ನೀನು ಇಲ್ಲದೆ,
ನೀನು ಇಲ್ಲದೆ ನಾನು ಬದುಕಲು ಸಾಧ್ಯವಿಲ್ಲ
ನಾನು ಬದುಕಲು ಬಯಸುವುದಿಲ್ಲ.
ನಾನು ನಗಲು ಮರೆತಿದ್ದೇನೆ.
ತುಟಿಗಳು ನಗುವಿನೊಂದಿಗೆ ಇರಲು
ನೀನು ಜೊತೆಯಿಲ್ಲ ಎಂದು ಹೇಳುತಿದೆ
ಮನಸಿನ ನೋವು ವ್ಯಕ್ತಪಡಿಸಲು
ತುಟಿಗಳು ಪದಗಳನ್ನು ಮರೆತಿವೆ
ಹೃದಯವು ತುಂಬಾ ಗಟ್ಟಿಯಾಗಿದೆ,
ನೀನು ಜೊತೆ ಇಲ್ಲದೆ
ಕಣ್ಣುಗಳು ನಿರ್ಜನವಾಗಿವೆ, ಅದು ಬಣ್ಣಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ,
ನೀವಿಲ್ಲದೆ, ಜಗತ್ತು ಖಾಲಿಯಾಗಿದೆ,
ನಾನು ಒಬ್ಬಂಟಿಯಾಗಿದ್ದೇನೆ
ನೀನು ಇಲ್ಲದೆ….
ಎನ್ನುತ್ತಿದ್ದ ನಾ ಈಗ….
ನೀನಲ್ಲದೇ ನಾ ತುಂಬಾ ಚೆನ್ನಾಗಿದ್ದೀನಿ ಬಿಡು …..
ಅನ್ನೋವರೆಗೂ ಗಟ್ಟಿಯಾಗಿದ್ದೇನೆ….
ನನಗೆ ನಾನೇ ಸಾಕು ಎಂಬ ಸತ್ಯದ ಅರಿವು ಮೂಡಿದ ಮೇಲಂತೂ
ನಾನೂ ಮತ್ತಷ್ಟು
ಗಟ್ಟಿಯಾಗಿ, ಸ್ಥೈರ್ಯ ವಾಗಿದ್ದೇನೆ...
ನೀನಿಲ್ಲದೇ ನಾನಿಲ್ಲ ಎನ್ನುವ ಮಾತು ಎಷ್ಟು ಭ್ರಮೆಯಲ್ಲವೇ ಗೆಳಯ….
ನೋಡು ನೀ ನೀಲ್ಲದೆ ನಾನು
ಒಬ್ಬಂಟಿಯಾಗಿ
ಹೆಚ್ಚಾಗೆ ಚೆನ್ನಾಗಿ ಬದುಕತ್ತಾ ಇದ್ದೀನಿ ನೋಡು….
ಏನಮ್ಮಾ ತುಂಬಾ ಚೆನ್ನಾಗಿ ಕಾಣತ್ತಾ ಇದ್ಯಾ
ಅನ್ನೋರ ಸಂಖ್ಯೆ
ಸ್ವಲ್ಪ ಜಾಸ್ತಿ ನೇ ಆಗಿದೆ….ಅನ್ನೂ….
ಏನೇ ಹೇಳು ಗೆಳಯ…
ನೀ ನಿಲ್ಲದೇ ನಾನು
ತುಂಬಾ ಚೆನ್ನಾಗಿದ್ದೀನಿ…..😊
– ಮೌನಾತ್ಮ
