ಕೊರಟಗೆರೆ :– ಕೆಮ್ಮು – ಗಸೆಯಿಂದ ನರಳುತ್ತಿದ್ದ ವ್ಯಕ್ತಿಯೋರ್ವ ಊರಿನ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಕಾಲ ಕಳೆಯುತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಕಳೆದ 10 ದಿನಗಳಿಂದ ಕಣ್ಮರೆಯಾಗಿರುವ ಘಟನೆ ಕೊರಟಗೆರೆ ತಾಲೂಕಿನಲ್ಲಿ ಜರುಗಿದೆ.
ಕೊರಟಗೆರೆ ತಾಲೂಕಿನ ಬೈರೇನಹಳ್ಳಿ ಗ್ರಾಮದ ವೆಂಕಟಶಾಮಯ್ಯ ಇದ್ದಕ್ಕಿದ್ದಂತೆ 10-15 ದಿನಗಳಿಂದ ಕಾಣೆಯಾಗಿರುವ ವ್ಯಕ್ತಿಯಾಗಿದ್ದು, ಈತ ಕಳೆದ 10 ವರ್ಷಗಳಿಂದ ಕೆಮ್ಮು- ಗಸೆಯಿಂದ ನರಳುತ್ತಿದ್ದ ಎನ್ನಲಾಗಿದೆ.
ಕಾಣೆಯಾಗಿರುವ ವೆಂಕಟಶಾಮಯ್ಯ ಕೆಮ್ಮು- ಗಸೆಯಿಂದ ಮನೆಯಿಂದ ಹೊರ ಹೋಗಿ ಸ್ವಲ್ಪ ದೂರದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಕಾಲ ಕಳೆಯುತ್ತಿದ್ದ ಎನ್ನಲಾಗಿದ್ದು, ಇತ್ತೀಚಿಗೆ ಬಿಸಿ ಬಿಸಿ ಊಟ ಮಾಡಲು ನಿಗದಿತ ಸಮಯಕ್ಕೆ ಮನೆಗೆ ಬರುವುದಿಲ್ಲ ಎಂದು ಮಡದಿ ಗಂಡನನ್ನ ತರಾಟೆ ತೆಗೆದುಕೊಂಡ ಕಾರಣ ಗಂಡ ಹೆಂಡತಿ ನಡುವೆ ಸಣ್ಣ ಪುಟ್ಟ ಜಗಳವಾಗಿ ಇದೇ ತಿಂಗಳ 6ನೇ ತಾರೀಕು ಮನೆಯಿಂದ ಹೊರ ಹೋದವರು ಈವರೆಗೂ ಮನೆಗೆ ಹಿಂತಿರುಗಿರುವುದಿಲ್ಲ ಎಂದು ಮಗ ಅಶ್ವಥ್ ನಾರಾಯಣ್ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾನೆ.
ವೆಂಕಟಶಾಮಯ್ಯನಿಗೆ 72 ವರ್ಷ ವಯಸ್ಸಾಗಿದ್ದು, ಕನ್ನಡ ಮತ್ತು ತೆಲುಗು ಮಾತನಡಬಲ್ಲವನಾಗಿದ್ದು, ಇವರು 152 cm ಎತ್ತರ, ಸಾಧಾರಣ ಮೈಕಟ್ಟು , ಎಣ್ಣೆ ಗುಂಪುಮೈಬಣ್ಣ, ದುಂಡು ಮುಖ ತಲೆಯಲ್ಲಿ ಕಪ್ಪು ಬಿಳಿ ಕೂದಲು ಹೊಂದಿದ್ದು ಬಿಳಿ ಟಿ-ಶರ್ಟ್ ನೀಲಿ ಬಣ್ಣದ ನಿಕ್ಕರ್ ನೀಲಿ ಬಣ್ಣದ ಟವಲ್ ದರಿಸಿದ್ದ ಈತ ಇದೇ ತಿಂಗಳ 6ನೇ ತಾರೀಕಿನಂದು ಮನೆಯಿಂದ ಹೊರ ಹೋದವರು ಈವರೆಗೂ ಮನೆಗೆ ವಾಪಸ್
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈತನ ಬಗ್ಗೆ ಯಾರಿಗಾದರೂ ಮಾಹಿತಿ ದೊರಕಲ್ಲಿ 9480802954,, 9480802988 ಅಥವಾ ಪೊಲೀಸ್ ಕಂಟ್ರೋಲ್ ರೂಂ 948080 2900 ಕರೆ ಮಾಡಿ ಮಾಹಿತಿ ನೀಡಲು ಕೋರಲಾಗಿದೆ.
– ಶ್ರೀನಿವಾಸ್ ಕೊರಟಗೆರೆ.
