ವಡ್ಡರಹಳ್ಳಿ- ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಹೊಸ ಸಾಲದ ಫಲಾನುಭವಿಗಳಿಗೆ ಚಕ್ ಗಳನ್ನು ವಿತರಣೆಯನ್ನು ಶಾಸಕರಾದ ಸಿಎನ್ ಬಾಲಕೃಷ್ಣ ನೆರವೇರಿಸಿದರು.
ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ವಡ್ಡರಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಶೇರುದಾರರಿಗೆ ಹೊಸ ಸಾಲದ ಸೌಲಭ್ಯದ ಎಟಿಎಂ ಕಾರ್ಡ್ ಗಳನ್ನು ವಿತರಿಸಲಾಯಿತು.
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ ಎನ್ ಬಾಲಕೃಷ್ಣ ಮಾತನಾಡಿ ವಡ್ಡರಹಳ್ಳಿ ಕೃಷಿಪತ್ತಿನ ಸಹಕಾರ ಸಂಘದ ಎಲ್ಲಾ ನಿರ್ದೇಶಕರ ಮಾರ್ಗದರ್ಶನದಲ್ಲಿ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವುದು ತುಂಬಾ ಶ್ಲಾಘನೀಯ ಎಂದರು. ಮಾಜಿ ಅಧ್ಯಕ್ಷರು ಹಾಗೂ ನಿರ್ದೇಶಕರುಗಳ ಮಾರ್ಗದರ್ಶನ ಮತ್ತು ಸಲಹೆಯನ್ನು ಪಡೆದು ಸಂಘವನ್ನು ನಡೆಸಿಕೊಂಡು ಹೋಗುವುದರ ಜೊತೆಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾಜಿ ಮಂತ್ರಿ ಎಚ್ ಡಿ ರೇವಣ್ಣನವರ ಮಾರ್ಗದರ್ಶನದಲ್ಲಿ ಹೆಚ್ಚಿನ ಅನುದಾನ ತಂದು ರೈತರಿಗೆ ಮತ್ತಷ್ಟು ಸಾಲ ನೀಡುವ ಮೂಲಕ ರೈತರ ಆರ್ಥಿಕತೆಯನ್ನು ಬಲಗೊಳಿಸಲಾಗುವುದೆಂದರು.

ಸಹಕಾರಿ ಸಂಸ್ಥೆಗಳು ಸಹಕಾರ ತತ್ವದಡಿ ಕಾರ್ಯ ನಿರ್ವಹಿಸಿದಾಗ ಸಹಕಾರ ಸಂಸ್ಥೆಗಳು ಉನ್ನತಿಕರಣಗೊಳ್ಳಲು ಸಾಧ್ಯ. ಸೊಸೈಟಿ ಆರ್ಥಿಕವಾಗಿ ಸದೃಢವಾಗಿ ಬೆಳೆದಿದ್ದು, ಸಂಘದಡಿ 6.87 ಕೋಟಿ ರು. ಕೆಸಿಸಿ ಸಾಲ ನೀಡಲಾಗಿದೆ, ಸ್ವಿಶಕ್ತಿ ಸಂಘಗಳಿಗೆ 38 ಲಕ್ಷ ಸಾಲ, 1.10 . ಎಂಪಿಎಸ್ ಸಾಲ ನೀಡಲಾಗಿದೆ. ವಡ್ಡರಹಳ್ಳಿ ಸೊಸೈಟಿಯಿಂದ ಈ ದಿನ 36 ಜನ ಫಲಾನುಭವಿಗಳಿಗೆ 15,67000 ಹೊಸ ಸದಸ್ಯರಿಗೆ ಸಾಲ ಸೌಲಭ್ಯ, 286 ಜನರಿಗೆ ಹೆಚ್ಚುವರಿಯಾಗಿ ಸಾಲ ಸೌಲಭ್ಯವನ್ನು ನೀಡಲಾಗಿದೆ. ನಾನು ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ನಮಗೆ ತಾಲೂಕಿಗೆ ವರದಾನವಾಗಿದೆ. ಸಹಕಾರ ತತ್ವದಲ್ಲಿ ಹುಟ್ಟಿಕೊಂಡ ಸಂಸ್ಥೆಗಳು ಅಧಿಕ ಲಾಭದ ನಿರೀಕ್ಷೆ ಹೊಂದಿರಬಾರದು.
ಸಹಕಾರ ರಂಗದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಕೃಷಿ ಉತ್ತೇಜನಕ್ಕೆ ಯೋಜನೆಗಳನ್ನು ರೂಪಿಸಿ, ಗ್ರಾಹಕರಿಗೆ, ರೈತರಿಗೆ ಹತ್ತಿರವಾಗಿ ಸೇವೆ ಸಲ್ಲಿಸುವಲ್ಲಿ ಮುಂದಾಗುವಂತೆ ಸಹಕಾರ ನೀಡುತ್ತಾ ಬಂದಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಶಾಸಕರಾದ ಸಿ ಎನ್ ಬಾಲಕೃಷ್ಣ, ಕರ್ನಾಟಕ ಸಹಕಾರ ಮಾರಾಟ ಮಂಡಳಿಯ ನಿರ್ದೇಶಕರಾದ ಸಿ ಎನ್ ಪುಟ್ಟಸ್ವಾಮಿಗೌಡ, ಸೊಸೈಟಿಯ ಅಧ್ಯಕ್ಷರಾದ ವಿ ಎಂ ದಿನೇಶ್, ಉಪಾಧ್ಯಕ್ಷರಾದ ನಾಗೇಶ್ ಕೆ ಹೊಸಹಳ್ಳಿ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸೊಸೈಟಿಯ ನಿರ್ದೇಶಕರಾದ ವಿ ಎನ್ ರಾಜಣ್ಣ, ವಡ್ಡರಹಳ್ಳಿ ಸೊಸೈಟಿಯ ನೂತನ ನಿರ್ದೇಶಕರುಗಳಾದ ಆರ್ ಮಂಜಪ್ಪ, ಸಿ ಬಿ ಹರೀಶ್, ಯೋಗೇಶ್, ರಾಮಕೃಷ್ಣ, ವಿ ಆರ್ ದಿನೇಶ್, ಶ್ರೀಮತಿ ಚಂದ್ರಮ್ಮಶಿವರಾಂ, ಶ್ರೀಮತಿ ಮಮತಾರಾಜಶೇಖರ್, ಶ್ರೀಮತಿ ಕಾಳಮ್ಮಜಯರಾಮ್, ಸೊಸೈಟಿಯ ಮಾಜಿ ಅಧ್ಯಕ್ಷರಾದ ಗಣೇಶ್ ಗೌಡ, ಜೆಡಿಎಸ್ ಮುಖಂಡರುಗಳಾದ ಸಿ ವೈ ಪ್ರವೀಣ, ಸಿಂಹಾದ್ರಿ ಮಂಜಣ್ಣ, ಚಿಕ್ಕಬೆಳತಿ ಗಂಗಾಧರ್, ಜಿ ವಾಸು, ಎ ಸಿ ಶಿವರಾಮ, ಕಾಂತರಾಜಪುರ ಗ್ರಾಮ ಪಂಚಾಯತಿ ಸದಸ್ಯರುಗಳಾದ ಪ್ರಮೀಳಾ ನಾಗರಾಜ್, ವಿ ಬಿ ಮಂಜುನಾಥ್, ಸೊಸೈಟಿಯ ಮಾಜಿ ಅಧ್ಯಕ್ಷರುಗಳಾದ ರಾಜೇಶ್ ವಿ ಆರ್ , ವೇಣುಗೋಪಾಲ, ಸುರೇಶ್ ವಿಎಲ್, ಮುಖಂಡರುಗಳಾದ ಲಕ್ಷ್ಮಿ ಗೌಡ, ಸಂಪತ್ ಕುಮಾರ್, ಶಿವರಾಂ, ನಾಗೇಗೌಡ, ಕುಮಾರ್, ಎಚ್ ಡಿ ಸಿ ಸಿ ಬ್ಯಾಂಕ್ ನ ಮೇಲ್ವಿಚಾರಕರಾದ ಎಸ್ ಆರ್ ಮಧು, ಸೊಸೈಟಿ ಕಾರ್ಯದರ್ಶಿಯಾದ ಬಿ ಆರ್ ನಟರಾಜ್, ಸಿಬ್ಬಂದಿಗಳಾದ ರಮೇಶ್, ವಿ ಜೆ ರಾಘವೇಂದ್ರ, ಸೋಮಶೇಖರ್, ವಡ್ಡರಹಳ್ಳಿ ಸೊಸೈಟಿಯ ಮಾಜಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ.ಕೆ
