ಚನ್ನರಾಯಪಟ್ಟಣ:ತಾಲೂಕು ಕಚೇರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಿತ ರಕ್ಷಣಾ ಸಮಿತಿ ಸಭೆಯು ಶಾಸಕರಾದ ಸಿ ಎನ್ ಬಾಲಕೃಷ್ಣ ಅವರ ನೇತೃತ್ವದಲ್ಲಿ ನಡೆಯಿತು.
ಈ ಸಭೆಯಲ್ಲಿ ದಲಿತ ಮುಖಂಡರ ನಡುವೆ ಪರಸ್ಪರ ಮಾತಿನ ಚಕಮಕಿ ಜರುಗಿತು. ಪುರಸಭೆ ಮುಖ್ಯ ಅಧಿಕಾರಿಗಳ ಪಕ್ಷಪಾತ ನಡೆಯಿಂದ ಅಸಮಾಧಾನ ಗೊಂಡ ದಲಿತ ಮುಖಂಡರಿಂದ ಪುರಸಭಾ ಮುಖ್ಯ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದ ಪ್ರಸಂಗವು ನಡೆಯಿತು.

ಅಂಬೇಡ್ಕರ್ ಅವರ ಭಾವಚಿತ್ರ ಇರುವ ಬ್ಯಾನರ್ ಮತ್ತು ನೀಲಿ ಬಾವುಟಗಳು ಹಾಗೂ ಬಂಟಿಂಗ್ಸ್ ಗಳನ್ನು ಏಕಾಏಕಿ ತೆರವು ಮಾಡಿರುವ ಪುರಸಭೆಯ ಮುಖ್ಯ ಅಧಿಕಾರಿ ಯತೀಶ್ ಅವರು ಈ ಸಭೆಯಲ್ಲಿ ಕ್ಷಮೆ ಕೋರುವಂತೆ ದಲಿತ ಪರ ಸಂಘಟನೆ ಮುಖಂಡರುಗಳು ಆಗ್ರಹಿಸಿದರು.

ಈ ಸಭೆಯಲ್ಲಿ ತಾಲೂಕು ದಂಡಾಧಿಕಾರಿ ಶಂಕರಪ್ಪ, ತಾಲೂಕು ಪಂಚಾಯತಿ ಕಾರ್ಯನಿರ್ವಣ ಅಧಿಕಾರಿ ಹರೀಶ್, ಡಿವೈಎಸ್ಪಿ ಕುಮಾರ್, ಬಿ ಈ ಓ ದೀಪ, ಏಡಿ ಆರ್ ಎಲ್ ಲಲ್ಲೂ ಪ್ರಸಾದ್, ಸಮಾಜ ಕಲ್ಯಾಣ ಅಧಿಕಾರಿ ತ್ಯಾಗರಾಜ್, ಪುರಸಭಾ ಮುಖ್ಯ ಅಧಿಕಾರಿ ಯತೀಶ್ ಹಾಗೂ ವಿವಿಧ ಸಂಘಟನೆಯ ದಲಿತ ಮುಖಂಡರು ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ.ಕೆ
