ಕೆ.ಆರ್.ಪೇಟೆ.ತಾಲೂಕಿನ ಬೂಕನಕೆರೆ ಹೋಬಳಿಯ ಶ್ರದ್ಧಾಭಕ್ತಿ ಕೇಂದ್ರವಾಗಿರುವ ಕಾಪನಹಳ್ಳಿ ಶ್ರೀ ಗವಿಮಠ ಅಖಿಲ ಚಕ್ರವರ್ತಿ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರರ ತೆಪ್ಪೋತ್ಸವ ಶುಕ್ರವಾರ ರಾತ್ರಿ ದೇವಾಲಯ ಮುಂಭಾಗದ ಹಳ್ಳದಲ್ಲಿ ವೈಭವದಿಂದ ಅದ್ದೂರಿ ಜನ ಸಮೂಹದಲ್ಲಿ ನೆರವೇರಿತು.
ತೆಪ್ಪೋತ್ಸವದ ಪ್ರಯುಕ್ತ ಕಾಪನಹಳ್ಳಿ ಗವಿಮಠದ ಪೀಠಾಧ್ಯಕ್ಷ ಶ್ರೀ ಚಿನ್ನವೀರ ಮಹಾಸ್ವಾಮಿಗಳ ನೇತೃತ್ವದಲ್ಲಿ ಮುಂಜಾನೆಯಿಂದ ವಿವಿಧ ಬಗೆಯ ಅಭಿಷೇಕ,ಕಣ್ಮನ ಸೆಳೆಯುವ ಫಲಪುಷ್ಪಗಳಿಂದ ಅಲಂಕರಿಸಲಾಗಿತ್ತು ದೊಡ್ಡ ಸಂಖ್ಯೆಯ ಭಕ್ತರು ತೆಪ್ಪೋತ್ಸವದಲ್ಲಿ ಪಾಲ್ಗೊಂಡು ಭಗವಂತ ಕಣ್ಣುಂಬಿಕೊಂಡು ಪುನೀತರಾದರು.

ತೆಪ್ಪೋತ್ಸವ ಸಂಪೂರ್ಣ ವ್ಯವಸ್ಥೆಯನ್ನು ಬಳಕೆರೆ ಗ್ರಾಮಸ್ಥರು ಕೈಗೊಂಡಿದ್ದರು ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳ ಉತ್ಸವ ಮೂರ್ತಿಯನ್ನು ತೆಪ್ಪದಲ್ಲಿ ಇರಿಸಿ, ಹಳ್ಳದಲ್ಲಿ ತೆಪ್ಪೋತ್ಸವ ನೆರವೇರಿಸಲಾಯಿತು, ತೆಪ್ಪೋತ್ಸವದ ಪೂಜಾ ಕಾರ್ಯಕ್ರಮಗಳನ್ನು ದೇವಾಲಯದ ಪ್ರಧಾನ ಅರ್ಚಕ ಹೇಮಂತ್ ಕುಮಾರ್ ನೆರವೇರಿಸಿದರು.
ತೆಪ್ಪೋತ್ಸವ ಆರಂಭವಾಗುತ್ತಿದ್ದಂತೆ ಭಕ್ತರು ಶ್ರದ್ದಾ ಭಕ್ತಿಯಿಂದ ಭಕ್ತ ಸಮೂಹ ಪ್ರಾರ್ಥನೆ ಸಲ್ಲಿಸಿ ಜಯಘೋಷಣೆಗಳನ್ನು ಕೂಗಿದರು.ತೆಪ್ಪೋತ್ಸವದ ಸಂದರ್ಭ ಬಣ್ಣ ಬಣ್ಣದ ಸಿಡಿಮದ್ದುಗಳನ್ನು ಭಕ್ತ ಸಮೂಹ ಕಣ್ಣುಂಬಿಕೊಂಡರು. ಪ್ರತಿ ವರ್ಷಕ್ಕಿಂತ ಈ ವರ್ಷ ಭಕ್ತರ ಸಂಖ್ಯೆ ದ್ವಿಗುಣಗೊಂಡು ತೆಪ್ಪೋತ್ಸವಕ್ಕೆ ಮೆರಗು ತುಂಬಿದರು

ಈ ಸಂದರ್ಭದಲ್ಲಿ ಸಮಾಜ ಸೇವಕ ಆರ್,ಟಿ,ಓ ಮಲ್ಲಿಕಾರ್ಜುನ್,ವಿಠಲಪುರ ವಿ.ಡಿ ಮೋಹನ್,ಬಳ್ಳೆಕೆರೆ ಮುಖಂಡರಾದ ಕುಮಾರ್, ಯೋಗಣ್ಣ,ವಿಜಿ ಕುಮಾರ್,ರವಿ, ಸಣ್ಣಪ್ಪ,ಬಳ್ಳೆಕೆರೆ ಸುರೇಶ,ಪ್ರದೀಪ್ ಕಟ್ಟಹಳ್ಳಿ ಪ್ರಕಾಶ್,ನಾಟನಹಳ್ಳಿ ಮುರುಳಿ, ನಾಗೇಶ್, ಶೈಲೇಂದ್ರ , ಪಟೇಲ್ ಶಂಕರ್,ಯುವ ಮುಖಂಡ ಇಡಲಿ ಪ್ರಶಾಂತ್ ಸಮಾಜ ಸೇವಕ ಆರ್ಟಿಓ ಮಲ್ಲಿಕಾರ್ಜುನ ಆಪ್ತ ಸಹಾಯಕ ಗಂಜಿಗೆರೆ ಮಹೇಶ್, ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
