾಲೂಕು ಸಮಿತಿಯ ಪದಾಧಿಕಾರಿಗಳು, ಹಾಗೂ ಶ್ರವಣಬೆಳಗೊಳ ಹೋಬಳಿಯ ಸವಿತಾ ಸಮಾಜದ ಬಂಧುಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿದ್ದಾರೆ, ಎಲ್ಲಾ ಸವಿತಾ ಬಂಧುಗಳಿಗೂ ತುಂಬು ಹೃದಯದ ಧನ್ಯವಾದಗಳು ಸಲ್ಲಿಸುತ್ತೇನೆ ಎಂದರು. ಮುಂದಿನ ದಿನಗಳಲ್ಲಿ ಶ್ರವಣಬೆಳಗೊಳದಲ್ಲಿ ಸವಿತಾ ಮಂಗಳವಾದ್ಯ ಕಲಾವಿದರ ಸಂಘದ ವತಿಯಿಂದ ವತಿಯಿಂದ ಬೃಹತ್ ಸಂಗೀತ ಸಮ್ಮೇಳನ ಮಾಡಬೇಕೆಂಬ ಆಸೆಯನ್ನು ಹೊಂದಿದ್ದೇನೆ ಎಂದರು. ಈ ಕಾರ್ಯಕ್ರಮಕ್ಕೆ ನಮ್ಮ ಎಲ್ಲಾ ಸವಿತ ಬಂಧುಗಳು ಕೈಜೋಡಿಸಿ ಈ ಕಾರ್ಯಕ್ರಮದಲ್ಲಿ ಯಶಸ್ಸಿಗೊಳಿಸಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಶ್ರವಣಬೆಳಗೋಳ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರುಗಳಾದ ಎಸ್ ಎನ್ ಲಕ್ಷ್ಮಣ್, ಮಹೇಶ್, ಲೋಹಿತ್, ಗ್ರಾಮ ಪಂಚಾಯತಿ ಸದಸ್ಯರಾದ ಜನಾರ್ಧನ್, ಶ್ರವಣಬೆಳಗೊಳ ಸಬ್ ಇನ್ಸ್ಪೆಕ್ಟರ್ ನವೀನ್ ಕುಮಾರ್,ಹಾಸನ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ರವಿಕುಮಾರ್, ಸವಿತಾ ಸಮಾಜದ ಮಂಗಳವಾದ್ಯ ಕಲಾವಿದರ ಸಂಘದ ಜಿಲ್ಲಾ ಅಧ್ಯಕ್ಷರಾದ ಗುರುಮೂರ್ತಿ, ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾದ ಕೋಡಿಹಳ್ಳಿಲೋಹಿತ್, ಸವಿತಾ ಸಮಾಜ ಮಂಗಳವಾದ್ಯ ಕಲಾವಿದರ ಸಂಘದ ತಾಲೂಕು ಪ್ರಕಾಶ್, ಹೋಬಳಿ ಅಧ್ಯಕ್ಷರಾದ ಎಸ್ ಕುಮಾರ್, ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್ಆರ್ ಕಾಂತರಾಜು, ಶ್ರವಣಬೆಳಗೋಳ ಹೋಬಳಿಯ ಪ್ರಧಾನ ಕಾರ್ಯದರ್ಶಿ ಮಣಿಕಂಠ, ಕಲಾವಿದರ ಸಂಘದ ಸಂಚಾಲಕರಾದ ಪರಮೇಶ್, ನಿರ್ದೇಶಕರಾದ ಹರೀಶ್, ಮೂರ್ತಿ, ಖಜಾಂಚಿಗಳಾದ ಶಿವಣ್ಣ, ಸವಿತಾ ಸಮಾಜದ ಉಪಾಧ್ಯಕ್ಷರಾದ ರಾಜೇಶ್, ಶಿವರಾಂ, ಸಹ ಕಾರ್ಯದರ್ಶಿಯಾದ ಶ್ರೀಕಂಠ, ಸಂಚಾಲಕರಾದ ಬಿ ವಿ ದಿನೇಶ್, ಕುಮಾರ್, ಸವಿತ ಸಮಾಜದ ಮುಖಂಡರುಗಳಾದ ತುಕಾರಾಂ, ಲಲಿತೇಶ್,ಎಸ್ ವಿ ಆನಂದ್,ದೊರೆಸ್ವಾಮಿ,ಗಿರೀಶ, ಮಣಿ, ಪುರುಷೋತ್ತಮ,ರಾಜು, ಯುವರಾಜು,ವೇಣು, ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ.ಕೆ
