ಕೊರಟಗೆರೆ:- ತಾಲೂಕಿನ ಅರಸಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2013-14 ನೇ ಸಾಲಿನ 10 ನೇ ತರಗತಿಯ ಹಳೆಯ ವಿದ್ಯಾರ್ಥಿಗಳಿಂದ ‘ಗುರುವಂದನಾ ಮತ್ತು ಸ್ನೇಹ ಸಮ್ಮಿಲನ’ ಕಾರ್ಯಕ್ರಮ ಆಯೋಜಿಸಲಾಗಿತ್ತು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ, ಶಿಕ್ಷಕರಿಗೆ ಗೌರವ ಸಲ್ಲಿಸುವ ಮೂಲಕ ವಿದ್ಯಾರ್ಥಿಗಳು ಭಾವುಕ ಕ್ಷಣಗಳನ್ನು ಹಂಚಿಕೊಂಡರು.
ನಿವೃತ್ತ ಮುಖ್ಯ ಶಿಕ್ಷಕರಾದ ಖಲೀಲ್ ಅಹ್ಮದ್ ಸರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ 12 ವರ್ಷದ ಹಿಂದೆ ಕಲಿತ ವಿದ್ಯಾರ್ಥಿಗಳು ಇಂದು ಒಂದಡೆ ಸೇರಿ,ಅಭೂತಪೂರ್ವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ಪಡೆದು, ಉನ್ನತ ಸ್ಥಾನಕ್ಕೆರಬೇಕು.ವಿದ್ಯೆಯು ಒಂದು ಶಕ್ತಿಯಾಗಿದ್ದು, ಅದಕ್ಕೆ ಸರಿಸಮಾನವಾದ ಸ್ಥಾನ ಮತ್ತೊಂದಿಲ್ಲ ಕಲಿಸಿದ ಗುರುಗಳನ್ನಾಗಲಿ ಹಿರಿಯರನ್ನಾಗಲಿ ಪ್ರೀತಿಯಿಂದ ಗೌರವಿಸಿದರೆ ಮಾತ್ರ ಬೆಲೆ ಬರುತ್ತದೆ ಎಂದು ಹೇಳಿದರು.

ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಅನುಸೂಯದೇವಿ ಮೇಡಂ ರವರು ಮಾತನಾಡಿ ವಿದ್ಯಾರ್ಥಿಗಳು ಕೇವಲ ವಿದ್ಯಾರ್ಥಿ ಜೀವನಕ್ಕಷ್ಟೆ ಸೀಮಿತರಲ್ಲ. ಶಿಕ್ಷಕರಿಗೆ ಎಂದೆಂದಿಗೂ ಮುದ್ದು ಮಕ್ಕಳೇ, ನಾವು ವೃತ್ತಿ ಬದುಕಿನಿಂದ ನಿವೃತ್ತಿ ಹೊಂದಿದ್ದರೂ ವಿದ್ಯಾರ್ಥಿಗಳು ನಮ್ಮನ್ನು ಶಿಕ್ಷಕರಂದೇ ಸಂಭೋದಿಸುತ್ತಾರೆ. ಇದಕ್ಕಿಂತ ಮಿಗಿಲು ನಮಗೆ ಮತ್ತೊಂದಿಲ್ಲ.ವಿದ್ಯಾರ್ಥಿಗಳು ನಮ್ಮನ್ನು ಕರೆದು ಗುರುವಂದನೆ ಸಲ್ಲಿಸಿ ಗೌರವಿಸಿದ್ದು ಅವಿಸ್ಮರಣೀಯ ಎಂದರು.

2013-14ನೇ ಸಾಲಿನ ಸಹ ಶಿಕ್ಷಕರುಗಳಾದ ವಿದ್ಯಾ ಮೇಡಂ,ಶಂಕರಮ್ಮ ಮೇಡಂ, ಜರೀನಾ ಮೇಡಂ, ಶಿವಸ್ವಾಮಿ ಸರ್, ಜಯಣ್ಣ ಸರ್ , ರವಿ ಸರ್, ಮತ್ತು ಪ್ರೌಢಶಾಲೆಯ ಹಾಲಿ ಸಹ ಶಿಕ್ಷಕರಾದ ಸರೋಜಾ ಮೇಡಂ, ,ಮಾರುತಿ ಸರ್, ಗೋಪಾಲಕೃಷ ಸರ್,ಆನಂದ್ ಕುಮಾರ್ ಸರ್ ರವರಿಗೆ 2013-14 ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಗಣ್ಯರಾದ ರವಿ ಕೀರ್ತಿ, ಕೆಂಚಪ್ಪ ಹಾಗೂ ಹಳೆಯ ವಿದ್ಯಾರ್ಥಿಗಳಾದ ಶಿವರಾಜ್, ವಿನಯ್, ಸುರೇಶ್, ಕಿರಣ್, ಲಕ್ಷ್ಮಿಪತಿ, ರವಿ, ಅನಿಲ್,ಪವನ್, ವಸಂತ್, ಕಲ್ಪನಾ, ಅನಿತಾ, ಭವ್ಯ, ಚೈತ್ರ, ಕಮಲ, ಸಾದಿಹಾಬಾನು, ಪುಷ್ಪಲತಾ ಸೇರಿದಂತೆ ಇತರರು ಇದ್ದರು.
✍️ ವರದಿ: ಶ್ರೀನಿವಾಸ್ ಕೊರಟಗೆರೆ
