ಕೊರಟಗೆರೆ : ತಾಲ್ಲೋಕಿನ ಕೋಳಾಲ ಹೋಬಳಿಯ ವಜ್ಜನಕುರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಗೊಂಡನಗುಣಿ ಸರ್ವೇ ನಂಬರ್ 52 ರಲ್ಲಿ ಇರುವ ಸಾರ್ವಜನಿಕ ಸ್ಮಶಾನಕ್ಕೆ ಇರುವ ನಕಾಶೆ ರಸ್ತೆಯನ್ನು. ಗುರುತಿಸಿ ಹಾಗೂ ಕೃಷಿ ಕೆಲಸಗಳಿಗೆ ಜಮೀನುಗೆ ಹೋಗುವ ದಾರಿ ಮಾಡಲು ಗ್ರಾಮಸ್ಥರು ಒತ್ತಾಯಿಸಿದ್ದು. ಅದರಂತೆ ತಾಲ್ಲೂಕಿನ ದಂಡಾಧಿಕಾರಿಗಳಾದ ಮಂಜುನಾಥ್ ರವರ ಆದೇಶದ ಮೇರೆಗೆ. ಕೋಳಾಲ ಉಪ ತಹಸಿಲ್ದಾರ್ ಮಧುಚಂದ್ರ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗ ಪುಷ್ಪ ನೇತೃತ್ವದಲ್ಲಿ ಒತ್ತುವರಿಗೊಂಡ ಪ್ರದೇಶವನ್ನು ಜೆ.ಸಿ.ಪಿ. ಮೂಲಕ ತೆರವುಗೊಳಿ ಸ್ಥಳೀಯ ಜನರು ಓಡಾಡಲು ಹಾಗೂ ಸ್ಮಶಾನಕ್ಕೆ ಹೋಗುವ ದಾರಿಯನ್ನು ಅನುವು ಮಾಡಿಕೊಡಲಾಗಿತ್ತು.


ಈ ಸಮಸ್ಯೆ ಹಲವಾರು ವರ್ಷಗಳಿಂದ ನೆನೆಗುಂದಿಗೆ ಬಿದ್ದಿದ್ದು. ಹಲವಾರು ಸನ್ನಿವೇಶಗಳಲ್ಲಿ ದಲಿತರ ಶವಗಳನ್ನು ಸಂಸ್ಕಾರ ಮಾಡಲು ದಾರಿ ಇಲ್ಲದಂತೆ ಸಮಸ್ಯೆ ಸೃಷ್ಟಿಯಾಗಿತ್ತು. ಸಮಸ್ಯೆಯನ್ನು ಮನಗೊಂಡ ಅಧಿಕಾರಿಗಳು ತಾಲ್ಲೂಕು ಸರ್ವೆಯರ ಮೂಲಕ ನಕಾಶೆ ರಸ್ತೆಯನ್ನು ಗುರುತಿಸಿ. ಒತ್ತುವರೆಗೊಂಡ ರಸ್ತೆಯನ್ನು ತೆರವುಗೊಳಿಸುವಲ್ಲಿ. ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಶಸ್ವಿಯಾದರು.
ಪಂಚಾಯತಿ ಅಧ್ಯಕ್ಷ ರಮೇಶ್ ಮಾತನಾಡಿ :
ಪಂಚಾಯತಿ ವತಿಯಿಂದ ಸ್ಮಶಾನಕ್ಕೆ ಬೇಕಾದ ಅಭಿವೃದ್ಧಿ ಕಾರ್ಯಗಳಾಗಿದ್ದು. ಸ್ಮಶಾನಕ್ಕೆ ಹೋಗುವ ದಾರಿಯ ಸಮಸ್ಯೆ ಉಲ್ಬಣಗೊಂಡ ಸಮಯದಲ್ಲಿ ಅಧಿಕಾರಿಗಳು ಎಚ್ಚೆತ್ತು. ಮಾನವ ಹಕ್ಕುಗಳ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಎಂದು ಭಾವಿಸುತ್ತೇನೆ ಎಂದರು.
ಸ್ಥಳದಲ್ಲಿ ಉಪ ತಹಸಿಲ್ದಾರ್ ಮಧುಚಂದ್ರ. ಕಂದಾಯ ಅಧಿಕಾರಿ ಕೃಷ್ಣಮೂರ್ತಿ. ಗ್ರಾಮ ಲೆಕ್ಕಾಧಿಕಾರಿ ಭಾಗ್ಯಮ್ಮ. ಕೋಳಾಲ ಪಿಎಸ್ಐ ಯೋಗೇಶ್. ಎಎಸ್ಐ ಗಳಾದ ಕುಮಾರ್ ಜಯರಾಮ್. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗಪುಷ್ಪ. ಕಂದಾಯ ಇಲಾಖೆ. ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಪೋಲಿಸ್ ಸಿಬ್ಬಂದಿ ವರ್ಗ ಸಾರ್ವಜನಿಕರು ಹಾಜರಿ
ಸಂಜಯ್ ಗ್ರಾಮ ಪಂಚಾಯತಿ ಸದಸ್ಯ ಮಾತನಾಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನಾಂಗಕ್ಕೆ ಅರ್ಧ ಎಕರೆ ಹಾಗೂ ಇತರ ಜನಾಂಗಕ್ಕೆ ಅರ್ಧ ಎಕರೆಯನ್ನು ಸ್ಮಶಾನಕ್ಕೆ ಹೋಗುವ ದಾರಿ ಇಲ್ಲದಂತೆ ಪರದಾಡುವ ಪರಿಸ್ಥಿತಿ ಉದ್ಭವವಾಯಿತು ಇದೀಗ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ರಸ್ತೆ ಮಾಡಲು ಸಹಕರಿಸಿದ ಎಲ್ಲಾ ಅಧಿಕಾರಿಗಳಿಗೆ ನಮ್ಮ ಊರಿನ ಪರವಾಗಿ ಧನ್ಯವಾದಗಳು
-ನರಸಿಂಹಯ್ಯ ಹೊಸಕೋಟೆ
