ಬೆಂಗಳೂರು: ಇಂಟರ್ನ್ಯಾಷನಲ್ ಫೆಡರೇಷನ್ ಆಫ್ ಇನ್ವೆಂಟರ್ಸ್ ಅಸೋಸಿಯೇಷನ್ಸ್ (ಐಎಫ್ಐಎ) ಭಾರತ್ ವಿಭಾಗದ ಸಲಹಾ ಮಂಡಳಿಯ ಸದಸ್ಯರಾಗಿ ಉದ್ಯಮಿ ಸಂಜಯ್ ಕೊಪ್ಪಿಕರ್ ಅವರನ್ನು ನೇಮಕ ಮಾಡಲಾಗಿದೆ.
ಈ ನೇಮಕಾತಿಯು ದೇಶದ ಗ್ರಾಮೀಣ ಭಾಗದ ನವೋದ್ಯಮಿಗಳು, ಸಂಶೋಧಕರು, ನೀತಿನಿರೂಪಕರು ಹಾಗೂ ಜಾಗತಿಕ ನವೋದ್ಯಮ ವೇದಿಕೆಗಳ ನಡುವಿನ ಸಹಕಾರವನ್ನು ಇನ್ನಷ್ಟು ಬಲಪಡಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
“ಐಎಫ್ಐಎ ಭಾರತ್ ಸಂಘಟನೆಯೊಂದಿಗೆ ಕೈಜೋಡಿಸಿ, ನವೋದ್ಯಮಿಗಳಿಗೆ ಜಾಗತಿಕ ಅವಕಾಶಗಳನ್ನು ಸೃಷ್ಟಿಸುವುದು ಹಾಗೂ ಅವರ ಸಬಲೀಕರಣಕ್ಕೆ ಪೂರಕವಾದ ವಾತಾವರಣ ನಿರ್ಮಿಸಲು ಉತ್ಸುಕನಾಗಿದ್ದೇನೆ,” ಎಂದು ಸಂಜಯ್ ಕೊಪ್ಪಿಕರ್ ತಿಳಿಸಿದ್ದಾರೆ.
ಸಂಜಯ್ ಕೊಪ್ಪಿಕರ್ ಅವರು ಜಾಗತಿಕ ಏಜೆಂಟಿಕ್ ಆಟೊಮೇಷನ್ ಸಂಸ್ಥೆ ಇವೊಲ್ಯೂಟ್ಐಕ್ಯೂ ಹಾಗೂ ತಂತ್ರಜ್ಞಾನ ಸಲಹಾ ಸಂಸ್ಥೆ ಕ್ವಾಡ್ವೇವ್ನ ಸಹ-ಸ್ಥಾಪಕರಾಗಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿ ‘ಮಿಲಿಯನ್ ಮ್ಯುಟಿನೀಸ್’ ಎಂಬ ಸ್ವಯಂಸೇವಾ ಸಂಸ್ಥೆಯನ್ನು ನಡೆಸುತ್ತಿದ್ದು, ಇದರ ಮೂಲಕ ಗ್ರಾಮೀಣ ಉದ್ಯಮಿಗಳು ಹಾಗೂ ನವೋದ್ಯಮಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ.