ಕೆ.ಆರ್.ಪೇಟೆ: ತಾಲ್ಲೂಕಿನ ಮಡುವಿನಕೋಡಿ ಗ್ರಾಮದಲ್ಲಿ ಇದೇ ಜ.27 ರಂದು ಮಂಗಳವಾರ ಬೆಳಿಗ್ಗೆ 11ಗಂಟೆಗೆ ರಾಜ್ಯ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಬೆಳ್ಳಿ ಹಬ್ಬದ ಅಂಗವಾಗಿ ಬೃಹತ್ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಹಾಗೂ 1000ಮಂದಿ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಯುವ ಜೆಡಿಎಸ್ ಅಧ್ಯಕ್ಷ ಮಹಾದೇವೇಗೌಡ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲ್ಲೂಕು ಯುವ ಜೆಡಿಎಸ್ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಮಹಾದೇವೇಗೌಡ ಅವರು ಹರಿಹರಪುರದಿಂದ ಮಡುವಿನಕೋಡಿ ವರೆವಿಗೂ ಯುವ ಜೆಡಿಎಸ್ ವತಿಯಿಂದ ಬೃಹತ್ ಬೈಕ್ ರಾಲಿ ಮೂಲಕ ಬರಮಾಡಿಕೊಳ್ಳಲಾಗುವುದು. ಕ್ಷೇತ್ರದ ಜನಪ್ರಿಯ ಶಾಸಕರಾದ ಹೆಚ್.ಟಿ.ಮಂಜಣ್ಣ ಅವರ ಮಾರ್ಗದರ್ಶನದಲ್ಲಿ ಈ ಬೃಹತ್ ಸಮಾವೇಶ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ಅವರ 38ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ 38ಕೆ.ಜಿ ಬೃಹತ್ ಗಾತ್ರದ ಕೇಕ್ ಕಟ್ ಮಾಡಲಾಗುವುದು. ನಿಖಿಲ್ ಕುಮಾರಸ್ವಾಮಿ ಮತ್ತು ಹೆಚ್.ಟಿ.ಮಂಜಣ್ಣ ಅವರಿಗೆ ಬೃಹತ್ ಗಾತ್ರದ ಕೊಬ್ಬರಿ ಕಾಯಿ ಮತ್ತು ಮಂಡ್ಯ ಬೆಲ್ಲದ ಹಾರವನ್ನು ಹಾಕಿ ಸನ್ಮಾನಿಸಿ ಗೌರವಿಸಲಾಗುವುದು ಹಾಗಾಗಿ ನಿಖಿಲ್ ಕುಮಾರಸ್ವಾಮಿ ಆಗಮಿಸುತ್ತಿರುವ ಅಂಗವಾಗಿ ಅವರನ್ನು ಸ್ವಾಗತಿಸಲು ತಾಲ್ಲೂಕಿನ ಗಡಿ ಗ್ರಾಮ ಅಶೋಕ ನಗರ ಬೃಹತ್ ಸಂಖ್ಯೆಯಲ್ಲಿ ಜೆಡಿಎಸ್ ಮುಖಂಡರು,ಕಾರ್ಯಕರ್ತರು, ಅಭಿಮಾನಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ತಾಲ್ಲೂಕು ಜೆಡಿಎಸ್ ಯುವ ಘಟಕ ಅಧ್ಯಕ್ಷ ಮೀಸೆ ಮಹದೇವೇಗೌಡ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ವಿವೇಕ್, ಅಶೋಕ್, ಅವಿನಾಶ್, ಅಗ್ರಹಾರಬಾಚಹಳ್ಳಿ ಲೋಕೇಶ್, ಸುನಿಲ್, ಬಂಡಿಹೊಳೆ ಕಾಯಿ ಮಂಜೇಗೌಡ, ಕೌಶಿಕ್, ಲೋಕಿ,ರಾಹುಲ್, ಸಿಂಗನಹಳ್ಳಿ ಜೀವನ್, ಕಿಕ್ಕೇರಿ ರಾಕೇಶ್,ಸಂಜಯ್, ಸಚಿನ್ ನಿಖಿಲ್ ಕುಮಾರಸ್ವಾಮಿ, ಯಡಹಳ್ಳಿ ಪ್ರಶಾಂತ್, ದಿಲೀಪ್, ಪ್ರವೀಣ್, ಸಚಿನ್, ಸೇರಿದಂತೆ ಇತರರು ಹಾಜರಿದ್ದರು.
– ಶ್ರೀನಿವಾಸ್ ಆರ್.
