ಕೊರಟಗೆರೆ :- ಗ್ರಾಮೀಣ ಭಾಗದಲ್ಲಿ ಅನೇಕ ಸಾಹಿತಿಗಳು ಇದ್ದು ಅವರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದರೆ ತಾಲೂಕುಗಳಲ್ಲಿ ದತ್ತಿ ಪ್ರಶಸ್ತ್ರಿಗಳು ಹೆಚ್ಚಾಗ ಬೇಕಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅಭಿಪ್ರಾಯಿಸಿದರು.
ಅವರು ಕೊರಟಗೆರೆ ಪಟ್ಟಣದ ತಾಲೂಕು ಕಛೇರಿ ಆವರಣದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ 2025 ನೇ ಸಾಲಿನ ಶ್ರೀಮತಿ ಆದಿಲಕ್ಷ್ಮಮ್ಮ ಶ್ರೀ ವೆಂಕಟಶಾಮಯ್ಯ ದತ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ ದತ್ತಿ ಪ್ರಶಸ್ತಿ ಗಳು ಸಾಹಿತ್ಯ ಕ್ಷೇತ್ರಕ್ಕೆ ಸೀಮಿತವಾಗದೆ ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದತ್ತಿ ಪ್ರಶಸ್ತ್ರಿಗಳು ಮುಖ್ಯ ಪಾತ್ರ ವಹಿಸುತ್ತವೆ ಹಾಗೂ ದತ್ತಿ ಪ್ರಶಸ್ತ್ರಿ ಸ್ಥಾಪಿಸುವ ದಾನಿಗಳ ಆಶಯವು ಈಡೇರಿಸಬೇಕಾಗುತ್ತದೆ ಎಂದ ಅವರು ತಾಲೂಕಿನಲ್ಲಿ ನೂತನವಾಗಿ 400 ಸದಸ್ಯರ ನೋಂದಾಣಿ ಆಗಿದ್ದು ಕೊರಟಗೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಸಮೇಳನ ಕಳೆದ 12 ವರ್ಷಗಳಿಂದ ನಡೆದಿಲ್ಲ ಈ ಬಾರಿ ತಾಲೂಕು ಸಮ್ಮೇಳನ ನಡೆಸಿ ತಾಲೂಕಿನ ಅನೇಕ ಯುವ ಪ್ರತಿಭಾವಂತ ಸಾಹಿತಿಗಳನ್ನು ಗುರುತಿಸುವ ಕೆಲಸ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.
ಕ್ನನಡ ಅಭಿವೃದ್ದಿ ಪ್ರಾಥಿಕಾರದ ಸದಸ್ಯ ಹಾಗೂ ಸಾಹಿತಿ ಡಾ.ರವಿಕುಮಾರ್ ನೀಹ ಮಾತನಾಡಿ ಶ್ರೀಮಂತ ಸಾಹಿತ್ಯ ಕ್ಷೇತ್ರ ಕೊರಟಗೆರೆ ತಾಲೂಕು ಆಗಿದ್ದು ತಾಲೂಕಿನಲ್ಲಿ ಅನೇಕ ಸಾಹಿತ್ಯಿಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲೆಗಳು ತಾಲೂಕಿನಲ್ಲಿ ಕಂಡು ಬರುತ್ತಿದ್ದು ಅವುಗಳನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಜವಾಬ್ದಾರಿಯಾಗಿದ್ದು ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಸಮೇಳನ ನಡೆಸುವ ಮೂಲಕ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿದಂತ್ತಾಗುತ್ತದೆ ಎಂದರು.
ದತ್ತಿ ಪ್ರಶಸ್ತಿ ಪುರಸ್ಕೃತ ಕೊರಟಗೆರೆ ತಾಲೂಕಿನ ಅಜೇನಹಳ್ಳಿ ಕೃಷಿಕ ಡಿ.ಜಿ.ವೆಂಕಟೇಶ್ ಮಾತನಾಡಿ ಇತ್ತಿಚಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ರಾಸಾಯನಿಕ ಗೊಬ್ಬರ ಬಳಸುವ ಮೂಲಕ ಆಹಾರ ಕಲುಶಿತವಾಗುತ್ತಿದ್ದು ಅದನ್ನು ಸೇವಿಸಿದ ಜನತೆ ಅನಾರೊಗ್ಯದಿಂದ ಬಳಲುತ್ತಿದ್ದು ಅದನ್ನು ತಪ್ಪಿಸುವ ಸಲುವಾಗಿ ನೈಸರ್ಗಿಕ ಗೊಬ್ಬರ ಬಳಸುವ ಮೂಲಕ ಕೃಷಿ ಪದ್ದತಿ ಅಳವಡಿಸಿಕೊಂಡಿದ್ದು ಪ್ರತಿಯೊಬ್ಬರೂ ನೈಸರ್ಗಿಕ ಗೊಬ್ಬರ ಬಳಸುವ ಮೂಲಕ ಉತ್ತಮ ಆಹಾರ ಬೆಳೆಯಬೇಕಾಗಿದೆ ಎಂದು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಈರಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲೂಕು ಸಮ್ಮೇಳನ ನಡೆಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತಂದೆ ತಾಯಿಗಳ ಹೆಸರಿನಲ್ಲಿ ಕೃಷಿ ಕ್ಷೇತ್ರದಲ್ಲಿ ಸಾದನೆ ಮಾಡಿದವರಿಗೆ ದತ್ತಿ ಪ್ರಶಸ್ತ್ರಿ ಸ್ಥಾಪಿಸಿದ ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೃಷ್ಣಮುರ್ತಿ, ಸಾಹಿತಿ ಕಂಟಲಗೆರೆ ಸಣ್ಣಹೂನ್ನಯ್ಯ, ತುಮಕೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಕುಮಾರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಗೌರವ ಕಾರ್ಯದರ್ಶಿ ಬಿ.ಹನುಮಂತರೆಡ್ಡಿ, ಜಿ.ಪಂ.ಮಾಜಿ ಸದಸ್ಯೆ ಹಾಗೂ ಪರಿಷತ್ನ ಕೋಶಾಧ್ಯಕ್ಷರಾದ ಎನ್. ದಾಕ್ಷಾಯಿಣಿರಾಜಣ್ಣ, ದಾಡಿವೆಂಕಟೇಶ್. ಮಾರುತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
-ಶ್ರೀನಿವಾಸ್ ಕೊರಟಗೆರೆ.

[…] […]