ಭಾರತದ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ತಂತ್ರಜ್ಞಾನ ದೈತ್ಯ ‘ಮೆಟಾ’ (Meta) ಸಂಸ್ಥೆಗೆ ಅದರ ಅಂಗಸಂಸ್ಥೆಯಾದ ವಾಟ್ಸಾಪ್ನ ಖಾಸಗಿ ನೀತಿಗಳ (Privacy Policies) ಕುರಿತು ಖಡಕ್ ಭಾರತೀಯ ನಾಗರಿಕರ ದತ್ತಾಂಶ (Data) ಸುರಕ್ಷತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅತ್ಯಂತ ನಿರ್ಣಾಯಕ ತೀರ್ಪೊಂದನ್ನು ನೀಡಿದೆ.
“ವಾಟ್ಸಾಪ್ (WhatsApp) ತನ್ನ ಬಳಕೆದಾರರ ಮಾಹಿತಿಯನ್ನು ತನ್ನದೇ ಮಾತೃ ಸಂಸ್ಥೆಯಾದ ಮೆಟಾ (Meta) ಜೊತೆ ಹಂಚಿಕೊಳ್ಳುವಂತಿಲ್ಲ” ಎಂದು ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದೆ.
ವಾಟ್ಸಾಪ್, ಮೆಟಾ ಮತ್ತು ಭಾರತೀಯ ಸ್ಪರ್ಧಾ ಆಯೋಗ (CCI) ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತಂತ್ರಜ್ಞಾನ ಕಂಪನಿಗಳ ಡೇಟಾ ಹಂಚಿಕೆ ಮತ್ತು ಮಾರುಕಟ್ಟೆ ಪ್ರಾಬಲ್ಯದ ಕುರಿತು ಕೆಂಡಾಮಂಡಲವಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಅಮೆರಿಕ ಮೂಲದ ಈ ಸಂಸ್ಥೆಗೆ ಎಚ್ಚರಿಕೆ ನೀಡುತ್ತಾ ಹೀಗೆ ಹೇಳಿದರು: “ನಮ್ಮ ದೇಶದ ಖಾಸಗಿತನದ (Privacy) ಜೊತೆ ಆಟವಾಡಲು ನಿಮಗೆ ನಾವು ಅವಕಾಶ ನೀಡುವುದಿಲ್ಲ. ನಮ್ಮ ದತ್ತಾಂಶದ (Data) ಒಂದು ಸಣ್ಣ ಅಂಕಿಯನ್ನೂ (Single Digit) ನೀವು ಇತರರೊಂದಿಗೆ ಹಂಚಿಕೊಳ್ಳಲು ನಾವು ಬಿಡುವುದಿಲ್ಲ.” ಎಂದಿದ್ದಾರೆ. ಅಲ್ಲದೇ , “ಒಂದು ವೇಳೆ ನೀವು ದೇಶದ ಕಾನೂನುಗಳನ್ನು ಪಾಲಿಸಲು ವಿಫಲರಾದರೆ, ನೀವು ಭಾರತವನ್ನು ಬಿಟ್ಟು ಹೋಗಬಹುದು,” ಎಂದು ಎಚ್ಚರಿಸಿದ್ದಾರೆ.
ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, “ಈ ದೇಶದ ಜನರ ಖಾಸಗಿತನದ (Privacy) ವಿಷಯದಲ್ಲಿ ಆಟವಾಡಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ” ಎಂದು ಎಚ್ಚರಿಸಿದೆ. ವಾಟ್ಸಾಪ್ ಸಂಗ್ರಹಿಸುವ ಬಳಕೆದಾರರ ವೈಯಕ್ತಿಕ ಮಾಹಿತಿ, ಚಾಟ್ ವಿವರ ಅಥವಾ ಇತರ ಡೇಟಾಗಳನ್ನು ವ್ಯವಹಾರಿಕ ಉದ್ದೇಶಕ್ಕಾಗಿ ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಮ್ನಂತಹ ಮೆಟಾ ವೇದಿಕೆಗಳೊಂದಿಗೆ ಹಂಚಿಕೊಳ್ಳುವುದನ್ನು ನ್ಯಾಯಾಲಯ ನಿರ್ಬಂಧಿಸಿದೆ.ಈ ತೀರ್ಪು ಭಾರತದ ಲಕ್ಷಾಂತರ ವಾಟ್ಸಾಪ್ ಬಳಕೆದಾರರಿಗೆ ದೊಡ್ಡ ಮಟ್ಟದ ನಿರಾಳತೆ ತಂದಿದೆ. ಬಳಕೆದಾರರ ಅನುಮತಿ ಇಲ್ಲದೆ ಅವರ ಡೇಟಾ ದುರ್ಬಳಕೆಯಾಗುವುದನ್ನು ಇದು ತಡೆಯಲಿದೆ. ತಂತ್ರಜ್ಞಾನದ ಹೆಸರಿನಲ್ಲಿ ನಾಗರಿಕರ ಮೂಲಭೂತ ಹಕ್ಕಾದ ಖಾಸಗಿತನವನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ಕಂಪನಿಗಳು ಭಾರತದ ಕಾನೂನು ಮತ್ತು ಜನರ ಗೌಪ್ಯತೆಯನ್ನು ಗೌರವಿಸಲೇಬೇಕು ಎಂದು ಕೋರ್ಟ್ ಹೇಳಿದೆ
ವಿಚಾರಣೆಯ ಪ್ರಮುಖ ಅಂಶಗಳು
• ಸಾಮಾನ್ಯ ಜನರ ಅಜ್ಞಾನದ ದುರ್ಬಳಕೆ: “ಬೀದಿ ಬದಿ ವ್ಯಾಪಾರಿಗಳಿಂದ ಹಿಡಿದು ಗ್ರಾಮೀಣ ಭಾಗದ ಕೋಟ್ಯಂತರ ಜನರು ವಾಟ್ಸಾಪ್ ಬಳಸುತ್ತಾರೆ. ಇವರಿಗೆ ನಿಮ್ಮ ಸಂಕೀರ್ಣವಾದ ಖಾಸಗಿ ನೀತಿಗಳು (Privacy Policies) ಅರ್ಥವಾಗಲು ಸಾಧ್ಯವೇ ಇಲ್ಲ,” ಎಂದು ಮುಖ್ಯ ನ್ಯಾಯಮೂರ್ತಿಗಳು ತಂತ್ರಜ್ಞಾನ ದೈತ್ಯರನ್ನು ಪ್ರಶ್ನಿಸಿದರು.
• ಸಿಂಹ ಮತ್ತು ಕುರಿಮರಿ: ಕಂಪನಿಗಳು ಹೇಳುವ ‘ಸಮ್ಮತಿ’ (Consent) ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್, “ಇದು ಸಿಂಹ ಮತ್ತು ಕುರಿಮರಿಯ ನಡುವಿನ ಆಯ್ಕೆಯಂತಿದೆ. ನೀವು ಡೇಟಾ ಹಂಚಿಕೊಳ್ಳುವುದಿಲ್ಲ ಎಂದು ಲಿಖಿತವಾಗಿ ಮುಚ್ಚಳಿಕೆ ನೀಡಿ, ಇಲ್ಲದಿದ್ದರೆ ನಿಮ್ಮ ಅರ್ಜಿಯನ್ನು ನಾವು ವಜಾಗೊಳಿಸುತ್ತೇವೆ,” ಎಂದು ಖಡಕ್ ಆಗಿ ಹೇಳಿತು.
• ಖಾಸಗಿ ಚಾಟ್ ಮೇಲೆ ಕಣ್ಗಾವಲು: ಬಳಕೆದಾರರು ವೈದ್ಯರೊಂದಿಗೆ ನಡೆಸಿದ ಖಾಸಗಿ ಸಂಭಾಷಣೆಯ ಬೆನ್ನಲ್ಲೇ ಅವರಿಗೆ ಔಷಧಗಳ ಜಾಹೀರಾತುಗಳು ಬರುವ ಉದಾಹರಣೆಯನ್ನು ಪೀಠವು ನೀಡಿತು. ಚಾಟ್ ಟ್ರೆಂಡ್ಗಳ ಆಧಾರದ ಮೇಲೆ ವಾಣಿಜ್ಯ ಲಾಭಕ್ಕಾಗಿ ಡೇಟಾ ಬಳಸುವುದು ಬಳಕೆದಾರರ ಹಕ್ಕಿನ ಉಲ್ಲಂಘನೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
• ಅಂತರಾಷ್ಟ್ರೀಯ ನಿಯಮಗಳ ವಾದ: ವಾಟ್ಸಾಪ್ ಪರ ವಕೀಲ ಮುಕುಲ್ ರೋಹಟಗಿ ಅವರು ನಮ್ಮ ನೀತಿಗಳು ಅಂತರಾಷ್ಟ್ರೀಯ ಮಟ್ಟಕ್ಕೆ ಅನುಗುಣವಾಗಿವೆ ಎಂದು ವಾದಿಸಿದರೆ, ಮೆಟಾ ಸಂಸ್ಥೆಯು ಡೇಟಾ ಹಂಚಿಕೆ ಕೇವಲ ಮಾತೃ ಸಂಸ್ಥೆಗೆ ಸೀಮಿತ ಎಂದಿತು. ಆದರೆ, ಈ ವಾದವನ್ನು ಕೋರ್ಟ್ ಒಪ್ಪಲಿಲ್ಲ.
ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ
ಪ್ರಕರಣದ ಸಂಪೂರ್ಣ ವಿಚಾರಣೆ ಮುಗಿಯುವವರೆಗೆ ಬಳಕೆದಾರರ ಯಾವುದೇ ಮಾಹಿತಿಯನ್ನು ಮೆಟಾ ಸಂಸ್ಥೆಯೊಂದಿಗೆ ಹಂಚಿಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ವಾಟ್ಸಾಪ್ಗೆ ಮಧ್ಯಂತರ ಆದೇಶ ನೀಡಿದೆ.
