ತುಮಕೂರು: ತೀವ್ರ ಸಂಕಷ್ಟ ಪರಿಸ್ಥಿತಿಯಲ್ಲಿರುವ ನಗರದ ಹೊರವಲಯ ಮೈದಾಳದ ವೀರಭದ್ರಯ್ಯ ಕುಟುಂಬಕ್ಕೆ ಸಮೃದ್ಧಿ ಶಿಕ್ಷಣ ಟ್ರಸ್ಟ್ ಸಹಾಯ ಮಾಡಿ ನೆರವಾಯಿತು.
ಚಿಕಿತ್ಸೆಯಲ್ಲಿ ಸಮಸ್ಯೆಯಾಗಿ ವೀರಭದ್ರಯ್ಯನವರು ಕಾಲು ಕಳೆದುಕೊಂಡಿದ್ದಾರೆ. ಇವರ ಪತ್ನಿಗೆ ಎರಡೂ ಕಣ್ಣು ಕಾಣುವುದಿಲ್ಲ. ಇವರ ಏಳೆಂಟು ವರ್ಷದ ಮಗನಿಗೆ ಎರಡೂ ಕಿಡ್ನಿಗಳು ವಿಫಲಗೊಂಡಿದ್ದು ಸಾವು ಬದುಕಿನ ನಡುವೆ ಹೋರಾಟದಲ್ಲಿದ್ದಾನೆ.
ಇಂತಹ ಪರಿಸ್ಥಿತಿಯಲ್ಲಿ ದಿಕ್ಕುತೋಚದಂತಿರುವ ವೀರಭದ್ರಯ್ಯನವರ ಕುಟುಂಬಕ್ಕೆ ಸಮೃದ್ಧಿ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಬೆಳಗುಂಬವೆAಕಟೇಶ್ ನೆರವಿಗೆ ಬಂದು ಸಹಾಯ ಮಾಡಿದ್ದಾರೆ. ಕುಟುಂಬಕ್ಕೆ ಏಳೆಂಟು ತಿಂಗಳಿಗಾಗುವಷ್ಟು ದಿನಸಿ ನೀಡಿದರು.ವೀರಭದ್ರಯ್ಯನವರ ಕಾಲುಆಪರೇಷನ್ ಗೆ 50 ಸಾವಿರರೂ.ಧನ ಸಹಾಯ ಮಾಡುವುದಾಗಿ ಹೇಳಿದರು.
ತಮ್ಮ ಸಮೃದ್ಧಿ ಶಿಕ್ಷಣ ಟ್ರಸ್ಟ್ ಮೂಲಕ ಬೆಳಗುಂಬ ವೆಂಕಟೇಶ್ ಅವರು ಹಲವಾರು ಅಶಕ್ತ ಕುಟುಂಬಗಳಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ.ನಿರ್ಗತಿಕರಿಗೆ ಮನೆ ನಿರ್ಮಿಸಿಕೊಟ್ಟಿದ್ದಾರೆ.ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಬೇಕಾದ ಅನುಕೂಲ ಮಾಡಿದ್ದಾರೆ.ಬಡವರು, ವೃದ್ಧರಿಗೆ ಬೇಕಾದ ದಿನಸಿ, ಬಟ್ಟೆ, ಬೆಡ್ಶೀಟ್, ಔಷಧಿ ಹೀಗೆ ಹಲವು ರೀತಿಯಲ್ಲಿ ನೆರವಾಗಿದ್ದಾರೆ.
ಈ ಸಂದರ್ಭದಲ್ಲಿ ಟ್ರಸ್ಟಿನ ಉಪಾಧ್ಯಕ್ಷಯಲ್ಲಾಪುರ ನಂಜುಂಡಯ್ಯ, ಕಾರ್ಯದರ್ಶಿ ಹರೀಶ್ ಬೈರಸಂದ್ರ, ಮುದ್ದಗೆರೆಪ್ರದೀಪ್,ಡಿ.ಕೆ.ಕಾಂತರಾಜ್, ಮಹಿಳಾ ಘಟಕ ಅಧ್ಯಕ್ಷೆ ಸವಿತಾ, ಕಾರ್ಯದರ್ಶಿ ಮಮತಾ,ಜಂಟಿ ಕಾರ್ಯದರ್ಶಿ ಸಿದ್ದಗಂಗಮ್ಮ, ತುಳಸಿ, ಭವ್ಯ ಮತ್ತಿತರು ಹಾಜರಿದ್ದರು.
– ಚಂದ್ರಚೂಡ ಕೆ.ಬಿ.
