ಕೊರಟಗೆರೆ ;– ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅತ್ಯುತ್ತಮವಾಗಿ ನಿರ್ವಹಣೆಯಲ್ಲಿದೆ , ವಿರೋಧ ಪಕ್ಷದವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ,
ಬೇರೆ ರಾಜ್ಯಕ್ಕೆ ಹೊಲಿಸಿದರೆ ನಮ್ಮ ರಾಜ್ಯ ಶಾಂತಿಯಾಗಿ ಇದೆ, ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ, ಗೃಹ ಇಲಾಖೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅಭಿಪ್ರಾಯಪಟ್ಟರು .
ಅವರು ಪಟ್ಟಣದ ಪೊಲೀಸ್ ಸಿಬ್ಬಂದಿಗಾಗಿ ಸುಮಾರು 11 ಕೋಟಿ ವೆಚ್ಚದಲ್ಲಿ 36 ವಸತಿ ಗೃಹ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡುತ್ತಾ
ವಿರೋಧ ಪಕ್ಷದವರಾದ ಬಿಜೆಪಿ, ಜನತಾದಳ ಇಲ್ಲಸಲ್ಲದ ಆರೋಪ ಮಾಡುತ್ತಿದೆ ರಾಜ್ಯದಲ್ಲಿ ಸಂಪೂರ್ಣ ಕಾನೂನು ವ್ಯವಸ್ಥೆ ಅದಕ್ಕೆಟ್ಟಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಯಾವುದೋ ಒಂದು ಸಣ್ಣ ಪುಟ್ಟ ಘಟನೆ ನಡೆದರೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡುತ್ತಾರೆ ಯಾವುದಾದರೂ ಒಂದು ನಿದರ್ಶನ ನೀಡಲಿ ರಾಜ್ಯದಲ್ಲಿ ನಮ್ಮ ಪೊಲೀಸ್ ಇಲಾಖೆ ಬಲಿಷ್ಠವಾಗಿ ಕೆಲಸ ಮಾಡುತ್ತಿದೆ, ಇತರೆ ರಾಜ್ಯಕ್ಕೆ ಹೊಲಿಸಿದರೆ ನಮ್ಮ ರಾಜ್ಯ ಶಾಂತವಾಗಿದೆ ಎಂದು ವಿರೋಧ ಪಕ್ಷದವರಿಗೆ ತಿರುಗೇಟು ನೀಡಿದರು.
ಗೃಹ ಇಲಾಖೆ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಪೊಲೀಸ್ ಅಧಿಕಾರಿಗಳು ನಮ್ಮ ಸೇವೆ ಮಾಡಲು ಮಳೆ, ಚಳಿ, ಎನ್ನದೇ ಮತ್ತೆ ಅವರ ಮನೆಯಲ್ಲಿ ಸಾವು ನೆಡೆದರೂ ಸಹ ನಮ್ಮ ಸೇವೆ ಮಾಡಲು ಬರುತ್ತಾರೆ. ಅವರಿಗೆ ಉತ್ತಮವಾದ ಸೂರು ಕಟ್ಟಿಕೊಡಬೇಕು ಎನ್ನವ ಉದ್ದೇಶದಿಂದ ನಮ್ಮ ಸರ್ಕಾರ ಸುಮಾರು 40 ಸಾವಿರ ಮನೆಗಳನ್ನ ಕಟ್ಟಿಕೊಟ್ಟಿದ್ದೇವೆ, ಈ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬ ಸಿಬ್ಬಂದಿಗಳ ಕುಟುಂಬದವರು ನೆಮ್ಮಧಿಯಿಂದ ಜೀವನ ನಡೆಸಬೇಕು ಎನ್ನವ ಉದ್ದೇಶದಿಂದ ಮನೆಗಳ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ನಾನು ಈ ಕ್ಷೇತ್ರದಿಂದ ಗೆದ್ದ ಮೇಲೆ 3 ಬಾರಿ ಗೃಹ ಸಚಿವನಾಗಿದ್ದೇನೆ, ಒಂದು ಬಾರಿ ಉಪ ಮುಖ್ಯಮಂತ್ರಿ ಆಗಿದ್ದೇನೆ. 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷನಾಗಿ ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಂತೆ ಮಾಡಿದ್ದೇನೆ. ಗೃಹ ಸಚಿವ ಆದಮೇಲೆ ಕೊರಟಗೆರೆಯಲ್ಲಿ 500 ಕೋಟಿ ವೆಚ್ಚದ 12 ನೇ ಪೊಲೀಸ್ ಬೇಟಾಲಿಯನ್ನಲ್ಲಿ 1 ಸಾವಿರ ಜನರಿಗೆ ತರಬೇತಿ ನೀಡುವ ಕೇಂದ್ರವನ್ನ ತಂದಿದ್ದೇನೆ. ಇದಕ್ಕೇಲ ಕಾರಣ ಈ ಕ್ಷೇತ್ರದ ಜನತೆ ನನಗೆ ಮತ ಹಾಕಿ ಜಯಶೀಲರನ್ನಾಗಿ ಮಾಡಿದ್ದಕ್ಕೆ ಈ ಕೆಲಸ ಮಾಡಲು ಸಾಧ್ಯ ಎಂದು ತಿಳಿಸಿದರು.

ನಾನು ಚುನಾವಣೆ ಸಂದರ್ಭದಲ್ಲಿ ನನ್ನ ಕ್ಷೇತ್ರದ ಜನತೆ ನಾವು ನಿಮಗೆ ಮತ ಹಾಕುತ್ತೇವೆ ನಮಗೆ ಶಾಶ್ವತ ನೀರಾವರಿ ಯೋಜನೆಯನ್ನ ಜಾರಿಗೆ ತರಬೇಕು ಎಂದು, ಅದಕ್ಕೆ ನಮ್ಮ ಸಿದ್ದರಾಮಯ್ಯ ಅವರ ಸರ್ಕಾರ ಸುಮಾರು 24 ಟಿಎಂಸಿ ನೀರನ್ನ ನಮ್ಮ ಭಾಗಕ್ಕೆ ತರಲು 24 ಸಾವಿರ ಕೋಟಿ ವೆಚ್ಚದಲ್ಲಿ ಏತ್ತಿನಹೊಳೆ ಯೋಜನೆ ಕಾಮಗಾರಿ ಪ್ರಾರಂಭ ಮಾಡಿದರು, ಆದರೆ ನಮ್ಮ ಭಾಗದಲ್ಲಿ 5 ಸಾವಿರ ಎಕರೆಯಲ್ಲಿ ಬಫರ್ ಡ್ಯಾಂ ನಿರ್ಮಾಣವಾಗಬೇಕಿತ್ತು, ಕೆಲವರ ವಿರೋಧದಿಂದ ಆ ಡ್ಯಾಂ ಬೇರೆಡೆ ಸ್ಥಳಾಂತರವಾಗಿ, ಆದರು ಸಹ ನಮ್ಮ ತಾಲೂಕಿನ ಸುಮಾರು 69 ಕೆರೆಗಳಿಗೆ ನೀರು ಹರಿಯಲಿದೆ, ಇದೆ ಜೂನ್ನಲ್ಲಿ ತುಮಕೂರಿಗೆ ನೀರನ್ನ ತರಲಾಗುವುದು ಎಂದು ನಮ್ಮ ಅಧಿಕಾರಿಗಳು ಹೇಳಿದ್ದಾರೆ ನೀರು ಹರಿಯಲಿದೆ ಎಂದು ಭರವಸೆ ನೀಡಿದರು.
ಇದೆ ಸಂದರ್ಭದಲ್ಲಿ ಡಿಜಿಪಿ ಜೆ.ಅರಣ್ಚಕ್ರವರ್ತಿ, ಕಾನೂನು ಸುವ್ಯವಸ್ಥೆಯ ಡಿಜಿಪಿ ಮುರಗನ್, ಪೊಲೀಸ್ ಮಹಾ ನಿರ್ದೇಶಕ ಲಾಬುರಾಮ್, 12ನೇ ಕೆಎಸ್ಆರ್ಪಿ ಕಮಾಂಡರ್ ಹಂಜಾ ಹುಸೇನ್, ಜಿಲ್ಲಾಧಿಕಾರಿ ಶಭುಕಲ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಆಶೋಕ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಪುರುಷೋತ್ತಮ್, ಗೋಪಾಲ್, ಡಿವೈಎಸ್ಪಿ ಮಂಜುನಾಥ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರಕೆರೆ ಶಂಕರ್, ಆಶ್ವಥ್ನಾರಾಯಣ್, ಸೇರಿದಂತೆ ಇತರರು ಇದ್ದರು.
–
✍️ ವರದಿ: ಶ್ರೀನಿವಾಸ್ ಕೊರಟಗೆರೆ
