ಅದೊಂದು ದಿನ ತಾತ ಮುಂಜಾನೆಯ ವಾಯು ವಿಹಾರವನ್ನು ಮುಗಿಸಿ ಮನೆಗೆ ತೆರಳಿ ಕಾಫಿ ಕುಡಿಯುತ್ತ ಕುಳಿತಿದ್ದರು. ಆಗ ತಾನೇ ಎದ್ದು ಬಂದ ಮೊಮ್ಮಗ ರೋಹಿತು ಸರಿಯಾಗಿ ಕಣ್ಣು ಬಿಡದೆ ತಾತನ ಮುಂದೆ ಕುಳಿತು, “ಅಮ್ಮ ನನಗೂ ಕಾಫಿ ಕೊಡು” ಎಂದೂ ಕೂಗಿ ಹೇಳಿದ. ಅಡಿಗೆ ಮನೆಯಲ್ಲಿದ್ದ ಅಮ್ಮ ಕಾಫಿ ಕೊಟ್ಟು ಮರಳಿ, ಅಡುಗೆ ಮನೆಗೆ ಹೋದಳು.
ಕೈಯಲ್ಲಿದ್ದ ಮೋಬೈಲ್ ನಲ್ಲಿ ಏನೋ ನೋಡುತ್ತ ಪ್ರಪಂಚದ ಅರಿವಿಲ್ಲದೆ ಕುಳಿತ ಮೊಮ್ಮಗ, ಅಮ್ಮ ಕೊಟ್ಟ ಕಾಫಿಯನ್ನು ಕುಡಿದು ಪಕ್ಕದಲ್ಲಿ ಲೋಟವನ್ನು ಇಟ್ಟು whatsup, facebook,ನಲ್ಲೋ ಮುಳುಗಿದವನಂತ ಕಂಡರೂ ಏನ್ನನ್ನೂ ಕೇಳದೆ ಅಲ್ಲೇ ಕೂತೂ ಗಮನಿಸತ್ತಿದ್ದ ತಾತ ಅಲ್ಲಿಂದ ತನ್ನ ರೂಂನ ಕಡೆ ಹೊರಟುಬಿಡುತ್ತಾನೆ .
ಕೆಲವು ಸಮಯದ ನಂತರ ತಿಂಡಿ ತಿನ್ನಲು ಬಂದ ತಾತ ಮತೋಮ್ಮೆ ಮೊಮ್ಮಗ ತಿಂಡಿ ತಿನ್ನುತ್ತ ಮೋಬೈಲ್ ನಲ್ಲಿ ಮುಳುಗಿರುವುದನ್ನು ನೋಡಿ, “ಹೇ ರೋಹಿತ್ , ಅದೇನೋ ತಿನ್ನೋ ಹೋತ್ತಿನಲ್ಲಿ ಮೋಬೈಲ್ ನೋಡೋದು”.
ತಾತ, “ whatsup ನಲ್ಲಿ Staus check ಮಾಡುತ್ತ ಇದ್ದೆ”.
“ಅದಕ್ಕೆ ಇದೇನ ಸಮಯ” ? ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ.
“ಇರೋಕು ಸಾಧ್ಯನೂ ಇಲ್ಲ. ಬಿಡು ತಾತ” ಎಂದು ರೋಹಿತು ನಕ್ಕಿ ಸುಮ್ಮನಾದ.
ರೋಹಿತ್ ಹೀಗ ತಾನೇ S.S.L.C ಯಲ್ಲಿ ಓದುತ್ತಿದ್ದ ಹುಡುಗ .ತಾತನಿಗೇ ಚಿಕ್ಕನಿಂದಲು ಅವನ ಕಂಡರೆ ಇನ್ನಿಲ್ಲದ ಮೋಹ ಯಾವಾಗಲೂ ನನ್ನ ವಾರಸುದಾರ ಎಂದೂ ಎಲ್ಲಾರ ಮುಂದೆ ಕರೆಯುತ್ತಿದ್ದರೂ. ಅದರೆ ಬೆಳೆಯುತ್ತ ಬೆಳೆಯುತ್ತ ತಾತನ ಸಂಬಂಧದಿಂದ ಸಡಿಲಗೊಂಡು ಬಹು ದೂರ ಹೋಗಿದ್ದ. ಏಷ್ಟರಮಟ್ಟಿಗೆ ಎಂದರೆ ತಾತ ಅವನನ್ನ ನೋಡುವುದೆ ವಾರದಲ್ಲಿ ಎರಡು ಬಾರಿ ಅಥವಾ ಮೂರು ಬಾರಿ.
ರೋಹಿತ್ ಬೆಳಗ್ಗೆ ಕಾಫಿ ಕುಡಿದೆಯಲ್ಲ ಹೇಗಿತ್ತು ಎಂದೂ ಕೇಳಲು ಕಾಫಿಯ ಹಾಗೇ ಇತ್ತು. ಹೀಗ ದೊಸೆ ತಿನ್ನುತ್ತ ಇರುವೇ ಇದು ಹೇಗಿದೆ. ಚನ್ನಾಗಿದೆ as usual ಎಂದೂ ಹೇಳಿದ.
ಇಂದಿನ ಜನಾಂಗದ ಮಕ್ಕಳುಗಳಿಗೆ ಯಾವುದನ್ನು ಹೇಗೆ ರುಚಿಸಬೇಕು,ಆನಂದಿಸಬೇಕು ಎಂಬ ಪದ್ದತಿಯೇ ಇಲ್ಲ.ಏಕೆಂದರೆ ತಿನ್ನುವಾಗ ಏನೋ ಕೆಲಸ ಮಾಡುವುದು,ಕೆಲಸ ಮಾಡುವಾಗ ತನ್ನನ್ನ ಮರೆತು ಬೇರೆ ಯಾವೂದೋ ಲೋಕದಲ್ಲಿ ಮುಳುಗುವುದು ಸಂಬಂಧಗಳ ಅರಿವು,ಸಮಯದ ಅರಿವು ಇಲ್ಲದೇ ಹೊಸದನ್ನು ಕಲಿಯುವ ಗೋಜೀಗೇ ಹೋಗುವುದಿಲ್ಲ ಎಲ್ಲಾವು ಕೃತಕ ಜೀವನ. ಇನ್ನೂ ಸ್ವಲ್ಪ ವರ್ಷಗಳು ಕಳೆದರೆ ಮೋಬೈಲ್ ನಲ್ಲೇ ಮಕ್ಕಳಾದರೂ ಅಶ್ವರ್ಯವಿಲ್ಲ.
ಅಯ್ಯೋ ತಾತ ಇಂದಿನ ಕಾಲದಲ್ಲಿ ಯಾರೂ ಸಂಬಂಧಗಳಿಗೇ ಭಾವನೆಗಳಿಗೇ ಬೆಲೆಕೊಡುತ್ತಾರೆ ಅದನ್ನ ಮಾಡುತ್ತ ಕುಳಿತರೆ It’s a waste of time ಎಂದೂ ಹೇಳಲು.
ನೋಡು ನನಗೆ ಹೀಗ 70 ವರ್ಷ ಅದರೂ ಕೂಡ ನಿನ್ನನ್ನು ನೋಡಿದಾಗ ನನ್ನ ಬಾಲ್ಯ ನೆನಪಿಗೆ ಬರುತ್ತೆ. ಹಿಂದೆ ನಾವು ಚಿಕ್ಕವರಾಗಿದ್ದಾಗ ಆಟಗಳಲ್ಲಿ ನಮ್ಮನ್ನ ನಾವು ತೋಡಗಿಸಿಕೋಳ್ಳುತ್ತದ್ದೆವು ಹೆಚ್ಚೇಚ್ಚು
ಓದುತ್ತಿದ್ದೆವು .ಸ್ನೇಹಿತರೊಡನೆ ,ಪರಿಸರದ ಜೊತೆ ಬೆರೆಯುತ್ತಿದ್ದೆವು. ಇಂದೂ ನಿಮ್ಮನ್ನ ನೋಡಿದರೆ ಒಂದು ಮೊಬೈಲ್ ನಲ್ಲಿ ಇಲ್ಲವೇ ಟಿ.ವಿ. Computer ಮುಂದೆ ಕುಳಿತು ಸಮಯವನ್ನು ಹಾಳು ಮಾಡುವುದು.
ಕೆಲವು ವರ್ಷಗಳ ನಂತರ ಕೆಲಸಕ್ಕೆ ಸೇರಿ ಮಾಲ್ ಗಳ ಓಡಾಟ ಮದುವೆ ಮಕ್ಕಳು ಇಷ್ಟೇ ಅಲ್ಲವೇ. ಸ್ವಲ್ಪ ಭವಿಷ್ಯದ ಕಡೆ ವಾಸ್ತವವನ್ನು ಅರಿತುಕೋಳ್ಳುವುದು ನಿಮ್ಮ ಹೊಣೆ.
ಸ್ವರ್ಶಸದೆ ಸುಖಪಡುವ ಜೀವನ ನಿಮ್ಮದು .ವಸ್ತುವಿನಂತೆ ಬದುಕಿ ಸಾಯುತ್ತಿದ್ದಿರಿ. ಭಾವನೆಗಳಿಗೆ ಬೆಲೆ ಕೊಡುವುದನ್ನ ತಿಳಿದುಕೋಳ್ಳಬೇಕು.
ತಾತನನ್ನ ನೋಡಿ ಧೀರ್ಘವಾಗಿ ಅಲೋಚಿಸುತ್ತ ತನ್ನ ರೂಂ ನೆಡೆಗೆ ನೆಡೆದು ಬೀಡುತ್ತಾನೆ. ಮನಸ್ಸಿನಲ್ಲಿ ಹುಟ್ಟಿಕೊಂಡ ಪ್ರಶ್ನಗಳಿಗೆ ಉತ್ತರ ಹುಡುಕುವ ಅಲೋಚನೆಗೆ ಬಿದ್ದ.
ಸಂಜೆಯಾಗುತ್ತಲೇ ಅಪ್ಪನ ಹತ್ತಿರ ತಾತನ ಸಂಪೂರ್ಣವಾಗಿ ತಾತ ಬದುಕಿದ ಜೀವನ ಎಲ್ಲಾವನ್ನು ತಿಳಿದುಕಳ್ಳಬೇಕು ಎಂಬ ಅತುರದಿಂದ ಅಪ್ಪನ ಬರುವಿಕೆ ಕಾದು ಕುಳಿತಿದ್ದ.
ಅಪ್ಪ ಬಂದ ಕ್ಷಣ ಅವರ ರೂಂಗೆ ಹೋದ ರೋಹಿತ್ ಅಪ್ಪ ಎಂದೂ ಕರೆಯಲು.ಏನಪ್ಪ ಇವತ್ತು ಮೋಬೈಲ್ ನಲ್ಲಿ internet package ಮುಗಿತ ಮೋಬೈಲ್ ಏನಾದರೂ?
ಅಪ್ಪ ತಾತನ ಬಗ್ಗೆ ತಿಳಿಯಬೇಕು ಸ್ವಲ್ಲ ಹೇಳಿ.
ನಿನ್ನ ತಾತನ ಬಗ್ಗೆ ಹೇಳುವುದಾದರೆ ತುಂಬ ಒಳ್ಳೆಯ ವ್ಯಕ್ತಿತ್ವವನ್ನು ,ಜೀವನವನ್ನು ತುಂಬ ಸರಳ ರೀತಿಯಲ್ಲಿ ಬದುಕಿದವರು. ಸಮಜಕ್ಕೆ ಸಂಸೃತಿಗೆ ತುಂಬ ಬೆಲೆಕೊಟ್ಟು ಮನೆಯಲ್ಲಿ ಎಲ್ಲಾ ರೀತಿಯ ಶ್ರೀಮಂತಿಕೆ ಇದ್ದರು ಇವರು ಮಾತ್ರ ತಮ್ಮ ಜೀವನವನ್ನು ತಾವೇ ರೂಪಿಕೊಂಡು ನಮ್ಮನ್ನ ಸಾಕಿ ಒಂದು ಒಳ್ಳೆಯ ಮಟ್ಟಕ್ಕೆ ತಂದು ನಿಲ್ಲಿಸಿದ್ದರೆ. ನನ್ನ ಅಪ್ಪ ನಮ್ಮ ಜೊತೆ ಉತ್ತಮವಾದ ಸಮಯವನ್ನು ಕಳೆದು ನಮಗೆ ಎಲ್ಲಾವನ್ನು ನೀಡಿದ್ದಾರೆ. ಅದರೆ ನನ್ನ ಅಪ್ಪ ನನ್ನ ಜೊತೆ ಕಳೆದಷ್ಟು ಸಮಯ ನಿನ್ನ ಜೊತೆ ನನಗೆ ಕಳೆಯಲು ಆಗುತ್ತಿಲ್ಲ ನೋಡು ಹೇಗೇ ಜೀವನದ ಹಿಂದೆ ಬಿದ್ದು ಕೆಲಸದ ಒತ್ತಡದಲ್ಲಿ ಜೀವನವನ್ನು ರೂಪಿಸಿಕೊಳ್ಳುವುದಲ್ಲೇ ಕಳೆದು ಹೋಗುತಿದೆ. ಚಿಕ್ಕ ಚಿಕ್ಕ ಸಂತೋಷಗಳಿಂದ ವಂಚಿತರಾಗುತ್ತಿದ್ದೆವೇ.
ಇರಲಿಬಿಡು ಪರೀಕ್ಷ ಹತ್ತಿರ ಸಮೀಪಿಸುತ್ತಿದೆ ಚನ್ನಾಗಿ ಓದಿಕೋ ಆಯ್ತಾ. ಸರಿ ಅಪ್ಪ ಎಂದೂ ಹೊರಡಲು ಹೇ ನಿನ್ನ ತಾತನಿಗೇ ನೀ ಎಂದರೆ ತುಂಬ ಇಷ್ಟ ಕಾಣೋ ಎಷ್ಟು ಅಂದರೆ ನಾ ಹುಟ್ಟಿದಾಗಲೂ ಅಷ್ಟು ಸಂತೋಷಪಟ್ಟಿರಲ್ಲಿಲ್ಲವಂತೆ ಅಷ್ಷು ಸಂತೋಷಪಟ್ಟಿದ್ದರು ನಿನ್ನ ತಾತ ನೀ ಹುಟ್ಟಿದಾಗ.
ಸರಿ ಅಪ್ಪ ಎಂದೂ ಹೋರಟ ರೋಹಿತ್ ರೂಂಗೆ ಹೋಗಿ ಹಾಗೇ ಯೋಚಿಸತ್ತ ನಿದ್ದೆಗೆ ಜಾರಿಬಿಡುತ್ತಾನೆ.
ಮುಂಜಾನೆಯ ಸಮಯ ಯಾರೋ ತನ್ನನ್ನ ಕರೆಯುವ ರೀತಿ ಬಸವಾಗಿ ಎಚ್ಚರಗೊಂಡ ಅವನು ಕೆಳಗೆ ಬಂದು ನೋಡಿದರೆ ಸೋಪದ ಹತ್ತಿರ ಅಪ್ಪ ಅಮ್ಮ ನಿಂತು ತಾತನ ಭುಜದ ಮೇಲೆ ಕೈಹಾಕಿ ಅಲಗಾಡಿಸತ್ತಿದ್ದಾರೆ. ವಾಯುವಿಹಾರಕ್ಕೆ ಹೊರಟ ತಾತ ಅಲ್ಲೇ ಸೋಪದಲ್ಲೇ ಸತ್ತು ಹೊಗಿದ್ದಾರೆ.
ತಾತ ಹೇಳಿದ ಪ್ರತಿಯೋಂದು ಮಾತು ಹೇಳಿದ ರೀತಿಯಲ್ಲೇ ಬದುಕಬೇಕು ಆರ್ದಶವಾಗಿ ಸಮಾಜದಲ್ಲಿ ಬದುಕಿ ಸಾಧಿಸಿಬೇಕು ಎಂದೂ ನಿರ್ಧರಿಸಿ ಕೆಲವು ವರ್ಷಗಳ ನಂತರ ತನ್ನ ತಾತನ ಹೆಸರಿನಲ್ಲಿ ಒಂದು ವೃದ್ದಾಶ್ರಮವನ್ನು ಸ್ಥಾಪಿಸಿ ಅದಕ್ಕೇ “ಸಂಬಂಧಗಳಿ ಬೆಲೆ ಕೊಟ್ಟು ಭಾವನೆಗಳನ್ನು ಲಾಲನೆ ಪಾಲನೆ ಮಾಡಿ ಮಗುವಿನಂತೆ ಬದುಕುತ್ತಿರುವ ಜೀವಗಳು ಇಲ್ಲಿವೇ “ಎಂಬ ಶಿರ್ಷಿಕೆಯನ್ನು ಇಟ್ಟಿ ತನ್ನ ಸಮಯವನ್ನು ಅವರ ಜೊತೆಯಲ್ಲೇ ಕಳೆಯುತ್ತ ತಾತ ಹೇಳಿದ ಮಾತು ನೆನಪಿಗೇ ಬಂತು.
“ಭಾವನೆಗಳಿಗೆ ಸಂಬಂಧಗಳಿಗೇ ಬೆಲೆ ಕಟ್ಟಲು ಸಾಧ್ಯವೇ ಅದನ್ನ ಅನುಭವಿಸಬೇಕು” ಎಂಬ ವಾಕ್ಯದ ನೆನಪಿನಲ್ಲೇ ಜೀವನದ ಸತ್ಯವನ್ನು ಕಂಡುಕೊಂಡು ತಾತನಿಗೆ ಮನಸ್ಸಿನಲ್ಲೇ ಧನ್ಯವಾದಗಳನ್ನ ಹೇಳಿದನು. ..
