ಹಾಸನ, ಫೆ. 11: ವತಿಯಿಂದ ಬುಧವಾರ ಸಂಜೆ ಹಾಸನದ KIADB ರಸ್ತೆಯಲ್ಲಿರುವ ಸನ್ ರೈಸ್ ಭವನದಲ್ಲಿ ವಿಶೇಷ ವಾರದ ಸಭೆ ಹಾಗೂ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ವಿಶ್ವ ಕ್ಯಾನ್ಸರ್ ಡೇ ಪ್ರಯುಕ್ತ ನಡೆದ ಈ ಕಾರ್ಯಕ್ರಮದಲ್ಲಿ ಹಾಸನ ನಗರದ ಹೆಸರಾಂತ ENT ತಜ್ಞ ಡಾ. ನಾಗೇಶ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕ್ಯಾನ್ಸರ್ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಜಾಗತಿಕ ಮಟ್ಟದಲ್ಲಿ ಕ್ಯಾನ್ಸರ್ ರೋಗದ ಹೆಚ್ಚುತ್ತಿರುವ ಪ್ರಮಾಣದ ಹಿನ್ನೆಲೆ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದ ಅವರು, ತಡೆಗಟ್ಟುವಿಕೆ, ಆರಂಭಿಕ ಪತ್ತೆ ಹಾಗೂ ಸಕಾಲಿಕ ಚಿಕಿತ್ಸೆಯ ಮಹತ್ವವನ್ನು ವಿವರಿಸಿದರು.

ಜೀವನಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆಗಳು, ನಿಯಮಿತ ಆರೋಗ್ಯ ತಪಾಸಣೆ ಮತ್ತು ಜನಜಾಗೃತಿಯ ಮೂಲಕ ಅನೇಕ ಕ್ಯಾನ್ಸರ್ಗಳನ್ನು ತಡೆಗಟ್ಟಬಹುದು ಎಂದು ಹೇಳಿದರು. ಆರಂಭಿಕ ಹಂತದಲ್ಲಿಯೇ ರೋಗ ಪತ್ತೆಯಾದರೆ ಬದುಕುಳಿಯುವಿಕೆ ಪ್ರಮಾಣ ಮತ್ತು ಜೀವನದ ಗುಣಮಟ್ಟ ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಕ್ಯಾನ್ಸರ್ ಕುರಿತು ಇರುವ ಪುರಾಣ, ಭಯ ಮತ್ತು ಕಳಂಕಗಳನ್ನು ದೂರ ಮಾಡುವಲ್ಲಿ ಜನಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಡಾ. ಶ್ವೇತಾ–ಮುರುಳಿ ದಂಪತಿಗಳ ಪುತ್ರ, 10 ವರ್ಷದ ತ್ರಿಭುವನ್ ಸಾಂಗತ್ಯಗೌಡ ಅವರು ಯೋಗಾಸನದ ಮೂಲಕ ಸ್ಥಾಪಿಸಿರುವ ಗಿನ್ನಿಸ್ ದಾಖಲೆಯನ್ನು ಗುರುತಿಸಿ ಅಭಿನಂದಿಸಲಾಯಿತು. ಅವರ ಪುತ್ರಿ ಕು. ಕನಸು ಅವರ ಕ್ರೀಡಾ ಮತ್ತು ನೃತ್ಯ ಕ್ಷೇತ್ರದ ಸಾಧನೆಗಳನ್ನೂ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಲಬ್ ಅಧ್ಯಕ್ಷ ರೋ. ವಜ್ರಕುಮಾರ್ ಎಚ್.ಡಿ., ಕಾರ್ಯದರ್ಶಿ ರೋ. ಕೆ.ಎಸ್. ಯೋಗೇಶ್, ಖಜಾಂಚಿ ರೋ. ಗವಿಗೌಡ ಸೇರಿದಂತೆ ನಿರ್ದೇಶಕರು ಮತ್ತು ಸದಸ್ಯರು ಉಪಸ್ಥಿತರಿದ್ದರು. ಕ್ಲಬ್ನ ಹಿರಿಯ ಸದಸ್ಯ ಹಾಗೂ ಸಮಾಜಸೇವಕ ರೋ. ಎಂ.ಸಿ. ರಾಜಣ್ಣ ಅವರು ಸಭೆಯ ಆತಿಥ್ಯ ವಹಿಸಿದರು.
