ಇಂದು ತಾಳ್ಮೆಯನ್ನು ಜನರಲ್ಲಿ ಹುಡಕಬೇಕಿದೆ. ಇಲ್ಲದ ಸಂಘರ್ಷಗಳಿಗೆ ನಾವೇ ಕಾರಣವಾಗುತ್ತೇವೆ. ತಾಳ್ಮೆಯ ಪಾಠವನ್ನು ಪಾಠಶಾಲೆಗಳಲ್ಲಿ ಯುವಕರಿಗೆ ಪಠ್ಯಕ್ರಮದಲ್ಲಿ ಅಳವಡಿಸಬೇಕಾಗಿದೆ. ತಾಳ್ಮೆ ಕಳೆದುಕೊಂಡು ಎಷ್ಟೋ ಯುವ ಜನರು ತಮ್ಮ ಜೀವನವನ್ನೇ ತೆತ್ತಿದ್ದಾರೆ. ಕ್ಷುಲ್ಲಕ ಕಾರಣಗಳಿಗಾಗಿ ಅಹಂಗಳು ಹೆಚ್ಚಾಗಿ ಅದರ ಹುಚ್ಚಾಟಗಳಿಂದ ಹರಿತವಾದ ಆಯುಧಗಳನ್ನು ಉಪಯೋಗಿಸಿ ಹತ್ಯೆ ಮಾಡಿರುವುದನ್ನು ಓದಿದ್ದೇವೆ ಮತ್ತು ಕೇಳಿದ್ದೇವೆ. ಅಂತಹ ಕ್ಷುಲ್ಲಕ ಕಾರಣಗಳಲ್ಲಿ ಒಂದು ವಾಹನಗಳ ಸಾಮಾನ್ಯ ಚಿಕ್ಕ ಅಪಘಾತ ಕೂಡ. ಅರಿವಿಲ್ಲದ, ಗಮನವಿಲ್ಲದ ಮತ್ತು ಕಣ್ಣಿಗೆ ಕಾಣದೇ ಇರುವಂತಹ ಚಾಲನೆಗೆ ಆಗುವಂತಹ ಸಾಮಾನ್ಯ ಅಪಘಾತಗಳು. ಇಲ್ಲಿ ಪ್ರತಿಷ್ಟೆಗಳನ್ನು ಪಣಕಿಟ್ಟು ನಾನು ಸರಿ, ತಾನು ಸರಿಯೆಂದು ಹಿಡಿದು ವಿಕೋಪಕ್ಕೆ ತಿರುಗಿ ಸಾವಿನಲ್ಲಿ ಕೊನೆಗೊಳ್ಳುವುದನ್ನು ಗಮನಿಸಿದ್ದೇವೆ. ಈ ವಾದಾತ್ಮಕವನ್ನು ನಾನು Rage vs Razor (ಹುಚ್ಚಾಟ ಮತ್ತು ಬ್ಲೇಡ್) ಎಂದು ವಿಶ್ಲೇಷಿಸಿರುವೆ. ಈ ವಿಷಯವನ್ನು ನನ್ನದೇ ಆದ ಧಾಟಿಯಲ್ಲಿ ನಿರೂಪಣೆ ಮಾಡುವ ಪ್ರಯತ್ನ.
ಮೂಲತಹ ಮಾನವ ಸಂಘ ಜೀವಿ. ಸಮಾಜದಲ್ಲಿನ ಒಡನಾಟ ಹಾಗು ಸಂಬಂಧಗಳಿಗೆ ಮನೋಧರ್ಮ ಅತ್ಯಗತ್ಯ. ಸಂಬಂಧಗಳ ಅಭಾವ ಕಂಡುಬಂದಲ್ಲಿ ಮಾನಸಿಕ ಸಮಸ್ಯೆಯಿಂದ ಜನರು ಬಳಲುವರು ಎಂಬುದು ಮನೋ ವೈದ್ಯ ಗ್ರಂಥದಲ್ಲಿ ಉಲ್ಲೇಖಿಸಲ್ಪಟ್ಟಿದೆ. ನಂಬಿಕೆ ಮತ್ತು ವಿಶ್ವಾಸ ಅತಿ ಮುಖ್ಯವಾದ ಸಾಮಾಜಿಕ ಮತ್ತು ಮಾನಸಿಕ ಸಾಧನೆಗಳು ಅಥವಾ ಸಲಕರಣೆಗಳು.
ಇದನ್ನು ಓದು: ಅರಿವು (Consciousness)
ಸುಮಾರು 50 ವರ್ಷಗಳ ಹಿಂದಿನ ವಿಷಯ. ನಾನು ಹುಟ್ಟಿದ್ದು ಬೆಳೆದಿದ್ದು ಅರಕಲಗೂಡು. ಹಾಸನ ಜಿಲ್ಲೆಯ ಒಂದು ಸಾಮಾನ್ಯ ತಾಲೋಕ್ ನಮ್ಮ ಊರು, ಊರಿಗೆ ಊರಲ್ಲ ಅಥವ ಹಳ್ಳಿಗೆ ಹಳ್ಳಿ ಅಲ್ಲ. ತಾತ ಸಾಲ ಮಾಡಿ ಅತ್ತೆಯನ್ನು ಬೆಂಗಳೂರು ಸಾಹುಕಾರರ ಮಗನಿಗೆ ಮದುವೆ ಮಾಡಿಕೊಟ್ಟಿದ್ದರು. ನಮಗೆಲ್ಲಾ ಮಾವ ಊರಿಗೆ ಬರುತ್ತಾರೆಂದರೆ ಎಲ್ಲಿಲ್ಲದ ಖುಷಿ. ಆಗ ನಮಗೆ ಸೈಕಲ್ ಬಿಟ್ಟರೆ ಬೇರೆ ವಾಹನಗಳು ಇರಲಿಲ್ಲ. ಮಾವ ಯಾವಾಗಲೂ ಕಾರಿನಲ್ಲೇ ಬರುತ್ತಿದ್ದರು. ಊರಿಗೆ ಕಾರು ಬಂತೆಂದರೆ ಕಾರಿನ ಹಿಂದೆ ಕೆ ಕೆ ಹಾಕುತ್ತಿದ್ದ ದಂಡಿ ಹುಡುಗರು. ಇವರಲ್ಲಿ ನಾನು ಸಹ ಒಬ್ಬ. ಆಬ್ಬಬ್ಬ ಎಂತಾ ಕಾರು. ಬಿಳಿ ಪ್ರೀಮಿಯರ್ ಪದ್ಮಿನಿ ಕಾರು. ಪಳ ಫಳ ಹೊಳೆಯುವ ಕಾರು. ಅಕಸ್ಮಾತ್ ಮುಟ್ಟಿದರೆ ಮಾವನಿಂದ ಬೈಗುಳ ತಪ್ಪಿದ್ದಲ್ಲ. ಮಾವನಿಗೆ ಅತ್ತೇಗಿಂತಾ ಕಾರಿನ ಮೇಲೆ ಪ್ರೀತಿ ಹೆಚ್ಚು. ನಾವು ಇವರ ಕಾರಿಗೆ ಅಶ್ಪ್ರುಷ್ಯರು. ಇವರ ಕಾರನ್ನು ಮುಟ್ಟುವ ಹಾಗಿಲ್ಲ ಮತ್ತು ಹತ್ತುವ ಹಾಗಿಲ್ಲ. ಎಂತಾ ಒಡೆತನದ ಹುಚ್ಚು. ಮಾವನಿಗೆ ಯಾರ ಮೇಲೂ ವಿಶ್ವಾಸ ಇರಲಿಲ್ಲ. ಅವರ ನಿದ್ರೆಯಲ್ಲೂ ಅವರ ಕಾರೇ ಬರುತಿತ್ತು.
ಇದನ್ನು ಓದು: ರೋಬೋಟ್ (ಆಧುನಿಕ ಅಥವಾ ವಾಸ್ತವಿಕ ಬದುಕಿನ ಚಿಂತನೆ)
ಇಂತಾ ವ್ಯಕ್ತಿತ್ವಕ್ಕೆ ಕಾರಣ ಏನು? ಇಂತಾ ಹುಚ್ಚು ಒಡತನಕ್ಕೆ ಕಾರಣ ಏನಿರಬಹುದು? ಸಂಬಂಧಗಳಲ್ಲಿ ಹಿಂದೆ ಹೇಳಿದಂತೆ ವಿಶ್ವಾಸ ಮತ್ತು ನಂಬಿಕೆ ಅತಿ ಮುಖ್ಯ. ಸಾಹುಕಾರ ತನ್ನ ಕೆಲಸಕ್ಕೆ ಕೆಲವರನ್ನು ನೇಮಕ ಮಾಡುತ್ತಾನೆ. ಕೆಲಸದವನು ಹಣಕ್ಕೆ ಸಿಗುವುದಿಲ್ಲ. ಸಂಬಳಕ್ಕೆ ಸಿಗುತ್ತಾನೆ. ಸಾಹುಕಾರನಿಗೆ ಕೆಲವರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರೂ ಒಬ್ಬನಲ್ಲಿ ಮಾತ್ರ ನಂಬಿಕೆ ಇಟ್ಕೊಂಡಿರುತ್ತಾನೆ. ಈ ಕೆಲಸದವನಿಗೆ ಸಾಹುಕಾರ ಏನೇ ಮಾಡಿದರೂ ಕಮ್ಮಿಯೇ ಹಾಗು ಎಷ್ಟೇ ಹಣ ಮತ್ತು ವಸ್ತುಗಳನ್ನು ನೀಡಿದರೂ ಸಂತೋಷವಿಲ್ಲ. ಈತನಿಗೆ ಧಣಿ ಏನೂ ಮಾಡಿಲ್ಲ ಎಂಬ ಧೋರಣೆ. ಇವನಿಗೆ ಹೃದಯ ಇದೆ, ಮನಸ್ಸಿದೆ ಮತ್ತು ವಿವೇಕವಿದೆ. ಆದರೆ ಕಾರಿಗೆ? ಕಾರನ್ನು ಖರೀದಿಸಬೇಕು, ಸಂಬಳಕ್ಕೆ ಸಿಗುವುದಿಲ್ಲ ಆದರೇ ಅತಿ ನಂಬಿಕೆಯ ಕೆಲಸದಾಳು. ಕೆಲಸದ ಆಳಿಗೆ ಇರುವ ಮನಸ್ಸು ಕಾರಿನಲ್ಲಿ ಇರವುದಿಲ್ಲ. ಇಂಜಿನ್, ಸ್ಟೀರಿಂಗ್ ಮತ್ತು ಫೂಯಲ್ ಇರುತ್ತವೆ.
ಇದನ್ನು ಓದು: ಯಮ ಮಹಾರಾಜ (ವೈಯಕ್ತಿಕ ಸಿದ್ಧಾಂತ)
ನಮಗೆ ಚಾಲನೆಯ ಬುದ್ದಿ ಇರಬೇಕಷ್ಟೆ. ಸಾಹುಕಾರ ತನ್ನ ಕೆಲಸದಾಳನ್ನು ಸೂಕ್ಷ್ಮ ಜಾಗಗಳಿಗೆ ಕರೆದುಕೊಂಡು ಹೋಗುವುದಿಲ್ಲ. ಇವನು ಕಾರನ್ನು ಎಲ್ಲಿಗೆ ಬೇಕಾದರೂ ತೆಗದುಕೊಂಡು ಹೊಗಬಹುದು. ಆದುದರಿಂದ ಧಣಿಗೆ ಕಾರಿನ ಮೇಲೆ ಅತಿಯಾದ ನಂಬಿಕೆ, ಅದೇ ನಂಬಿಕೆ ಕೆಲಸಗಾರನ ಮೇಲೆ ಇರುವುದಿಲ್ಲ. ಈ ಸಮಯದಲ್ಲಿ ಸಾಹುಕಾರನಿಗೆ ಎರಡು ಹೃದಯ ಇರುತ್ತದೆ. ಒಂದು ಅವನ ಹೃದಯ ಮತ್ತು ಇನ್ನೊಂದು ಕಾಲ್ಪನಿಕ ಹೃದಯ, ಕಾರಿನ ಹೃದಯ.
ಇದನ್ನು ಓದು: ಸಾಮಾಜಿಕ ಪರಮಾಣು (ವಾಸ್ತವಿಕ ಚಿಂತನೆ)
ಕೆಲಸಗಾರನಿಗೆ ಅಲ್ಪ ಗಾಯವಾದರೇ ತಲೆ ಕೆಡೆಸಿಕೊಳ್ಳುವ ಅಗತ್ಯವಿಲ್ಲ. ತನ್ನಷ್ಟಕ್ಕೆ ತಾನೇ ರಿಪೇರಿ ಆಗುತ್ತದೆ. ಇಲ್ಲವಾದರೆ ಶುಶ್ರೂಷೆ ಮಾಡುವ ವೈದ್ಯ ಅಗ್ಗವಾಗಿ ಸಿಗುತ್ತಾನೆ ಅದರೇ ಕಾರು, ನಗ್ಗಿದನ್ನು ಸರಿಪಡಿಸಲು ಮೆಕಾನಿಕ್ ಕಡೆ ಬಿಡಬೇಕು. ಟಿಂಕರ್ ವ್ಯಕ್ತಿ ಅಗ್ಗದಲ್ಲಿ ಸಿಗುವನಲ್ಲ. ಹಣ ಖರ್ಚು ಮಾಡಬೇಕು.
ಟಿಂಕರ್ ಹತ್ತಿರ ರಿಪೇರಿಗೆಂದು ಬಿಟ್ಟ ಮಾಲಿಕನಿಗೆ ಕೈ ಕಾಲೇ ಓಡುವುದಿಲ್ಲ. ಆತನಿಗೆ ಕಾರಿನ ಗೀಳು ಮತ್ತು ವ್ಯಾಮೋಹ ಅತಿ ಹೆಚ್ಚು. ಆದುದರಿಂದ ನಿದ್ರೆಯೇ ಬರುವುದಿಲ್ಲ. ಅತನ ಹೃದಯಕ್ಕಿಂತಾ ಕಾಲ್ಪನಿಕ ಕಾರಿನ ಹೃದಯದವೇ ಹೆಚ್ಚಾಯಿತು. ಕಾರಿನ ಒಡಯನಿಗೆ ಗಾಯವಾದರೂ ಪರವಾಗಿಲ್ಲ. ಇದರ ಕಾರಣ, ಮಾನವನಿಗೆ ಯಾವುದೇ ಗಾಯವಾದರೂ ತನ್ನಷ್ಟಕ್ಕೆ ತಾನೇ ರಿಪೇರಿಗೊಳ್ಳುವ ಸಾಮರ್ಥ್ಯ ಇರುತ್ತದೆ. ನಮ್ಮ ಶರೀರದಲ್ಲಿನ ಫಿಬ್ರಿನ್, ಪ್ಲೇಟ್ ಲೆಟ್ ಮತ್ತು ಕ್ಲಾಟಿಂಗ್ ಫಾಕ್ಟರ್ಸ್ ನಿಂದ ಆಗುವ ಸಮ್ಮಿಶ್ರಣದಿಂದ ಗಾಯದಲ್ಲಿ ಆಗುವ ರಕ್ತಸ್ರಾವ ನಿಲ್ಲುತ್ತದೆ. ನಮ್ಮಲ್ಲೆ ಇರುವ ರೋಗ ನಿರೋಧಕ ಶಕ್ತಿಯಿಂದ ಗಾಯಗಳು ಗುಣ ಮುಕ್ತವಾಗುತ್ತವೆ. ಕಾರು ಈ ತರಹದ ಸಾಮರ್ಥ್ಯ ಹೊಂದಿರುವುದಿಲ್ಲ. ವಿಪರ್ಯಾಸ ಎಂದರೆ ಕಾರ್ ಮಾಲಿಕನಿಗೆ ತನ್ನ ಕಾರಿನ ಬಗ್ಗೆ ಅತಿಯಾದ ಅಥವಾ ಹುಚ್ಚಿನಂತಾ ಬಂಧನ. ಹೀಗೆ ಇರುವುದರಿಂದ ಕಾರಿನ ವಾರಸುದಾರನು ತನ್ನ ಕಾರಿಗೆ ಅಲ್ಪ ಡಿಕ್ಕಿ ಆದರೂ ತನ್ನ ತಾಳ್ಮೆಯನ್ನು ಕಳೆದುಕೊಳ್ಳುತ್ತಾನೆ.
ಇದನ್ನು ಓದು: ವಜ್ರದ ಗಡಿಯಾರ (ಅಧ್ಯಾತ್ಮಿಕ ಚಿಂತನೆ)
ಈ ವಿದ್ಯಮಾನಗಳಿಂದ ತಿಳಿಯುವುದಾದರೂ ಏನು? ನಂಬಿಕೆಗಳ ಕೊರತೆಯೇ, ವಿಶ್ವಾಸಗಳು ಅಳಿಸಿವಿಯೇ ಮತ್ತು ವಿವೇಕ ಬರಿದಾಗಿದೆಯೇ? ಹತ್ತಿರ ಇರುವ ಮನುಷ್ಯರ ಮತ್ತು ಬಂಧುಗಳ ನಡುವೆ ನಂಬಿಕೆಗಳು ದೂರವಾಗುತ್ತಿವೆ, ನಮಗೆ ನಮ್ಮ ಮೇಲೆ ವಿಶ್ವಾಸ ಕಮ್ಮಿ ಆಗತೊಡಗಿದ್ದಾವೆ ಮತ್ತು ಪ್ರತಿಷ್ಠೆಗಳು ಇಮ್ಮಡಿಸಿವೆ. ಇವುಗಳಿಂದ ತಾಳ್ಮೆ ಕಳೆದುಕೊಂಡು ಜಗಳ, ಬಡಿದಾಟ ಮತ್ತು ಜೀವ ಕಳೆದು ಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗುತ್ತಿವೆ. ಅಪಘಾತಗಳು ಸರ್ವೇ ಸಾಮಾನ್ಯ. ಇಂತಹ ಸಮಯಗಳಲ್ಲಿ ತಾಳ್ಮೆಯಿಂದ ಇರಬೇಕು ಮತ್ತು ವರ್ತಿಸಬೇಕು. ಸಂಯಮಗಳಿಂದ ಅಮಾಯಕರು ಬಲಿ ಆಗುವುದನ್ನು ತಡೆಗಟ್ಟಬಹುದು. ಇಲ್ಲಿ ಸೋಲುವುದು ಯಾರು? ನಾವಲ್ಲವೇ. ಕಾರು ನಮ್ಮ ಜಗಳಕ್ಕೆ ಮೂಖ ಪ್ರೇಕ್ಷಕ. ಪಾಪ, ಅದೇನು ಮಾಡೀತು. ನಮ್ಮ ಇಬ್ಬರ ಜಗಳದಲ್ಲಿ ಗೆದ್ದವನು ‘ಕಾರು’.
ಇದನ್ನು ಓದು: ಸಸ್ಪೆಂಡೆಡ್ ಕಣ (ಒಂದು ವಿಮರ್ಶೆ)
A car is better than dog, a dog is faithful to the master, but at times if this master is unfaithful to to his wife, his dog might bark at him. A car will never do this, a car just follows master. As car is so faithful to its master that the master cannot tolerate any scratch, dent or a touch by another car to his car…
ಮುಂದುವರಿಯುವುದು…

[…] ಇದನ್ನು ಓದಿ: ಹುಚ್ಚಾಟ ಮತ್ತು ಬ್ಲೇಡ್ (Rage or Razor – ಪ್ರಸ್ತುತ… […]