ಡಾಕ್ಟ್ರೇ, ನಾವು ಆಡುವ ಆಟದ ಬಗ್ಗೆ ಹೇಳುತ್ತೀರ?
ಒಳ್ಳೆಯ ಪ್ರಶ್ನೆ ಕೇಳಿದ್ದೀರ. ನಾವೇಲ್ಲರೂ ಆಟವಾಡುತ್ತೇವೆ. ಖುಷಿಯಿಂದ ಆಡುತ್ತೇವೆ. ಆಡುವುದು ಒಂದು ತರಹದ ಮನಸ್ಸಿನ ಔಷಧಿ. ಆಡುವುದರಿಂದ ಮನಸ್ಸು ತಿಳಿ ಆಗಿ ಪುನರ್ ಯೌವನವನ್ನು ತಂದುಕೊಳ್ಳುತ್ತೇವೆ. ಈ ಆಟಗಳು ಹೊರಗೆ ಆಡುವ ಆಟಗಳು. ನಾನು ಈ ವಿಷಯವನ್ನು ಒಬ್ಬ ಸಾಮಾನ್ಯ ಟೆನ್ನಿಸ್ ಆಟಗಾರನಾಗಿ ಹೇಳುತ್ತಿರುವೆ. ಆದರೆ ನಿಜವಾದ ನಮ್ಮ ಅಟ ಯಾವುದೆಂದರೆ ನಾವು ಪ್ರತಿನಿತ್ಯ ಜೀವನದಲ್ಲಿ ಆಡುವ ಆಟಗಳು. ಕುಟುಂಬ ವ್ಯವಸ್ಥೆಯ ಒಳಗೆ ನಾವು ಆಡುವ ಆಟಗಳು. ಈ ಆಟದಲ್ಲಿ ಎದುರಾಳಿ ಅಥವ ಅಂಪೈರ್ ಇರುವುದಿಲ್ಲ. ಎಲ್ಲವೂ ಇಚ್ಚೆ ಕರ್ಮಗಳ ನಡುವೆ, ಯೋಚನೆ ಭಾವನೆಗಳ ನಡುವೆ ಮತ್ತು ವಿವೇಕ ಅವಿವೇಕತನಗಳ ನಡುವೆ.
ಇದನ್ನು ಓದಿ: ಹುಚ್ಚಾಟ ಮತ್ತು ಬ್ಲೇಡ್ (Rage or Razor – ಪ್ರಸ್ತುತದ ವಿಶ್ಲೇಷಕ)
ಅಷ್ಟೇ ಅಲ್ಲ. ಸಾಮಾಜಿಕ ವ್ಯವಸ್ಥೆಯಲ್ಲಿ ಉಳ್ಳವ ಮತ್ತು ಇಲ್ಲದೆ ಇರುವವರ ನಡುವೆ, ವಿಜ್ಞಾನ ಮತ್ತು ಅಧ್ಯಾತ್ಮಿಕ ಚಿಂತನೆಗಳ ನಡುವೆ, ಸಂಬಂಧ ಮತ್ತು ಸಂಬಂಧ ಇಲ್ಲದೆ ಇರುವವರ ನಡುವೆ, ಧರ್ಮ ಧರ್ಮಾಂಧತೆಗಳ ನಡುವೆ, ಜಾತಿ ಜಾತ್ಯಾತೀತಗಳ ನಡುವೆ, ಪ್ರಜಾಪ್ರಭುತ್ವ ಸಾರ್ವಭೌಮತ್ವಗಳ ನಡುವೆ, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತುವೆ. ಈ ಆಟಗಳು ತಿಳಿಯಲಾಗದ ಆಟ. ಆಳವಾದ ಆಟ. ಸಂಕೀರ್ಣ ಅಥವ ಕಾಂಪ್ಲೆಕ್ಸ್ ದತ್ತ ಜಾರುವ ಆಟ. ಇಲ್ಲಿ ಬಿದ್ದರೆ ಚೇತರಿಕೆಯು ಕೆಲವೊಮ್ಮೆ ಅಸಾಧ್ಯ. ಮನಸ್ಸಿನ ನೋವು ಬೇಗ ವಾಸಿ ಆಗುವುದಿಲ್ಲ. ಆಟದ ಮೈದಾನದಲ್ಲಿ ಆಡುವ ಆಟದಲ್ಲಿ ಬಿಳುವುದು ಸಾಮನ್ಯ. ಶರೀರಕ್ಕೆ ಬಿದ್ದ ಪೆಟ್ಟು, ಬೇಗ ಚೇತರಸಿಕೊಳ್ಳುವುದು. ನೀವು ಟಿ ವಿ ಯಲ್ಲಿ ಫುಟ್ಬಾಲ್ ನೋಡಿದ್ದೀರಿ ಅಲ್ಲವೇ? ಬೀಳುವ ಆಟಗಾರರನ್ನು ಎದುರಾಳಿಯೇ ಕೈ ಹಿಡಿದು ಎಬ್ಬಿಸುತ್ತಾನೆ. ನೀವು ಬಿದ್ದಾಗ ಅಕ್ಕಪಕ್ಕದವರು ಎಬ್ಬಿಸುತ್ತಾರಯೇ? ಬಿದ್ದನಲ್ಲ ಎಂದು ಖುಷಿ ಪಡುವವರೇ ಹೆಚ್ಚು. ಆಟದ ಮೈದಾನದಲ್ಲಿ ಆಡುವ ಆಟ ಉತ್ಸಾಹ ತರುವುದು. ಶ್ರಮವಹೀಸಬೇಕು, ಕಷ್ಟ ಆದರೂ ಅಸಾಧ್ಯವೇನಲ್ಲ. ನಮ್ಮ ಕೌಟುಂಬಿಕ ಒಳಗಿನ ಆಟಗಳಿಗೆ ಶ್ರಮ ಇಲ್ಲ, ಕಷ್ಟಾನೂ ಇಲ್ಲ. ಬೆಳಿಗ್ಗೆ, ಮಧ್ಯಾಹ್ನ ಹಾಗು ರಾತ್ರಿ ನಿರಂತರವಾಗಿ ಆಟ ನಡೆಯುತ್ತಿರುತ್ತದೆ.
ಇದನ್ನು ಓದಿ: ಅರಿವು (Consciousness)
ಅಬ್ಬಬ್ಬ ಜೀವನದಲ್ಲಿನ ಆಟ ಎಂತೇತ್ತಾ ಮುಖವಾಡಗಳು ಹೊಂದಿರುತ್ತೆ ಗೊತ್ತೇನು? ಕೆಲವು ವೇಳೆ ಕಾಣುತ್ತವೆ. ಅನೇಕ ಬಾರಿ ಕಾಣುವುದೇ ಇಲ್ಲ. ಇದನ್ನು ಅರಿಯಲು ಮೌನವನ್ನು ವಹಿಸ ಬೇಕು. ಮನೆಯ ಮೂಲೆ ಹುಡುಕ ಬೇಕು ಮತ್ತು ಅಲುಗಾಡದೆ ಇಲ್ಲಿ ಕೊರಬೇಕು. ದಿನಗಳು ಕಳೆದಂತೆ ಸಂಬಂಧಗಳು ಹೇಗೆ ಅಟವಾಡುತ್ತೆ ಎಂಬುದನ್ನು ತಿಳಿಯುಬಹುದು. ಅಪ್ಪ ಅನ್ನೋ ಕೋಡು, ತಾಯಿ ಎಂಬ ಸಾಧು, ಮಗ ಎನ್ನೋ ಅಹಂಕಾರಿ, ಮಗಳು ಎನ್ನೋ ಬೆಳಗು…ಇದು ಒಂದು ಸಮೀಕರಣವಾದರೆ ಮತ್ತೊಂದನ್ನು ಅರಿಯೋಣ. ಮಾವ ಎಂಬ ಬೇಜವಾಬ್ದಾರಿ, ಅತ್ತೆ ಎನ್ನೋ ಗಟವಾಣಿ, ಸೊಸೆ ಎಂಬ ಮೃದುತನ, ಅಳಿಯ ಎನ್ನೋ ಹುಳಿ ಹಿಂಡುವನಾದರೆ. ಈಗ ನೀವು ಮಾಡಬೇಕಾದ್ದು ಇಷ್ಟೆ, ಇದೇ ತರಹ ಕ್ರಮಪಲ್ಲಟನೆ ಮತ್ತು ಸಂಯೋಜನೆ ಮಾಡುತ್ತಾ ಬನ್ನಿ. ಆಗ ಅರಿವಾಗುವದು ಯಾವ ಯಾವ ತರಹದ ಮುಖವಾಡಗಳು ಮತ್ತು ಬಣ್ಣಗಳು ಇರುತ್ತವೆ ಎಂಬುದು. ಸಂಬಂಧ ಒಂದು ಕಡೆ, ಮತ್ತೊಂದೆಡೆ ಹಣ, ಆಭರಣ, ಆಸ್ತಿ, ಸಂಪಾದನೆ, ಖರ್ಚು, ವಿದ್ಯಾಭ್ಯಾಸ, ಕಾಯಿಲೆ ಹೀಗೆ ಎಲ್ಲವನ್ನೂ ಕುಟುಂಬದ ಆಟದ ನಡುವೆ ವ್ಯವಹರಿಸಬೇಕಾಗುತ್ತದೆ.
ಇದನ್ನು ಓದಿ: ರೋಬೋಟ್ (ಆಧುನಿಕ ಅಥವಾ ವಾಸ್ತವಿಕ ಬದುಕಿನ ಚಿಂತನೆ)
ಇನ್ನೊಂದು ಸಾಮಾಜಿಕ ಮುಖವಾಡವನ್ನು ನೋಡೋಣ. ದ್ವೇಷ, ಹಿಂಸೆ ಮತ್ತು ಹಗೆತನ. ನಾನು ನಿಜ ಹೇಳಬೇಕೆಂದರೆ ಚೆಸ್ಸ್ ಆಡುವುದೇ ಇಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ನೀವು ಆಡಬೇಡಿ ಅಂತಲ್ಲ. ನನ್ನ ಕಾಲ್ಪನಿಕ ಕಾರಣವನ್ನು ನಿಮಗೆ ತಿಳಿಸುತ್ತೇನೆ. ಒಮ್ಮೆ ಯೋಚಿಸೋಣ. ಈ ಅಟವು ಮೈಂಡ್ ಗೇಮ್. ಮನಸ್ಸಿನಲ್ಲೇ ಆಡುವ ಆಟ. ಹೇಗೆ ಸೈನಿಕನನ್ನು ಮಣಿಸಬೇಕು ಮತ್ತು ರಾಜನನ್ನು ಕೊಲ್ಲಬೇಕು. ಇಡೀ ಆಟವೇ ಕೊಲ್ಲುವ ವಿಚಾರ. ಒಮ್ಮೆ ಹೀಗೆ ಅರಿಯೋಣ. ನಮ್ಮ ಭಾರತೀಯ ಸಂವಿಧಾನ ಹಾಗು ಶಾಸನ ಬದ್ಧ ಅಡಿಯಲ್ಲಿ ಪೂರ್ವಯೋಜಿತವಾಗಿ ಹತ್ಯೆಗೈದ ಅಪರಾಧವನ್ನು ನ್ಯಾಯಾಲಯದಲ್ಲಿ ಸಾಬೀತು ಪಡಿಸಿದರೆ ನೇಣುಕಂಬವೇ ಶಿಕ್ಷೆ. ಹೀಗಿರುವಾಗ ನನಗೆ ಮನಸ್ಸಿನಲ್ಲೇ ಸಾಯಿಸುವ ವಿಚಾರವಿದ್ದರೆ ನೀವು ನನ್ನನ್ನು ಏನೆಂದು ಕರೆಯಬೇಕು ಮತ್ತು ನೀವು ನನಗೆ ಯಾವ ಶಿಕ್ಷೆ ನೀಡಬೇಕು? ಈ ಚೆಸ್ಸ್ ಆದಿ ಕಾಲದಿಂದಲೂ ಆಟವಾಡುತ್ತಿದ್ದಾರೆ. ನಾನೊಬ್ಬ ಮನೋವೈದ್ಯನಾದ್ದರಿಂದ ನನ್ನ ಸಲಹೆ ನೀವು ಆಟವಾಡಿ, ಆದರೇ ಮೇಲೆ ತಿಳಿಸಿರುವ ಮನಸ್ಥಿತಿಗಳು ಬೇಡ. ಇಂದು ದ್ವೇಷವೇ ಮನುಷ್ಯನ ಬಣ್ಣವಾಗಿಬಿಟ್ಟಿದೆ. ಮಾನವನಿಗೆ ತೊಂದರೆ ಕೊಡಬೇಕು ಎನ್ನುವುದೇ ಪಾಠವಾಗಿ ಬಿಟ್ಟಿದೆ. ಬನ್ನಿ ನಾವೆಲ್ಲರೂ “Not To Trouble Others” ಪಕ್ಷವನ್ನು ಸೇರೋಣ
ಇದನ್ನು ಓದಿ: ಸಾಮಾಜಿಕ ಪರಮಾಣು (ವಾಸ್ತವಿಕ ಚಿಂತನೆ)
ಓಮ್ಮೆ ಇತಿಹಾಸದ ಪುಟಗಳನ್ನು ತಿರುವೋಣ. ಆಟಗಳಲ್ಲಿ ಸೋತಿದ್ದೇವೆ, ಗೆದ್ದಿದ್ದೇವೆ. ಸೋತು ಗೆಲ್ಲೋಣ. ಸೋಲನ್ನು ಸೋತಿದ್ದೇವೆ ಎನ್ನುವ ಮನೋಭಾವ ಬೇಡ. ಸೋಲಿನ ಒಳಗೆ ಗೆಲುವನ್ನು ನೋಡೋಣ. ಗೆಲುವಿನಲ್ಲಿ ಸಂಭ್ರಮವಿರಲಿ ಆದರೂ ಸೋತವರನ್ನು ಅರಿಯೋಣ. ನಾವು ಆಡುವ ಆಟ ದೈವತ್ವದಿಂದ ಕೂಡಿರಬೇಕು. ನಾವು ಆಡುವ ಸಂದರ್ಭದಲ್ಲಿ ನೋಡುತ್ತಿರುವ ಪ್ರೇಕ್ಷಕರು ಒಳ್ಳೆಯದನ್ನು ಕಲಿಯಬೇಕು. ಆಡುತ್ತಿರುವಾಗ ಶ್ರೀಗಂಧದ ಕಂಪನ್ನು ಪಸರಿಸಬೇಕು. ಒಳ್ಳೆಯ ಆಟಗಳನ್ನು ನಮ್ಮ ವಂಶವಾಹಿನಿಯಲ್ಲಿ ಹರಿಸಬೇಕು.
ಪ್ರಪಂಚವು ಬೃಹತ್ತಾದ ಆಟದ ಮೈದಾನ. ನಾವೆಲ್ಲರು ಈ ಆಟದ ಮೈದಾನದಲ್ಲಿ ಆಡುವ ಆಟಗಾರರು. ಸೋಲು ಗೆಲುವು ಮುಖ್ಯವಲ್ಲ. ಸೋತವರನ್ನು ಅಪಹಾಸ್ಯ ಮಾಡುವದು ಬೇಡ. ಗೆಲುವನ್ನು ಅತಿಯಾಗಿ ಸಂಭ್ರಮಿಸೋದು ಬೇಡ. ನಾವು ಆಡುವ ಎಲ್ಲಾ ಆಟಗಳಿಗೆ ಮಿತಿ ಇರಲಿ. ಆಡುವಾಗ ಸಾಮರಸ್ಯ, ಹೊಂದಾಣಿಕೆ ಮತ್ತು ಒಗ್ಗಟ್ಟಿನ ಮಂತ್ರ ಇರಲಿ. ಪ್ರಪಂಚದ ಮಹಾನ್ ಆಟಗಾರನಾದ ಬುದ್ಧನಲ್ಲಿ ಸಿಟ್ಟು ಕಂಡಿದ್ದೀರಾ. ಅವನಿಗೆ ಮೋಸ, ಧಗೆ, ದ್ವೇಷ, ಅಸೂಯೆ, ಹಿಂಸೆ ಇದ್ದಿದ್ದರೆ ಅವನ ಗೆಲವು ಸಾಧ್ಯವಾಗುತಿತ್ತೆ? ಅವನನ್ನು ಎತ್ತಿ ಆಡಿಸುತಿದ್ದರೇ? ಆವನಿಗೆ ವಿಶ್ವ ಪದಕ ‘ಕಾರುಣ್ಯಪತಿ’ ನೀಡುತ್ತಿದ್ದರೇ? ಆಡುವಾಗ ನಾವೆಲ್ಲಾ ಅನುಕಂಪ, ಕಾರುಣ್ಯ, ಪ್ರೇಮ, ಔದಾರ್ಯ, ಶಾಂತಿ ಇಂತಹಾ ಪದಕಗಳನ್ನು ಪಡಿಯಬಹುದಲ್ಲವೇ….
ಇದನ್ನು ಓದಿ: ವಜ್ರದ ಗಡಿಯಾರ (ಅಧ್ಯಾತ್ಮಿಕ ಚಿಂತನೆ)
All games we play in the playground are instantaneous, reflex oriented, no calculations and no premeditation by any player. Watch football, where there are high emotions, quarrels and fights are instantaneous and they forget then and there. But, in the games we play, they will have lot of premeditation and we are destined to get trapped and subdued…
ಮಿತ್ರ, ಈಗ ತಿಳಿಯಿತೇ ಆಟಗಳ ವೈವಿಧ್ಯಮಯಾ…
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

